Yuvarathnaa Trailer: YouTube ನಲ್ಲಿ ಧೂಳೆಬ್ಬಿಸಿದ ಪವರ್ ಫುಲ್ ಯುವರತ್ನ ಟ್ರೈಲರ್

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೈಲರ್ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ.

Last Updated : May 26, 2021, 04:18 PM IST
  • ಯುಟ್ಯೂಬ್ ನಲ್ಲಿ ಬಿಡುಗಡೆಯಾದ ಮೂರು ಗಂಟೆಗಳಲ್ಲಿ ಎರಡು ಮಿಲಿಯನ್ ವಿಕ್ಷಣೆ ಕಾಣುವ ಮೂಲಕ ಈಗ ಟ್ರೆಂಡಿಂಗ್ ನಲ್ಲಿದೆ.
  • ಇದೇ ಎಪ್ರಿಲ್ 1 ರಂದು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಲಿದೆ ಎನ್ನುವುದಂತೂ ಪಕ್ಕಾ ಆಗಿದೆ.
Yuvarathnaa Trailer: YouTube ನಲ್ಲಿ ಧೂಳೆಬ್ಬಿಸಿದ ಪವರ್ ಫುಲ್ ಯುವರತ್ನ ಟ್ರೈಲರ್  title=
Photo Courtesy: Twitter

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೈಲರ್ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದೆ.

ಇದನ್ನೂ ಓದಿ: ಯುಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ ಯುವರತ್ನನ 'ಪವರ್ ಆಫ್ ಯೂತ್' ಸಾಂಗ್..!

ಯುಟ್ಯೂಬ್ ನಲ್ಲಿ ಬಿಡುಗಡೆಯಾದ ಮೂರು ಗಂಟೆಗಳಲ್ಲಿ ಎರಡು ಮಿಲಿಯನ್ ವಿಕ್ಷಣೆ ಕಾಣುವ ಮೂಲಕ ಈಗ ಟ್ರೆಂಡಿಂಗ್ ನಲ್ಲಿದೆ.ಈ ಚಿತ್ರದ ಟ್ರೈಲರ್ ನಲ್ಲಿ ಆರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುವ ಪುನೀತ್ ರಾಜ್ ಕುಮಾರ್  (Puneeth Rajkumar) ನಂತರ ಅದೇ ಕಾಲೇಜಿನ ಉದ್ಯೋಗಿಯಾಗಿ ಪರಿವರ್ತನೆಯಾಗುವ ಪರಿ ಕಥೆಗೆ ರೋಚಕ ತಿರುವನ್ನು ನೀಡುತ್ತದೆ.ಈ ಟ್ರೈಲರ್ ಮುಖ್ಯವಾಗಿ ಎಲ್ಲಾ ಅಂಶಗಳನ್ನು ಮೇಳೈಸಿದ ಸಿನಿಮಾ ಎನ್ನುವುದನ್ನು ಸಾರುತ್ತದೆ. ವಿಶೇಷವಾಗಿ ಕಮರ್ಸಿಯಲ್ ಟಚ್ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವುದನ್ನು ಸೂಚ್ಯವಾಗಿ ಸಾರುತ್ತದೆ.

 

ಇದನ್ನೂ ಓದಿ: ಕೊನೆಗೂ ಪುನೀತ್ ರಾಜಕುಮಾರ್ ಅಭಿನಯದ 'ಯುವರತ್ನ' ಬಿಡುಗಡೆ ದಿನಾಂಕ ಫಿಕ್ಸ್....!

ಈ ಚಿತ್ರದ ಟ್ರೈಲರ್ ನ ವಿಶೇಷತೆ ಎಂದರೆ ಡೈಲಾಗ್ ಜೊತೆಗೆ ಬರುವ ಆಕ್ಷನ್ ಸಿನ್ ಗಳು ಅಭಿಮಾನಿಗಳನ್ನು ಸಿಳ್ಳೆ ಹೊಡೆಯುವಂತೆ ಮಾಡುತ್ತವೆ.ಈಗ ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರದ ಟ್ರೈಲರ್ ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.ಇದೇ ಎಪ್ರಿಲ್ 1 ರಂದು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆಯಲಿದೆ ಎನ್ನುವುದಂತೂ  ಪಕ್ಕಾ ಆಗಿದೆ. 

ಇದನ್ನೂ ಓದಿ: WATCH:'ಊರಿಗೊಬ್ಬ ರಾಜಾ' ಎನ್ನುತಾ ಬಂದ ಯುವರತ್ನ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News