Mariglod movie : ಮಾರಿಗೋಲ್ಡ್ ಸಿನಿಮಾವನ್ನು ರಾಘವೇಂದ್ರ ಎಂ ನಾಯ್ಕ್ ಅವರು ನಿರ್ದೇಶಿಸಿದ್ದು,  ಈಗಾಗಲೇ ಸಿನಿಮಾದ ಟೀಸರ್ ರಿಲೀಸ್ ಆಗಿದೆ ಮತ್ತು ಸದ್ಯಕ್ಕೆ ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ.


COMMERCIAL BREAK
SCROLL TO CONTINUE READING

ಈಗಾಗಲೇ ರಿಲೀಸ್ ಆಗಿರುವ ಟೀಸರ್ ಸಿನಿಮಾ ಒಂದು ಆಕ್ಷನ್ , ಸಸ್ಪೆನ್ಸ್ ಥ್ರಿಲ್ಲರ್ ಆಗಿದೆ ಎಂದು ಸೂಚಿಸುತ್ತದೆ. ಟೀಸರ್ ರಿಲೀಸ್ ಆದ ಸಂದರ್ಭದಲ್ಲಿ ಮಾತನಾಡಿದ ಸಿನಿಮಾ ನಿರ್ದೇಶಕ ರಾಘವೇಂದ್ರ ಎಂ ನಾಯ್ಕ್ ನಾನು ಹಲವಾರು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ ಆದರೆ ಈ ಸಿನಿಮಾವನ್ನು ಆರ್ ವಿ ಕ್ರಿಯೇಷನ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ವೀರ್ ಸಮರ್ಥ್ ಅವರ ಸಂಗೀತಈ ಸಿನಿಮಾದಲ್ಲಿ ಮೂಡಿಬಂದಿದೆ. ಚಿತ್ರದ ಛಾಯಾಗ್ರಹಣವನ್ನು ಚಂದ್ರಶೇಖರ್ ನಿರ್ವಹಿಸಿದ್ದಾರೆ. 


ಇದನ್ನು ಓದಿ :ಕೂರ್ಗ್ ನಲ್ಲಿ "ಶುಭವಿವಾಹ" ಖ್ಯಾತಿಯ ಕಾವ್ಯ ಶಾಸ್ತ್ರಿ : ಫೋಟೋಸ್ ಇಲ್ಲಿವೆ


ಈ ಸಿನಿಮಾದ ಮೂಲಕ ದಿಗಂತ್ ಅವರನ್ನು ಬೇರೆ ರೀತಿಯಾಗಿ ತೋರಿಸುವ ಸಾಹಸಕ್ಕೆ ಇಳಿದಿದ್ದಾರೆ. ಸಿನಿಮಾದ ಮುಖ್ಯ ಉದ್ದೇಶ ಮನರಂಜನೆ ಆಗಿದ್ದು, ಯಾವುದೇ ರೀತಿಯ ಕಥೆ ಕಟ್ಟಿಕೊಡುವ ಉದ್ದೇಶ ನನ್ನ ಈ ಸಿನಿಮಾದಲ್ಲಿಲ್ಲ ಮತ್ತು ಈ ಸಿನಿಮಾ ಕೋವಿಡ್ ಮುಂಚೆಯೇ ಬಿಡುಗಡೆಗೆ ಸಿದ್ಧವಾಗಿತ್ತು ಆದರೆ ಕೋವಿಡ್ ನಿಂದ ತಡವಾಯಿತು. 


ಈಗಾಗಲೇ ಬಿಡುಗಡೆಗೆ ಸಿದ್ಧತೆ ನಡೆದಿತ್ತು ಆದರೆ ಈಗ ರಿಲೀಸ್ ಗೆ ರೆಡಿಯಾಗಿ ನಿಂತಿದೆ ಎಂದು ಹೇಳಿದರು. ಅಲ್ಲದೆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ದಿಗಂತ್ ಮತ್ತು ಸಂಗೀತ ಒಳ್ಳೆಯ ರೀತಿಯಲ್ಲಿ ಸಹಕರಿಸಿದ್ದಾರೆ , ಚಿತ್ರೀಕರಣವು ಸಕಲೇಶಪುರ, ಬೆಂಗಳೂರು ಹೀಗೆ ಹಲವು ಸ್ಥಳಗಳಲ್ಲಿ ನಡೆದಿದೆ ಮತ್ತು ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ ಸಹಕಾರವಿರಲಿ ಎಂದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.