Kareena Kapoor: ಮಗುವಿನ ಸ್ವಾಗತಕ್ಕೆ ಸಜ್ಜಾದ ಕರೀನಾ ಸೈಫ್ ದಂಪತಿ

ಮಗುವಿನ ಜನನದ ಮೊದಲೇ ಹೊಸ ಮನೆಗೆ ಸ್ಥಳಾಂತರವಾಗಲು ಕರೀನಾ ಮತ್ತು ಸೈಫ್ ನಿರ್ಧರಿಸಿದ್ದಾರೆ. ಇದಕ್ಕೆ ಬೇಕಾದ  ತಯಾರಿಗಳು ಈಗಾಗಲೇ ನಡೆದಿವೆ. 

Written by - Zee Kannada News Desk | Last Updated : Jan 3, 2021, 02:51 PM IST
  • ಹೆರಿಗೆ ಸಮೀಪಿಸುತ್ತಿದ್ದಂತೆ ಹೊಸ ಮನೆಗೆ ಶಿಫ್ಟ್ ಆಗಲಿರುವ ಕರೀನಾ
  • ಮಗುವಿನ ಗಮನಕ್ಕೆ ಕರೀನಾ ಸೈಫ್ ದಂಪತಿ ತಯಾರಿ
  • ಹೊಸ ಮನೆಯ ಫೋಟೋ ಹಂಚಿಕೊಂಡ ಕರೀನಾ
Kareena Kapoor: ಮಗುವಿನ ಸ್ವಾಗತಕ್ಕೆ ಸಜ್ಜಾದ ಕರೀನಾ ಸೈಫ್ ದಂಪತಿ title=
ಹೆರಿಗೆ ಸಮೀಪಿಸುತ್ತಿದ್ದಂತೆ ಹೊಸ ಮನೆಗೆ ಶಿಫ್ಟ್ ಆಗಲಿರುವ ಕರೀನಾ(file photoe)

ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareen Kapoor Khan) ಮತ್ತು ಸೈಫ್ ಅಲಿ ಖಾನ್ (Saif Ali Khan) ಎರಡನೇ ಬಾರಿಗೆ ಮಗುವನ್ನು ನಿರೀಕ್ಷಿಸುತ್ತಿರುವುದು ಎಲ್ಲರಿಗೂ ತಿಳಿಸಿರುವ ವಿಚಾರ. ಕರೀನಾ ಕಪೂರ್ ಖಾನ್ ಹೆರಿಗೆ ದಿನಾಂಕ ಸಮೀಪಿಸುತ್ತಿದೆ. ಕರೀನಾಗೆ ಇದೇ ತಿಂಗಳಲ್ಲಿ ಹೆರಿಗೆ ದಿನಾಂಕ ನೀಡಲಾಗಿದೆ. 

ಕರೀನಾ ಕಪೂರ್  ಖಾನ್ (KAREENA KAPOOR) ಮತ್ತು ಸೈಫ್ ಅಲಿಖಾನ್ (SAIF ALI KHAN) ಈಗಾಗಕೇ ಬಹಳಷ್ಟು ಬಾರಿ ತಮ್ಮ 2ನೇ ಮಗುವಿನ ಆಗಮನದ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ಕರೀನಾ ಹೆರಿಗೆ ದಿನಾಂಕ (Delivery Date) ಸಮೀಪಿಸುತ್ತಿದ್ದು, ಇಬ್ಬರೂ ಬಹಳ ಉತ್ಸಾಹದಲ್ಲಿದ್ದಾರೆ. ತಮ್ಮ ಕುಟುಂಬಕ್ಕೆ ಆಗಮಿಸುವ ಪುಟ್ಟ ಅತಿಥಿಯ ಸ್ವಾಗತಕ್ಕೆ ಕರೀನಾ ಸೈಫ್ ದಂಪತಿ ಎಲ್ಲಾ ತಯಾರಿ ನಡೆಸಿದೆ. ಮಗುವಿನ ಜನನದ ಮೊದಲೇ ಹೊಸ ಮನೆಗೆ ಸ್ಥಳಾಂತರವಾಗಲು ಕರೀನಾ ಮತ್ತು ಸೈಫ್ ನಿರ್ಧರಿಸಿದ್ದಾರೆ. ಇದಕ್ಕೆ ಬೇಕಾದ ಲ್ಲಾ ತಯಾರಿಗಳು ಈಗಾಗಲೇ ನಡೆದಿವೆ. 

ALSO READ : Kareena Kapoor Khan ಅವರ ಬಾಲ್ಯದ ಮುದ್ದಾದ ಫೋಟೋಗಳು

ಹೊಸ ಮನೆಗೆ ಶಿಫ್ಟ್ ಆಗುವ ಬಗ್ಗೆ ಮತ್ತು ಈ ಬಗ್ಗೆ ನಡೆಯುತ್ತಿರುವ ತಯಾರಿ ಬಗ್ಗೆ ಕರಿನಾ ಕಪೂರ್ ಬಹಿರಂಗಪಡಿಸಿದ್ದಾರೆ. ಕರೀನಾ ತನ್ನ ಇನ್ ಸ್ಟಾ ಗ್ರಾಂನಲ್ಲಿ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮನೆಗೆ ನಾನು ನನ್ನ ನೆಚ್ಚಿನ ಕುಟುಂಬ ಸದಸ್ಯರೊಂದಿಗೆ ಬಂದಿದ್ದೇನೆ. ಇದು ನನ್ನ ಕನಸಿನ ಮೆಯಾಗಲಿದೆ ಎಂದು ಕರೀನಾ ಹೇಳಿದ್ದಾರೆ.  

ಹೊಸ ಮನೆಯನ್ನು ಸಜ್ಜುಗೊಳಿಸುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ಹೊಸ ಮಗುವಿನ ಆಗಮನಕ್ಕೆ ತಕ್ಕಂತೆ ಮನೆಯನ್ನು ವಿನ್ಯಾಸಗೊಳಿಸುತ್ತಿರುವುದನ್ನು ನೋಡಬಹುದು. ಈ ಕನಸಿನ ಮನೆಯಲ್ಲಿ ಸುಂದರವಾದ ಬುಕ್ ಸೆಲ್ಫ್ ಇರುವುದು ಕಂಡು ಬರುತ್ತದೆ. ಅಲ್ಲದೆ ಮನೆಯ ಒಳ ವಿನ್ಯಾಸಕ್ಕೆ ಮರವನ್ನು ಬಳಸಿರುವುದು ಕಂಡು ಬರುತ್ತದೆ. 

ಇನ್ನು ಶೀಘ್ರದಲ್ಲೇ ಕರೀನಾ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರ ತೆರೆಗೆ ಬರಲಿದೆ. ಚಿತ್ರದಲ್ಲಿ ಅಮಿರ್ ಕಾನ್ (Amir Khan) ನಾಯಕ ನಟರಾಗಿ ಮುಖ್ಯಪಾತ್ರದಲ್ಲಿದ್ದಾರೆ. ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News