ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಗೆ ಸಂದೇಶ ಕಳುಹಿಸಿದ ಸಂಜನಾ ಗಲ್ರಾನಿ
ಬಹಳ ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಗಲ್ರಾನಿ ಪೋಸ್ಟ್ ವೊಂದನ್ನು ಹಾಕಿದ್ದಾರೆ. ಈ ಪೋಸ್ಟ್ ಮೂಲಕ ಅವರು ತಮ್ಮ ಫಾಲೋವರ್ಸ್ ಗೆ ಸಂದೇಶ ರವಾನಿಸಿದ್ದಾರೆ.
ಬೆಂಗಳೂರು : ಡ್ರಗ್ಸ್ ಮಫಿಯಾದಲ್ಲಿ (Drug Mafia) ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಸುಮಾರಿ 3 ತಿಂಗಳ ಕಾಲ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾನಿ ಸದ್ಯ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದಾರೆ. ಇದೀಗ ಬಹಳ ದಿನಗಳ ನಂತರ ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಪೋಸ್ಟ್ ವೊಂದನ್ನು ಹಾಕಿದ್ದಾರೆ. ಈ ಪೋಸ್ಟ್ ಮೂಲಕ ಅವರು ತಮ್ಮ ಫಾಲೋವರ್ಸ್ ಗೆ ಸಂದೇಶ ರವಾನಿಸಿದ್ದಾರೆ.
ಪರಪ್ಪನ ಅಗ್ರಹಾರದಿಂದ (Parappana Agrahara) ಬಿಡುಗಡೆಯಾದ ನಂತರ ಸಂಜನಾ ಗಲ್ರಾನಿ (Sanjana Gulrani) ತನ್ನ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ತನ್ನ ಸಹೋದರಿ ನಿಕ್ಕಿ ಗಲ್ರಾನಿಯ ಹುಟ್ಟುಹಬ್ಬಕ್ಕೆ ಶುಭಾಶಯ ಹೇಳುವ ಮೂಲಕ ಸೊಶಿಯಲ್ ಮಿಡಿಯಾದಲ್ಲಿ ಪೋಸ್ ಹಾಕಿದ್ದಾರೆ. ಈ ಮೂಲಕ ಬಹಳ ದಿನಗಳಿಂದ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದ ಸಂಜನಾ ಮತ್ತೆ ಸೊಶಿಯಲ್ ಮೀಡಿಯಾಗೆ ಮರಳಿದಂತಾಗಿದೆ.
ALSO READ : Kareena Kapoor: ಮಗುವಿನ ಸ್ವಾಗತಕ್ಕೆ ಸಜ್ಜಾದ ಕರೀನಾ ಸೈಫ್ ದಂಪತಿ
ಸಂಜನಾ ಗಲ್ರಾನಿ ಪೋಸ್ಟ್ ನಲ್ಲಿ ಏನಿತ್ತು ?
ನನಗೆ ಮೆಸೇಜ್ ಕಳುಹಿಸಿರುವ ಪ್ರತಿಯಿಬ್ಬರಿಗೂ ಧನ್ಯವಾದಗಳು. ಪ್ರತಿಯೊಬ್ಬರ ಮೆಸೇಜ್ ಅನ್ನು ನಾನು ಓದಿದ್ದೇನೆ. ನೀವು ತೋರಿಸಿದ ಕಾಳಜಿ ನೋಡಿ ನಾನು ನಿಜವಾಗಿಯೂ ಪುಣ್ಯ ಮಾಡಿದ್ದೇನೆ ಅನಿಸಿತು. ನನ್ನ ಒಂದು ಮಿಲಿಯನ್ ಫಾಲೋವರ್ಸ್ ಗೂ ಧನ್ಯವಾದ. ನನ್ನ ಆರೋಗ್ಯ ಸುಧಾರಿಸುತ್ತಿದ್ದಂತೆ ಸೊಶಿಯಲ್ ಮಿಡಿಯಾಗೆ ಮರಳುತ್ತೇನೆ. ನೀವು ತೋರಿಸಿದ ಪ್ರೀತಿಗೆ ನಿಮಗೆ ನನ್ನ ಕುಟುಂಬ ವರ್ಗಕ್ಕೆ , ಸ್ನೇಹಿತರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಸಂಜನಾ ಪೋಸ್ಟ್ ಹಾಕಿದ್ದಾರೆ. .
ಡ್ರಗ್ ಮಾಫಿಯಾದಲ್ಲಿ (Drug Mafia) ಭಾಗಿಯಾಗಿದ್ದಾರೆ ಎಂಬ ಆರೋಪದಡಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಸಿಸಿಬಿ ಪೊಲೀಸರು ಸಂಜನಾ ಅವರನ್ನು ವಶಕ್ಕೆ ಪಡೆದಿದ್ದರು. ಇದಾದ ನಂತರ ಸಂಜನಾ ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. 3 ತಿಂಗಳ ಜೈಲುವಾಸ ಅನುಭವಿಸಿದ ಸಂಜನಾ ಕೊನೆಗೂ ಹೈಕೋರ್ಟ್ ನ ( High Court) ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.