Sanjay Dutt: `ಯುವರತ್ನ` ಟ್ರೈಲರ್ ನೋಡಿ ಹಾಡಿ ಹೊಗಳಿದ ಸಂಜಯ್ ದತ್..!
ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾ ಯುವರತ್ನ ಬಿಡುಗಡೆಗೆ ಭರ್ಜರಿ ತಯಾರಿ ನಡೆಸುತ್ತಿದೆ.
ಬೆಂಗಳೂರು: ಕನ್ನಡದ ಸಿನಿಮಾಗಳು ಗಡಿಗೂ ಮೀರಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಇತ್ತೀಚಿಗೆ ಸಾಕಷ್ಟು ಕನ್ನಡದ ಸಿನಿಮಾಗಳಿಗೆ ಪರಭಾಷೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸದ್ಯ ರಾಬರ್ಟ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾ ಯುವರತ್ನ ಬಿಡುಗಡೆಗೆ ಭರ್ಜರಿ ತಯಾರಿ ನಡೆಸುತ್ತಿದೆ.
ಈಗಾಗಲೇ ಸಿನಿಮಾದ ಹಾಡುಗಳು, ಟೀಸರ್ ಮತ್ತು ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇತ್ತೀಚಿಗೆ ರಿಲೀಸ್ ಆದ ಟ್ರೈಲರ್‌ಗೆ ಎಲ್ಲಾ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ. ವಿಶೇಷ ಎಂದರೆ ಪವರ್ ಸ್ಟಾರ್ ಯುವರತ್ನ ಟ್ರೈಲರ್ ನೋಡಿ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್(Sanjay Dutt) ಕೂಡ ಹಾಡಿ ಹೊಗಳಿದ್ದಾರೆ.
ಯುವರತ್ನ ಚಿತ್ರದ ಅದ್ದೂರಿ ಪ್ರಚಾರ ; ಅಪ್ಪು ನೋಡಲು ಸೇರಿದ ಜನಸಾಗರ
ಸಂಜಯ್ ದತ್ ಸಾಮಾಜಿಕ ಜಾಲತಾಣದಲ್ಲಿ ಕನ್ನಡದ ಟ್ರೈಲರ್‌ನ ಲಿಂಕ್ ಶೇರ್ ಮಾಡುವ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಅದ್ಭುತವಾಗಿದೆ. ಇಡೀ ಯುವರತ್ನ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹರಿಸಿದ್ದಾರೆ. ಸಂಜಯ್ ದತ್ ಟ್ವೀಟ್‌ಗೆ ಪವರ್ ಸ್ಟಾರ್(Puneeth Rajkumar) ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ವಿಮಾನದ ಮೂಲಕ ನಟ ಸೋನು ಸೂದ್ ಗೆ ಗೌರವ ಸೂಚಿಸಿದ ಏರ್ ಲೈನ್
ಈ ಹಿಂದೆಯೂ ಯುವರತ್ನ ಸಿನಿಮಾ(Yuvaratna Movie)ದ ಬಗ್ಗೆ ಸಂಜಯ್ ದತ್ ಟ್ವೀಟ್ ಮಾಡಿದ್ದರು. ಟೀಸರ್ ರಿಲೀಸ್ ಆದ ಸಮಯದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಇದೀಗ ಟ್ರೈಲರ್ ಶೇರ್ ಮಾಡಿರುವುದು ಕನ್ನಡ ಅಭಿಮಾನಿಗಳಿಗೆ ಖುಷಿ ತಂದಿದೆ.
Yuvarathnaa Trailer: YouTube ನಲ್ಲಿ ಧೂಳೆಬ್ಬಿಸಿದ ಪವರ್ ಫುಲ್ ಯುವರತ್ನ ಟ್ರೈಲರ್
ಬಹುನಿರೀಕ್ಷೆಯ ಯುವರತ್ನ ಏಪ್ರಿಲ್ 1ಕ್ಕೆ ತೆರೆಗೆ ಬರುತ್ತಿದೆ. ಈಗಾಗಲೇ ಸಿನಿಮಾತಂಡ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದು, ಪ್ರತೀ ಜಿಲ್ಲೆಗೆ ಭೇಟಿ ನೀಡಿ, ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾರೆ. ಬೆಳಗಾವಿ(Belagavi), ಹುಬ್ಬಳ್ಳಿ, ಕಲಬುರ್ಗಿ ಕಡೆ ಮೊದಲ ಪಯಣ ಬೆಳೆಸಿರುವ ಸಿನಿಮಾತಂಡಕ್ಕೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ.
ಪತ್ನಿ ಎದುರು Preity Zinta ಕೈ ಚುಂಬಿಸಿದ Ritiesh Deshmukh, ಮುಂದೆ ಈ ವಿಡಿಯೋ ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.