Saryu roy on Bigg boss : ಇತ್ತೀಚಿಗೆ ಬಿಗ್‌ಬಾಸ್‌ ಕಾರ್ಯಕ್ರಮದ ಮೇಲೆ ಅದರ ಮಾಜಿ ಸ್ಪರ್ಧೆಗಳೇ ನಕಾರಾತ್ಮಕವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್‌ ಫೇಕ್‌ ಹಾಗೆ ಹೀಗೆ ಅಂತ ಆರೋಪ ಮಾಡಿದ್ದರು. ಆದ್ರೂ ಜನರು ಮಾತ್ರ ತುಂಬಾ ಕುತೂಹಲದಿಂದ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡ್ತಾರೆ. ಎಲ್ಲವೂ ಪೂರ್ವ ನಿಯೋಜಿತವಾಗಿರುತ್ತೆ ಅಂತ ಹೇಳಲಾದರೂ ಸಹ ಈ ಶೋ ಉತ್ತಮ ವೀಕ್ಷಣೆ ಪಡೆಯುತ್ತದೆ.


COMMERCIAL BREAK
SCROLL TO CONTINUE READING

ಹೌದು.. ಬಿಗ್‌ಬಾಸ್‌ ಬಿಗ್‌ಬಾಸ್‌.. ಹೌದು ಸ್ವಾಮಿ.. ಅಂತ ತೆರೆ ಮೇಲೆ ಸುದೀಪ್‌ ಮತ್ತು ಸ್ಪರ್ಧಾಳುಗಳು ಬಂದ್ರೆ ಮುಗಿತು ಜನರು ಊಟ ಮಾಡೋದನ್ನೂ ಬಿಟ್ಟು, ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ. ಎಷ್ಟೋ ಸರಿ ಅದರ ಸ್ಪರ್ಧಿಗಳೇ ಮನೆಯಿಂದ ಹೊರಬಂದು ಇದು ಫೇಕ್‌ ಶೋ ಅಂತ ಹೇಳಿದ್ರೂ ಸಹ ಜನ ಮಾತ್ರ ತುಂಬಾ ಇಂಟ್ರಸ್ಟಿಂಗ್‌ನಿಂದ ನೋಡುತ್ತಾರೆ.


ಇದನ್ನೂ ಓದಿ: ಶಿವಣ್ಣ-ರಜಿನಿ ʼಜೈಲರ್ʼ ಆಡಿಯೋ ರಿಲೀಸ್‌ ಇವೆಂಟ್‌ಗೆ ʼಪಾಸ್‌ʼ ಬೇಕಾ..! ತಕ್ಷಣ ಹೀಗೆ ಮಾಡಿ


ಸಧ್ಯ ತೆಲುಗು ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ನಟಿ ಸರಯು ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತೆಲುಗು ಬಿಗ್ ಬಾಸ್ ಸೀಸನ್ 5 ಹಾಗೂ ಬಿಗ್ ಬಾಸ್ OTT ಸ್ಪರ್ಧಿಯಾಗಿ ಸರಯು 2 ಬಾರಿ ಬಿಗ್ ಬಾಸ್ ಮನೆಗೆ ಹೋಗಿದ್ದರು.


ಬಿಗ್ ಬಾಸ್‌ಗೆ ಹೋಗುವವರ ಜೊತೆ ಮೊದಲೇ ಒಪ್ಪಂದ ಆಗಿರುತ್ತದೆ. ಮನೆಯೊಳಗೆ ಅಹಿತಕರ ಘಟನೆ ನಡೆಯದಂತೆ ವರ್ತಿಸಬೇಕು. ಶೋನಿಂದ ಹೊರಹೋದ ಮೇಲೆ ಅಲ್ಲಿ ನಡೆಯುವ ಘಟನೆಗಳ ಬಗ್ಗೆ ಎಲ್ಲಿಯೂ ಮಾತನಾಡಬೇಕು ಎಂದು ನಿಯಮಗಳಿರುತ್ತದೆ. ಇದೀಗ ಮಾಜಿ ಬಿಗ್‌ಬಾಸ್ ಸ್ಪರ್ಧಿ ಸರಯು ಧೈರ್ಯ ಮಾಡಿ ಬಿಗ್ ಬಾಸ್ ಸೀಕ್ರೆಟ್ ರಿವೀಲ್‌ ಮಾಡಿದ್ದಾರೆ.


ಇದನ್ನೂ ಓದಿ:'ಬೇಬಿ' ವೈಷ್ಣವಿಗೆ ಬಿಗ್‌ ಆಫರ್‌..! ಪ್ರಸಿದ್ಧ ಸಿನಿ ನಿರ್ಮಾಣ ಕಂಪನಿಯೊಂದಿಗೆ ಒಪ್ಪಂದ..?


ಬಿಗ್‌ಬಾಸ್‌ಗೆ ಸ್ಪರ್ಧಿಯಾಗಿ ಹೋದರೆ ಆಯೋಜಕರು ಹಣ ಕೊಡೋದಲ್ಲ, ಕೆಲವೊಮ್ಮೆ ಹಣ ಕೊಟ್ಟು ಹೋಗುವವರು ಇದ್ದಾರೆ. ಅಂತಹವರಿಗೆ ಮನೆಯೊಳಗೆ ಬಹಳ ಬೆಂಬಲ ಇರುತ್ತದೆ. ಬಿಗ್‌ಬಾಸ್ ಮಾತ್ರವಲ್ಲ ಎಲ್ಲಾ ರಿಯಾಲಿಟಿ ಶೋಗಳು ಫೇಕ್ ಎಂದು ಸರಯು ಶಾಕಿಂಗ್‌ ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿದೆ.


ಬಿಗ್‌ಬಾಸ್ ಮನೆಯೊಳಗೆ ಹೋದ ಗೊತ್ತಾಯ್ತು ಒಳಗಡೆ ಕೆಲವರಿಗೆ ಸಪೋರ್ಟ್ ಇರುತ್ತದೆ. ಅಂತಹವರನ್ನು ಸೋಲಿಸುವುದು ಕಷ್ಟ. ಅವರ ಮೇಲೆ ಫೈಟ್ ಮಾಡಿದರೆ ನಮಗೆ ಕೆಟ್ಟದು ಎಂದು ಸರಯು ಬಿಗ್‌ಬಾಸ್‌ ಮನೆಯ ಕರಾಳತೆಯ್ನು ಜನರ ಮುಂದಿಟ್ಟಿದ್ದಾರೆ. ಆದ್ರೆ ಇದ ಎಷ್ಟರ ಮಟ್ಟಿಗೆ ಸತ್ಯ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.