ಬೆಂಗಳೂರು: ದೇಶದಲ್ಲಿ ಏಕದಿನ ವಿಶ್ವಕಪ್​​ ಮೇನಿಯಾ ಶುರುವಾಗಿದೆ. ಎಲ್ಲಾ ವಯಸ್ಕರು ವಿಶ್ವಕಪ್​​​​ನ ಗುಂಗಲ್ಲಿ ಮುಳುಗಿದ್ದಾರೆ. ಈ ಮಧ್ಯೆಯೇ ನಮ್ಮ ಕನ್ನಡದ ಪ್ರಸಿದ್ಧ ಮನರಂಜನಾ ಚಾನಲ್​​ಗಳಾದ Zee ಕನ್ನಡ ಮತ್ತು ಕಲರ್ಸ್​​ ಕನ್ನಡದಲ್ಲಿ 2 ಜನಪ್ರಿಯ ಕಾರ್ಯಕ್ರಮಗಳು ಮತ್ತೆ ಪ್ರಾರಂಭವಾಗುತ್ತಿವೆ. ಹೌದು, ಅಕ್ಟೋಬರ್​ 8ರಿಂದ ಜೀ ಕನ್ನಡ ವಾಹಿನಿಯಲ್ಲಿ "ಸರಿಗಮಪ" 20ನೇ ಸೀಸನ್​ ಮತ್ತು ಕಲರ್ಸ್​​ ಕನ್ನಡದಲ್ಲಿ "ಬಿಗ್​​ಬಾಸ್​​" ​​10ನೇ ಸೀಸನ್ ಆರಂಭವಾಗುತ್ತಿದೆ. 


COMMERCIAL BREAK
SCROLL TO CONTINUE READING

ಈ 2 ವಾಹಿನಿಗಳು ಒಂದೇ ದಿನ ತಮ್ಮ ಆವೃತ್ತಿಗಳನ್ನು ಅದ್ಧೂರಿಯಾಗಿ ಪ್ರಾರಂಭ ಮಾಡುತ್ತಿರುವುದು ವಿಶೇಷವಾಗಿದೆ. ಇದರಿಂದ ಪ್ರೇಕ್ಷಕರಿಗೆ ಹೆಚ್ಚಿನ ಮನರಂಜನೆ ಸಿಗಲಿದೆ. ಕಾರ್ಯಕ್ರಮಗಳು ವಿಭಿನ್ನ ಥೀಮ್​​ಗಳನ್ನು ಹೊಂದಿದ್ದರೂ ಪ್ರೇಕ್ಷಕರನ್ನು ಸೆಳೆಯಲು ಮಾತ್ರ ಹಿಂದೆ ಬೀಳವು. ಈಗಾಗಲೇ ನೀವು ಪ್ರೋಮೋಗಳಲ್ಲಿ ನೋಡಿರುವ ಹಾಗೆ ಈ 2 ಕಾರ್ಯಕ್ರಮಗಳಲ್ಲಿ ಹಲವು ವಿಶೇಷತೆಗಳು ನಿಮಗೆ ಕಾಣಸಿಗಲಿವೆ. ಕಲರ್ಸ್ ಕನ್ನಡದಲ್ಲಿ ಪ್ರಸಾವಾಗುತ್ತಿರುವ ಬಿಗ್‍ಬಾಸ್ ಶೋನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್​​ಗಳು ಬಿಗ್​ಬಾಸ್​ ​ಸ್ಪರ್ಧಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: ಶಿವಣ್ಣ, ಪ್ರಕಾಶ್‌ ರಾಜ್‌ ಕ್ಷಮೆಯನ್ನು ಎಂದಿಗೂ ನಾನು ಸ್ವೀಕರಿಸುವುದಿಲ್ಲ : ನಟ ಸಿದ್ಧಾರ್ಥ್‌


ಇನ್ನೂ ಕುತೂಹಲ ಮೂಡಿಸುವ ಅಂಶವೆಂದರೇ, ಹೊಸ ಜಾಗದಲ್ಲಿ ಸಿದ್ಧವಾಗಿರುವ ಬಿಗ್‍ಬಾಸ್ ಹೌಸ್​​ಗೆ "ಚಾರ್ಲಿ 777" ಚಿತ್ರ ಖ್ಯಾತಿಯ ಚಾರ್ಲಿ (ಶ್ವಾನ) ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಡಲಿದ್ದಾಳೆ. ಚಾರ್ಲಿ ಜೊತೆ ಮತ್ತೆ ಇನ್ನು ಯಾರು ಯಾರು ಬಿಗ್‍ಬಾಸ್ ಮನೆಗೆ ಪ್ರವೇಶ ಮಾಡಲಿದ್ದಾರೆ ಎಂದು ಶನಿವಾರ ಸಂಜೆ 7:30ರ ನಂತರವಷ್ಟೇ ಗೊತ್ತಾಗಲಿದೆ.


ಅದೇ ರೀತಿ ಕನ್ನಡದ ಹೆಸರಾಂತ ಮನರಂಜನಾ ಕಾರ್ಯಕ್ರಮ ಸರಿಗಮಪ ಸೀಸನ್ 20 ಕೂಡ ಕೇಳುಗರ ಕಿವಿ ತಂಪು ಮಾಡದೇ ಇರದು. ಈ ಆವೃತಿಯ ವಿಶೇಷವೇನೆಂದರೆ ಅನಿವಾಸಿ ಕನ್ನಡಿಗರಿಗೂ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಅಮೆರಿಕ ಮತ್ತು ಇಂಗ್ಲೆಂಡ್​ನಂತಹ ದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು ಸೀಸನ್​ 20ರಲ್ಲಿ ಭಾಗವಹಿಸಲಿದ್ದಾರೆ. ಅನಿವಾಸಿ ಕನ್ನಡಿಗರಿಗೆ ಆನ್ಲೈನ್ ಮೂಲಕ ಆಡಿಷನ್ ನಡೆಸಿ ಆಯ್ಕೆ ಮಾಡಲಾಗಿದೆ.


ಹಿಂದಿನಂತೆ ಈ ಬಾರಿಯೂ ಕೂಡ ಮೆಗಾ ಆಡಿಷನ್​​​ ನಡೆಯಲಿದೆ. ಇದೇ ಶನಿವಾರದಿಂದ ಮೆಗಾ ಆಡಿಷನ್​ ಆರಂಭವಾಗಲಿದ್ದು, ಆಯ್ದ 30 ಜನರನ್ನು ಮತ್ತಷ್ಟು ಸೋಸಿ, ಅಳೆದು-ತೂಗಿ ಮುಖ್ಯ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಇನ್ನು ಈ ಮೆಗಾ ಆಡಿಷನ್‍​​ನಲ್ಲಿ ಯಾವ ಯಾವ ಸ್ಪರ್ಧಿಗಳು ಎಂಬುವುದು ಶನಿವಾರ ಸಂಜೆ 6ಗಂಟೆ ಬಳಿಕವೇ ಗೊತ್ತಾಗಲಿದ್ದು, ಇದನ್ನು ವಿಶ್ವ ಕನ್ನಡಿಗರ ಸಂಗೀತ ಸಂಭ್ರಮವೆಂದು ಕರೆಯಬಹುದು. ಒಟ್ಟಾರೆ ಶನಿವಾರದಿಂದ ಕನ್ನಡದ ಹೆಸರಾಂತ ವಾಹಿನಿಗಳಲ್ಲಿ ಜನರ ಮನೆ ಮಾತಾಗಿರುವ 2 ಅದ್ಭುತ ರಿಯಾಲಿಟಿ ಶೋಗಳು ತೆರೆಮೇಲೆ ಮತ್ತೆ ಬರುತ್ತಿವೆ. ಕನ್ನಡದ ಸಂಗೀತ ಪ್ರಿಯರು ಹಾಗೂ ಬಿಗ್‍ಬಾಸ್ ಪ್ರೇಮಿಗಳಿಗೆ ಮನರಂಜನಾ ಊಟ ಬಡಿಸಲು ಎರಡು ಜನಪ್ರಿಯ ಕನ್ನಡ ವಾಹಿನಿಗಳು ಸಜ್ಜಾಗಿವೆ.


ಇದನ್ನೂ ಓದಿ: ಬಾಲಿವುಡ್ ನಟಿ ಕಂಗನಾ ರಣಾವತ್ ಮದುವೆ..! ‘ರಾಣಿ’ಯ ವರಿಸುವ ವರನ್ಯಾರು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.