Matney Movie Updates: ಅಯೋಗ್ಯ ಚಿತ್ರದ ತರುವಾಯ ಒಂದು ಸುದೀರ್ಘಾವಧಿಯ ನಂತರ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೋಡಿಯಾಗಿ ನಟಿಸುತ್ತಿರುವ ಚಿತ್ರ ʻಮ್ಯಾಟ್ನಿ’. ಯಶಸ್ವೀ ಜೋಡಿಯಾಗಿ ಗುರುತಿಸಿಕೊಂಡಿರುವ ಸತೀಶ್ ಮತ್ತು ರಚಿತಾ ಮತ್ತೊಂದು ತೆರನಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಮ್ಯಾಟ್ನಿಯ ಬಿಡುಗಡೆ ದಿನಾಂಕದ ಬಗ್ಗೆ ಒಂದಷ್ಟು ವಿಚಾರಗಳು ಹರಿದಾಡುತ್ತಿವೆ. ಗಾಂಧಿ ನಗರದಲ್ಲಿ ಸದ್ಯಕ್ಕೆ ಗುಲ್ಲೆದ್ದಿರುವ ವಿಚಾರಗಳನ್ನಾಧರಿಸಿ ಹೇಳೋದಾದರೆ, ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮ್ಯಾಟ್ನಿ ತೆರೆಗಾಣುವ ಸಾಧ್ಯತೆಗಳಿವೆ.


COMMERCIAL BREAK
SCROLL TO CONTINUE READING

ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ, f3 ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ ಮ್ಯಾಟ್ನಿ ಆರಂಭದಿಂದ ಇಲ್ಲಿಯವರೆಗೂ ಪ್ರೇಕ್ಷಕರ ಆಸಕ್ತಿ ಸೆಳೆಯುತ್ತಾ ಸಾಗಿ ಬಂದಿದೆ. ಹಂತ ಹಂತವಾಗಿ ಒಂದಿಷ್ಟು ವಿಚಾರಗಳನ್ನು ತಲುಪಿಸುತ್ತಾ ಬಂದಿರುವ ಈ ಚಿತ್ರವೀಗ ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಸದ್ದೇ ಇಲ್ಲದಂತೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿಕೊಂಡಿರುವ ಮ್ಯಾಟ್ನಿಯ ಪ್ರಚಾರ ಕಾರ್ಯವೂ ಚಾಲೂ ಆಗುವ ಲಕ್ಷಣಗಳು ಕಾಣಿಸುತ್ತಿವೆ.


ಇದನ್ನೂ ಓದಿ: ನಟಿ ದೀಪಿಕಾ ದಾಸ್‌ ಪತಿ ಯಾರು ಗೊತ್ತಾ.? ಇವರ ಜಾತಿ, ಹೆಸರು ಸಂಪೂರ್ಣ ಪರಿಚಯ ಇಲ್ಲಿದೆ.. 


ಇತ್ತೀಚಿನ ವರ್ಷಗಳಲ್ಲಿ ವಿಶೇಷವಾದ, ಒಂದಕ್ಕೊಂದು ಭಿನ್ನವಾದ ಪಾತ್ರಗಳನ್ನೇ ನೀನಾಸಂ ಸತೀಶ್ ಒಪ್ಪಿಕೊಳ್ಳುತ್ತಾ ಬರುತ್ತಿದ್ದಾರೆ. ಅದರ ಭಾಗವೆಂಬಂತೆ ಕಾಣಿಸುತ್ತಿರುವ ಮ್ಯಾಟ್ನಿ ಮನಮೋಹಕ ಕಥೆಯ ಹೂರಣದೊಂದಿಗೆ ರೂಪಿಸಲ್ಪಟ್ಟಿದೆ ಎಂಬ ವಿಚಾರ ಕೂಡಾ ಈಗಾಗಲೇ ನಿಕ್ಕಿಯಾಗಿದೆ. ಒಂದು ಯಶಸ್ವೀ ಜೋಡಿ ಮತ್ತೊಂದು ಸಿನಿಮಾದಲ್ಲಿಯೂ ಜೊತೆಯಾದಾಗ ಸಹಜವಾಗಿಯೇ ಅದರತ್ತ ಒಂದಷ್ಟು ಕುತೂಹಲ ಮೂಡಿಕೊಳ್ಳುತ್ತೆ. ಅದರ ಜೊತೆ ಜೊತೆಗೇ ಮ್ಯಾಟ್ನಿ ತೆರೆಗಾಣೋದು ಯಾವಾಗ ಅಂತೊಂದು ಪ್ರಶ್ನೆ ಮೂಡಿಕೊಂಡಿತ್ತು. ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮೇಲ್ಕಂಡ ಸುದ್ದಿ ಅದಕ್ಕೆ ಉತ್ತರವೆಂಬಂತಿದೆ.


ಇದನ್ನೂ ಓದಿ: Keerthy Suresh: ಈ ಖ್ಯಾತ ನಟನಿಗೆ ʻಅಳಿಯಂದ್ರೇ..ʼ ಅಂತ ಕರೀತಾರಂತೆ ನಟಿ ಕೀರ್ತಿ ಸುರೇಶ್ ತಾಯಿ.! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.