ನವದೆಹಲಿ: ಇತ್ತೀಚೆಗಷ್ಟೇ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್ ಮಿರ್ಜಾ ಹಾಗೂ ಭಾರತೀಯ ತಂಡದ ಮಾಜಿ ನಾಯಕ ಮೋಹಮ್ಮದ ಅಜರುದ್ದೀನ್ ಅವರ ಪುತ್ರ ಅಸದುದ್ದೀನ್ ವಿವಾಹ ನೆರವೇರಿದೆ. ಒಂದೆಡೆ ಈ ವಿವಾಹ ಸಮಾರಂಭ ಭಾರಿ ಸುದ್ದಿಯಲ್ಲಿದ್ದರೆ ಇನ್ನೊಂದೆಡೆ ಅವರ ಈ ವಿವಾಹ ಸಮಾರಂಭದಿಂದ ಹೊರಹೊಮ್ಮಿರುವ ಹಲವು ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಕೂಡ ಆಗಿವೆ. ಆದರೆ, ಈ ಸಮಾರಂಭದಲ್ಲಿ ಸಾನಿಯಾ ಮಿರ್ಜಾ ಕುರಿತಾದ ಒಂದು ವಿಡಿಯೋ ಮಾತ್ರ ನೆಟ್ಟಿಗರ ವಿಶೇಷ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಸಾನಿಯಾ ಬಾಲಿವುಡ್ ನ ಖ್ಯಾತ ನಿರ್ದೇಶಕಿ-ನೃತ್ಯ ನಿರ್ದೇಶಕಿ ಫರಾಹ್ ಖಾನ್ ಹಾಗೂ ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ರಾಮ್ ಚರಣ್ ಅವರ ಜೊತೆ ಸೇರಿ 'ಘುಂಗರೂ' ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಸಾನಿಯಾ ಮಿರ್ಜಾ ಅವರ ಈ ವಿಡಿಯೋವನ್ನು ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೆನಿ ಹಂಚಿಕೊಂಡಿದ್ದಾರೆ.



COMMERCIAL BREAK
SCROLL TO CONTINUE READING

ಸಾನಿಯಾ ಮಿರ್ಜಾ, ಫರಾಹ್ ಖಾನ್ ಹಾಗೂ ರಾಮ್ ಚರಣ್ ಅವರ ವಿಡಿಯೋವನ್ನು ಶೇರ್ ಮಾಡಿರುವ ಉಪಾಸನಾ ಕಾಮಿನೇನಿ, 'ಪಾಪ್ಯುಲರ್ ಡಿಮಾಂಡ್ ಗಾಗಿ' ಎಂಬ ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಉಪಾಸನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋಗೆ ಸಾನಿಯಾ ಮಿರ್ಜಾ ಕೂಡ ಸ್ವಾರಸ್ಯಕರ ಟಿಪ್ಪಣಿ ಮಾಡಿದ್ದಾರೆ. ಉಪಾಸನಾ ಅವರು ಹರಿಬಿಟ್ಟಿರುವ ಈ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಸಾನಿಯಾ "ನೀವು ಈ ವಿಡಿಯೋ ಹಂಚಿಕೊಳ್ಳುವಿರಿ ಎಂಬುದು ನನಗೆ ನಂಬಿಕೆಯೇ ಬರುತ್ತಿಲ್ಲ" ಎಂದು ಬರೆದಿದ್ದಾರೆ. ಅದೇನೇ ಇದ್ದರು ವಿಡಿಯೋದಲ್ಲಿ ಸಾನಿಯಾ ಮಿರ್ಜಾ, ಫರಾಹ್ ಖಾನ್ ಹಾಗೂ ರಾಮ್ ಚರಣ್ ತೇಜಾ ಅವರು ಸ್ವಾರಸ್ಯಕರವಾಗಿ ಹೆಜ್ಜೆ ಹಾಕಿದ್ದು ಮಾತ್ರ ನೆಟ್ಟಿಗರ ಗಮನ ಸೆಳೆದಿದೆ. ಈಗಾಗಲೇ ಈ ವಿಡಿಯೋ ಅನ್ನು 5 ಲಕ್ಷಕ್ಕೂ ಅಧಿಕ ಬಾರಿ ವಿಕ್ಷೀಸಲಾಗಿದೆ.


ಡಿಸೆಂಬರ್ 12ರಂದು ಅನಮ್ ಮಿರ್ಜಾ ಹಾಗೂ ಅಸದುದ್ದೀನ್ ವಿವಾಹ ಬಂಧನಕ್ಕೆ ಒಳಗಾಗಿದ್ದರು. ಈ ವಿವಾಹ ಸಮಾರಂಭಕ್ಕೆ ಅಜರುದ್ದೀನ್ ಅವರ ಮಾಜಿ ಪತ್ನಿ ಸಂಗೀತಾ ಬಿಜಲಾನಿ ಕೂಡ ಬಂದಿದ್ದರು. ಅಜರುದ್ದೀನ್ ಅವರ ಜೊತೆಗಿನ ಸಂಗೀತಾ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಸಾನಿಯಾಗೆ ಸಂಬಂಧಿಸಿದ ಈ ವಿಡಿಯೋ ಅಬಿಮಾನಿಗಳ ಗಮನ ಸೆಳೆಯುತ್ತಿದೆ.