The Vaccine War : ದಿ ಡಿವೈನ್‌ ಬ್ಲಾಕ್ಬಸ್ಟರ್‌ ಕಾಂತಾರ ಸಿನಿಮಾದಲ್ಲಿ ನಟಿಸಿ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ಸಿಂಗಾರ ಸಿರಿ ನಟಿ ಸಪ್ತಮಿ ಗೌಡ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ʼದಿ ಕಾಶ್ಮೀರಿ ಫೈಲ್ಸ್‌ʼ ನಂತರ ಗ್ರೇಟ್‌ ಚಿತ್ರಗಳನ್ನು ನಿರ್ದೇಶಿಸಿ ದೇಶದ ಜನರ ಗಮನ ಸೆಳೆದಿದ್ದ ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ʼದಿ ವ್ಯಾಕ್ಸಿನ್ ವಾರ್ʼ ಸಿನಿಮಾದಲ್ಲಿ ಸಪ್ತಮಿ ನಟಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಇಂಡಿಯನ್‌ ಸಿನಿಮಾ ಇಂಡಸ್ಟ್ರೀಯಲ್ಲಿ ಕನ್ನಡ ಮೂಲದ ನಟಿ ನಟಿಯರಿಗೆ ಸಖತ್‌ ಡಿಮ್ಯಾಂಡ್‌ ಕ್ರಿಯೇಟ್‌ ಆಗಿದೆ. ಬಾಲಿವುಡ್‌ನಲ್ಲಿ ದೀಪಿಕಾ ಪಡುಕೋಣೆಯಿಂದ ಹಿಡಿದು ರಶ್ಮಿಕಾ ಮಂದಣ್ಣವರೆಗೂ ಬೇಡಿಯ ನಟಿಯರ ಸಾಲಿನಲ್ಲಿ ಕನ್ನಡತಿಯರು ಮುಂದಿದ್ದಾರೆ. ಇದೀಗ ಇವರ ಸಾಲಿಗೆ ಕಾಂತಾರ ಫೇಮ್‌ ಸಪ್ತಮಿಗೌಡ ಎಂಟ್ರಿ ಕೊಟ್ಟಿದ್ದು, ಬಹುನಿರೀಕ್ಷಿತ ವ್ಯಾಕ್ಸಿನ್‌ ವಾರ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನುವುದು ಕನ್ಫರ್ಮ್‌ ಆಗಿದೆ.


ಇದನ್ನೂ ಓದಿ: ಬಚ್ಚನ್ ಕುಟುಂಬದಲ್ಲಿ ಮಗಳು ಮತ್ತು ಸೊಸೆ ಮಧ್ಯೆ ಮನಸ್ತಾಪ ! ಬಿಗ್ ಬಿ ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ?


ʼದಿ ವ್ಯಾಕ್ಸಿನ್ ವಾರ್‌ʼನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಪಲ್ಲವಿ ಜೋಶಿ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ, ಈ ಚಿತ್ರದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ದಿವ್ಯಾ ಸೇಠ್ ನಟಿಸುತ್ತಿದ್ದಾರೆ. ರಿಷಬ್ ಶೆಟ್ಟಿಯ ಕಾಂತಾರ ಚಿತ್ರದ ಅದ್ಭುತ ಯಶಸ್ಸಿನ ನಂತರ ಮನೆಮಾತಾಗಿರುವ ಸಪ್ತಮಿ ಗೌಡ ಅವರಿಗೆ ದೊಡ್ಡ ಬಾಲಿವುಡ್ ಬ್ರೇಕ್ ಸಿಕ್ಕಂತಾಗಿದೆ. 


ಈ ಕುರಿತು ಅಪ್‌ಡೇಟ್ ನೀಡಿರುವ ವಿವೇಕ್, ಸಪ್ತಮಿಗೌಡ ದಿ ವಾಕ್ಸಿನ್‌ ವಾರ್‌ತಂಡವನ್ನು ಸೇರಿಕೊಂಡಿದ್ದಾರೆ. ಈಗಾಗಲೇ ಲಕ್ನೋ ಶೂಟಿಂಗ್‌ ಶೆಡ್ಯೂಲ್‌ ಮುಗಿಸಿದ್ದೇವೆ, ಹೈದರಾಬಾದ್ ಚಿತ್ರಿಕರಣದವೇಳೆ ಸಪ್ತಮಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸಿನಿಮಾದ ಶೂಟಿಂಗ್‌ ಒಂದೆರಡು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಮೂಲಕ ಮತ್ತೊಬ್ಬ ಕನ್ನಡದ ಚೆಲುವೆ ಬಾಲಿವುಡ್‌ನಲ್ಲಿ ಮಿಂಚಲು ರೆಡಿಯಾದಂತಿದೆ.


ಇದನ್ನೂ ಓದಿ: ರೈತರಿಗಾಗಿ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗುತ್ತಿದೆ 'ಪ್ರಜಾರಾಜ್ಯ'ದ ಸುಂದರ ರೈತ ಗೀತೆ


ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರ ನಿರ್ಮಾಪಕಿ ಪಲ್ಲವಿ ಜೋಷಿ ಅವರು ಮಾತನಾಡಿ, ʼನಾನು ಕಾಂತಾರ ಸಿನಿಮಾ ನೋಡಿದೆ, ಲೀಲಾ ಪಾತ್ರದಲ್ಲಿ ಅವರ ಅಭಿನಯವನ್ನು ಇಷ್ಟಪಟ್ಟೆ. ನಮ್ಮ ಚಿತ್ರತಂಡಕ್ಕೆ ಅವರನ್ನು ಸೇರಿಸಕೊಳ್ಳಲು ಬಯಸುತ್ತೇನೆ. ಈ ಕುರಿತು ಸಪ್ತಮಿಗೆ ಕರೆ ಮಾಡಿ, ಆಕ್ಟ್‌ ಮಾಡುವಂತೆ ಕೇಳಿಕೊಂಡಾಗ ಅವರು ಒಪ್ಪಿಕೊಂಡರು. ಅವರು ʼವ್ಯಾಕ್ಸಿನ್ ವಾರ್ʼ ತಂಡವನ್ನು ಸೇರಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗಿದೆ ಅಂತ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.