ಸನ್ನಿ ಲಿಯೋನ್ ಹಂಚಿಕೊಂಡ ಈ ವಿಡಿಯೋಗೆ ಜನ ಏನಂದ್ರು ಗೊತ್ತಾ..?
ಕಾರ್ಯ ಕ್ಷೇತ್ರಗಳಲ್ಲಿ ಯಾವುದೇ ಓರ್ವ ವ್ಯಕ್ತಿಯ ಶೋಷಣೆ ನಡೆಸಲು ಪಾವರ್ ಫುಲ್ ಹುದ್ದೆಯನ್ನು ಉಪಯೋಗಿಸಲಾಗುತ್ತಿದ್ದರೆ, ಅಂತಹ ಸಮಯದಲ್ಲಿ ಸಂಬಂಧಿತ ವ್ಯಕ್ತಿ ಸುಮ್ಮನೆ ಕುಳಿತುಕೊಳ್ಳಬಾರದು. ಮೌನ ಮುರಿದು ತಮ್ಮ ಮೇಲಾಗುತ್ತಿರುವ ಶೋಷಣೆಯ ಕುರಿತು ಮಾತನಾಡಬೇಕು ಎಂದು ಸನ್ನಿ ಸಲಹೆ ನೀಡಿದ್ದಾರೆ.
ನವದೆಹಲಿ: ಕಾರ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಿರುಕುಳದ ಕುರಿತು ಮಾತನಾಡಿರುವ ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್, ಕಾರ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಿರುಕುಳ ಎದುರಿಸುವುದು ತುಂಬಾ ಕಷ್ಟಕರವಾಗಿರುತ್ತದೆ ಎಂದಿದ್ದಾರೆ. ಆದರೆ, ಅದನ್ನು ಸಹಿಸಿಕೊಳ್ಳದೆ ಅದರ ವಿರುದ್ಧ ಧ್ವನಿ ಎತ್ತಬೇಕು ಮತ್ತು ಅನ್ಯಾಯವನ್ನು ಬಹಿರಂಗಗೊಳಿಸಬೇಕು ಎಂದು ಸನ್ನಿ ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಹಂಚಿಕೊಂಡಿರುವ ಸನ್ನಿ, "ಕಾರ್ಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಕಿರುಕುಳದ ವಿರುದ್ಧ ಧ್ವನಿ ಎತ್ತುವುದು ತುಂಬಾ ಕಠಿಣವಾಗಿರುತ್ತದೆ. ಆದರೆ, ಅದನ್ನು ಸಹಿಸಿ ಮೌನಕ್ಕೆ ಶರಣಾಗಬಾರದು. ನೀವು ನಿಮಗಾಗಿಯೇ ಓರ್ವ ಸಹಾಯಕ ಬಾಸ್ ನನ್ನು ಹುಡುಕಿಕೊಳ್ಳಬೇಕು" ಎಂದು ಸಲಹೆ ನೀಡಿದ್ದಾರೆ. ಸನ್ನಿ ಹಂಚಿಕೊಂಡಿರುವ ಈ ವಿಡಿಯೋಗೆ ಸಾಮಾಜಿಕ ಜಾಲತಾಣದ ಮೇಲೆ ಅವಳ ಅಭಿಮಾನಿಗಳು ಭೇಷ್ ಎಂದು ಹೇಳಿದ್ದು .. 'GOOD JOB' ಅಂತ ಕಾಮೆಂಟ್ ಕೂಡ ಮಾಡಿದ್ದಾರೆ.
9 ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆಗೊಳಗಾಗಿದೆ
ಕಾರ್ಯ ಕ್ಷೇತ್ರಗಳಲ್ಲಿ ಯಾವುದೇ ಓರ್ವ ವ್ಯಕ್ತಿಯ ಶೋಷಣೆ ನಡೆಸಲು ಪಾವರ್ ಫುಲ್ ಹುದ್ದೆಯನ್ನು ಉಪಯೋಗಿಸಲಾಗುತ್ತಿದ್ದರೆ, ಅಂತಹ ಸಮಯದಲ್ಲಿ ಸಂಬಂಧಿತ ವ್ಯಕ್ತಿ ಸುಮ್ಮನೆ ಕುಳಿತುಕೊಳ್ಳಬಾರದು. ಮೌನ ಮುರಿದು ತಮ್ಮ ಮೇಲಾಗುತ್ತಿರುವ ಶೋಷಣೆಯ ಕುರಿತು ಮಾತನಾಡಬೇಕು ಎಂಬ ವಿಷಯದ ಮೇಲೆ ಈ ವಿಡಿಯೋ ಬೆಳಕು ಚೆಲ್ಲುತ್ತದೆ. ಸನ್ನಿ ಲಿಯೋನ್ ಅವರಿಂದ ಶೇರ್ ಮಾಡಲಾಗಿರುವ ಈ ವಿಡಿಯೋವನ್ನು ಕಳೆದ 24 ಗಂಟೆಗಳಲ್ಲಿ 9 ಲಕ್ಷಕ್ಕೂ ಅಧಿಕ ಬಾರಿಗೆ ವಿಕ್ಷೀಸಲಾಗಿದೆ. ತಮ್ಮ ಮುಂಬರುವ ವೆಬ್ ಸಿರೀಸ್ 'ರಾಗಿಣಿ MMS ರಿಟರ್ನ್ಸ್ ಸೀಜನ್ 2'ಗೆ ಸಂಬಂಧಿಸಿದಂತೆ ಸನ್ನಿ ಈ ಸಂದೇಶ ನೀಡಿದ್ದಾರೆ. ಹಾರರ್ ಕಥಾ ಹಂದರ ಹೊಂದಿರುವ ಈ ವೆಬ್ ಸೀರಿಜ್, ಅನ್ಯೋನ್ಯತೆಯ ವೇಳೆ ಒಪ್ಪಿಗೆಯ ಮಹತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಈ ವೆಬ್ ಸೀರಿಜ್ ನಲ್ಲಿ ಸನ್ನಿ ಓರ್ವ ಪ್ಯಾರಾನಾರ್ಮಲ್ ಎಕ್ಸ್ಪರ್ಟ್ ಭೂಮಿಕೆಯಲ್ಲಿ ಕಂಡುಬಂದಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಗೊಳಿಸಲಾಗಿರುವ ಈ ವೆಬ್ ಸಿರೀಜ್ ನ ಟ್ರೈಲರ್ ನಲ್ಲಿ ಲವ್, ಆಕ್ಷನ್, ರೋಮಾನ್ಸ್ ಹಾಗೂ ಹಾರರ್ ಎಲ್ಲವೂ ನೋಡಲು ಸಿಗುತ್ತಿದೆ. ಈ ಟ್ರೈಲರ್ ನಲ್ಲಿ ಸನ್ನಿ ಜೊತೆಗೆ ಆರತಿ ಖೇತ್ರಪಾಲ್, ಋಷಿಕಾ ನಾಗ್, ಆಧ್ಯಾ ಗುಪ್ತಾ, ವಿಕ್ರಂ ಸಿಂಗ್ ರಾಥೌಡ, ವರುಣ್ ಸೂದ್ ಹಾಗೂ ದಿವ್ಯಾ ಅಗರವಾಲ್ ಸಮೇತ ಇತರ ಕಲಾವಿದರ ದಂಡೆ ಕಂಡುಬಂದಿದೆ. ಟ್ರೈಲರ್ ಆರಂಭದಲ್ಲಿ ಸನ್ನಿ "ತಾವು ವಿಕ್ಟೋರಿಯಾ ವಿಲ್ಲಾದ ಎಲ್ಲಾ ರಹಸ್ಯಗಳನ್ನು ಅರಿತಿರುವುದಾಗಿ" ಹೇಳಿಕೆ ನೀಡುವುದು ಕಂಡುಬಂದಿದೆ. ಆ ಬಳಿಕ ಹಾರರ್ ಆಟ ಆರಂಭಗೊಳ್ಳಲಿದ್ದು, ಎಲ್ಲರನ್ನು ತನ್ನ ತೆಕ್ಕೆಗೆ ಬಾಚಿಕೊಳ್ಳುತ್ತದೆ.