ನವದೆಹಲಿ: ಬಾಲಿವುಡ್‌ನ ಎಲ್ಲ ತಾರೆಯರು  ಲಾಕ್‌ಡೌನ್‌ನಲ್ಲಿ ತಮ್ಮ ವಿವಿಧ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.  ಏತನ್ಮಧ್ಯೆ ನಟಿ ಸಾರಾ ಅಲಿ ಖಾನ್ ಹಂಚಿಕೊಂಡಿರುವ ಫೋಟೋ ಒಂದು ಆಕೆ ಈಗ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡಿದ್ದಾರೆಯೇ ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವಾಸ್ತವವಾಗಿ ನಟಿ ಸಾರಾ ಅಲಿ ಖಾನ್ ಗೈಡ್ ಆಗಿ ಭಾರತದಾದ್ಯಂತದ ತನ್ನ ಪ್ರಯಾಣದ ಒಂದು ನೋಟವನ್ನು ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ವೀಡಿಯೊದಲ್ಲಿ ಸಾರಾ ಅಲಿ ಖಾನ್ (Sara Ali Khan) ರಾಜಸ್ಥಾನ, ಗುಜರಾತ್ ಮತ್ತು ತೆಲಂಗಾಣದ ಪ್ರಮುಖ ತಾಣಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.


 

 

 

 



 

 

 

 

 

 

 

 

 

Episode 1: Bharat ‘State’ of Mind 🇮🇳 🌈☀️ Watch as IGTV video 🙌🏻


A post shared by Sara Ali Khan (@saraalikhan95) on


ಈ ಲಾಕ್‌ಡೌನ್ ಆವೃತ್ತಿಯ ಮೊದಲ ಸಂಚಿಕೆಯನ್ನು ಸಾರಾ ಹಂಚಿಕೊಂಡಿದ್ದಾರೆ. "ಎಪಿಸೋಡ್ 1: ಇಂಡಿಯಾ 'ಸ್ಟೇಟ್' ಆಫ್ ಮೈಂಡ್" ಎಂದು ಅವರು ವೀಡಿಯೊದಲ್ಲಿ ಬರೆದಿದ್ದಾರೆ.


ಸಾರಾ ಅಲಿ ಖಾನ್ ಅವರ ಸಿನಿಮಾಗಳ ಬಗ್ಗೆ ಮಾತನಾಡುವುದಾದರೆ ಸಾರಾ ನಟ ವರುಣ್ ಧವನ್ ಅವರೊಂದಿಗೆ 1995ರ ಚಲನಚಿತ್ರ 'ಕೂಲಿ ನಂ .1' ಚಿತ್ರದ ರಿಮೇಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸ ಆವೃತ್ತಿಯನ್ನು ಡೇವಿಡ್ ಧವನ್ ನಿರ್ದೇಶಿಸಿದ್ದಾರೆ, ಈ ಹಿಂದೆ ಅದೇ ಹೆಸರಿನ ಮೂಲ ಚಿತ್ರವನ್ನು ನಿರ್ದೇಶಿಸಿದ್ದು ಗೋವಿಂದ ಮತ್ತು ಕರಿಷ್ಮಾ ಕಪೂರ್ ನಟಿಸಿದ್ದಾರೆ.