ಬಚ್ಚನ್ ಕುಟುಂಬದಲ್ಲಿ ಮಗಳು ಮತ್ತು ಸೊಸೆ ಮಧ್ಯೆ ಮನಸ್ತಾಪ ! ಬಿಗ್ ಬಿ ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ?

ಅಮಿತಾಬ್ ಬಚ್ಚನ್ ಇತ್ತೀಚೆಗೆಷ್ಟೇ ತಮ್ಮ ಆಸ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ.  ಬಿಗ್ ಬಿ ತನ್ನ ಆಸ್ತಿಯನ್ನು ಹಂಚಿಕೆ ಮಾಡಿದ್ದಾರೆ ಎನ್ನುವ ಮಾತುಗಳು ಕೂಡಾ ಕೇಳಿ ಬಂದಿವೆ. 

Written by - Ranjitha R K | Last Updated : Jan 13, 2023, 12:59 PM IST
  • ಅಮಿತಾಬ್ ಬಚ್ಚನ್ ಒಟ್ಟು ಆಸ್ತಿ ಎಷ್ಟು ?
  • ಅಮಿತಾಬ್ ಬಚ್ಚನ್ ಆಸ್ತಿ ಹಂಚಿಕೆ!
  • ಐಶ್ವರ್ಯಾ ಬಗ್ಗೆ ಶ್ವೇತಾ ಬಚ್ಚನ್ ಹೇಳಿದ್ದೇನು ?
ಬಚ್ಚನ್ ಕುಟುಂಬದಲ್ಲಿ ಮಗಳು ಮತ್ತು ಸೊಸೆ ಮಧ್ಯೆ ಮನಸ್ತಾಪ ! ಬಿಗ್ ಬಿ ಆಸ್ತಿಯಲ್ಲಿ ಯಾರಿಗೆ ಎಷ್ಟು ಪಾಲು ?  title=

ಮುಂಬಯಿ : ಅಮಿತಾಬ್ ಬಚ್ಚನ್ ಒಗ್ಗಟ್ಟಿಗೆ ಹೆಸರುವಾಸಿಯಾಗಿದೆ. ಯಾವುದೇ ಕಾರ್ಯಕ್ರಮವಿರಲಿ, ಸಮಾರಂಭವಿರಲಿ ಅಲ್ಲಿ ಇಡೀ ಕುಟುಂಬವೇ ಕಾಣ ಸಿಗುತ್ತದೆ. ಆದರೆ ಅಮಿತಾಬ್ ಬಚ್ಚನ್ ಪುತ್ರಿ ಶ್ವೇತಾ ಬಚ್ಚನ್ ಮತ್ತು ಸೊಸೆ ಐಶ್ವರ್ಯಾ ರೈ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.  ಈ ಬಗ್ಗೆಐಶ್ವರ್ಯಾ ರೈ  ಆಗಲಿ  ಶ್ವೇತಾ ಬಚ್ಚನ್  ಆಗಲಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಆದರೂ ಇವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನುತ್ತವೆ ಮೂಲಗಳು.  ಈ ಮಧ್ಯೆ ಬಿಗ್ ಬಿ ತನ್ನ ಆಸ್ತಿಯನ್ನು ಹಂಚಿಕೆ ಮಾಡಿದ್ದಾರೆ ಎನ್ನುವ ಮಾತುಗಳು ಕೂಡಾ ಕೇಳಿ ಬಂದಿವೆ. 

ಅಮಿತಾಬ್ ಬಚ್ಚನ್ ಆಸ್ತಿ ಹಂಚಿಕೆ! :
ಅಮಿತಾಬ್ ಬಚ್ಚನ್ ಇತ್ತೀಚೆಗೆಷ್ಟೇ ತಮ್ಮ ಆಸ್ತಿಯ ಬಗ್ಗೆ ಘೋಷಣೆ ಮಾಡಿದ್ದಾರೆ. ಮಾತ್ರವಲ್ಲ ತನ್ನ ಆಸ್ತಿಯ ಮೇಲೆ ಕೇವಲ ಪುತ್ರ ಅಭಿಷೇಕ್ ಗೆ ಮಾತ್ರ ಹಕ್ಕಿರುವುದಲ್ಲ ಎನ್ನುವುದನ್ನು ಕೂಡಾ ಸ್ಪಷ್ಟಪಡಿಸಿದ್ದಾರೆ. ಅಮಿತಾಬ್ ಬಚ್ಚನ್ ಆಸ್ತಿಯನ್ನು ಎರಡು ಭಾಗಗಳಾಗಿ ಹಂಚಿಕೆ ಮಾಡಲಾಗಿದೆ.  ಈ ಆಸ್ತಿ ಪುತ್ರ ಅಭಿಷೇಕ್  ಮತ್ತು ಪುತ್ರಿ ಶ್ವೇತಾ ಬಚ್ಚನ್ ಗೆ ಸೇರುತ್ತದೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : ರೈತರಿಗಾಗಿ ಸಂಕ್ರಾಂತಿ ಹಬ್ಬದಂದು ರಿಲೀಸ್ ಆಗುತ್ತಿದೆ 'ಪ್ರಜಾರಾಜ್ಯ'ದ ಸುಂದರ ರೈತ ಗೀತೆ

ಐಶ್ವರ್ಯಾ ಬಗ್ಗೆ ಶ್ವೇತಾ ಬಚ್ಚನ್ ಹೇಳಿದ್ದೇನು ? :
ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಶೋನಲ್ಲಿ ಶ್ವೇತಾ ಬಚ್ಚನ್  ಐಶ್ವರ್ಯ ರೈ ಬಗ್ಗೆ ಕೆಲವೊಂದು ವಿಷಯಗಳನ್ನು ಉಲ್ಲೇಖಿಸಿದ್ದರು.   ಐಶ್ವರ್ಯ ಅವರ ಯಾವ ವಿಷಯ ನಿಮಗೆ ಇಷ್ಟವಾಗುವುದಿಲ್ಲ ಎನ್ನುವ ಪ್ರಶ್ನೆಗೆ ಶ್ವೇತಾ ' ಐಶ್ವರ್ಯ ಸಮಯಕ್ಕೆ ಸರಿಯಾಗಿ  ಕಾಲ್ ಬ್ಯಾಕ್ ಮಾಡುವುದಿಲ್ಲ.  ಅವರ ಟೈಮ್ ಮ್ಯಾನೇಜ್ ಮೆಂಟ್ ನನಗೆ ಇಷ್ಟವಿಲ್ಲ ಎಂದಿದ್ದರು. ಇನ್ನೊಂದೆಡೆ ಸಮಾರಂಭವೊಂದರಲ್ಲಿ ಐಶ್ವರ್ಯ ಮತ್ತು ಶ್ವೇತಾ ಎದುರು ಬದುರಾದರೂ ಒಬ್ಬರನ್ನೊಬ್ಬರು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿರುವುದು ಕಂಡು ಬಂದಿತ್ತು. ಇದಾದ ಬಳಿಕ ಅತ್ತಿಗೆ ನಾದಿನಿಯ ಸಂಬಂಧ ಅಷ್ಟೊಂದು ಸರಿಯಾಗಿಲ್ಲ ಎನ್ನುವ ಮಾತುಗಳೇ ಎಲ್ಲೆಡೆ ಕೇಳಿ ಬಂದಿತ್ತು. 

ಅಮಿತಾಬ್ ಬಚ್ಚನ್  ಆಸ್ತಿ : 
ಮಾಧ್ಯಮ ವರದಿಗಳ ಪ್ರಕಾರ, ಅಮಿತಾಬ್ ಬಚ್ಚನ್ ಒಟ್ಟು ಆಸ್ತಿ 2800 ಕೋಟಿ ರೂ. ಅಮಿತಾಬ್  ಬಚ್ಚನ್ ಆಸ್ತಿಯನ್ನು ಎರಡು ಭಾಗಗಳಾಗಿ ಮಾಡಿದ್ದು, ಪುತ್ರಿ  ಶ್ವೇತಾ ಮತ್ತು ಪುತ್ರ ಅಭಿಷೇಕ್ ಗೆ ಸಮ ಪಾಲು ನೀಡಿದ್ದಾರೆ. ಅಂದರೆ ,ಇಬ್ಬರಿಗೂ   1400-1400 ಕೋಟಿ ಯಂತೆ ಹಂಚಿಕೆ ಮಾಡಲಾಗಿದೆ. ಅಮಿತಾಬ್ ಬಚ್ಚನ್ ತಮ್ಮ ಮಗ ಮತ್ತು ಮಗಳ ಮಧ್ಯೆ ಯಾವ ಕಾರಣಕ್ಕೂ ಭೇದ ಮಾಡಿಲ್ಲ.  

ಇದನ್ನೂ ಓದಿ Pushpa 2 ಸಿನಿಮಾದಲ್ಲಿ ರಶ್ಮಿಕಾ ಬದಲು ಸಾಯಿ ಪಲ್ಲವಿ? ಕೊನೆಗೂ ಮೌನ ಮುರಿದ ಕಿರಿಕ್‌ ಬೆಡಗಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News