Arviya : ಅರವಿಂದ್ ಕೆ.ಪಿ ಅಂತರಾಷ್ಟ್ರೀಯ ಮಟ್ಟದ ಬೈಕ್ ರೇಸರ್. ಇವರು ಬೈಕ್ ರೇಸಿನಲ್ಲಿ 17 ರಾಷ್ಟ್ರೀಯ ಮತ್ತು 1 ಅಂತರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಇವರು ಡುಲ್ಕೀರ್ ಸಲ್ಮಾನ್ ಅಭಿನಯದ ಮಲಯಾಳಂ ಚಿತ್ರ ಬೆಂಗಳೂರು ಡೇಸ್ ಚಿತ್ರದಲ್ಲಿ ನಟಿಸಿದ್ದರು. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.


COMMERCIAL BREAK
SCROLL TO CONTINUE READING

ಉಡುಪಿ ಮೂಲದವರಾದ ಪ್ರಭಾಕರ್‌ ಉಪಾಧ್ಯ ಅವರ ಸುಪುತ್ರ ಕೆಪಿ ಅರವಿಂದ್ ರಾಷ್ಟ್ರೀಯ ಮಟ್ಟದ ಈಜುಪಟು ಕೂಡ ಆಗಿದ್ದರು. ಈಜಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪದಕಗಳನ್ನೂ ಗೆದ್ದಿದ್ದಾರೆ. 2004ರಿಂದ ಆರಂಭಗೊಂಡ ರ‍್ಯಾಲಿ ವೃತ್ತಿಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದರೂ ಛಲಬಿಡದೆ ಸಾಧನೆಯ ಮೆಟ್ಟಿಲೇರಿದವರು. 2019ರಲ್ಲಿ ಡಕಾರ್‌ ರ‍್ಯಾಲಿ ಚಾಂಪಿಯನ್‌ಷಿಪ್‌ ಪೂರೈಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆ ಸಂಪಾದಿಸಿದರು. 


 


Video: ಅಂಬಾನಿ ಇವೆಂಟ್‌ನಲ್ಲಿ ಪತ್ನಿ ಜೊತೆ ಶಾರುಖ್‌ ಖಾನ್‌ ಜಗಳ.! ಎಲ್ಲೆಡೆ ವಿಡಿಯೋ ವೈರಲ್‌ 


ದಿವ್ಯಾ ಉರುಡುಗ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್‌ಗಳ ಮೂಲಕ ಮನೆಮಾತಾಗಿರುವ ದಿವ್ಯಾ `ಹುಲಿರಾಯ' ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಿಸಿದರು. ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ, ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು.


ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ, ಶಾಲಾ ದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿದ್ದಾಗ ಇವರಿಗೆ ಕಿರುತೆರೆಯಲ್ಲಿ ನಟಿಸಿಲು ಆಫರ್ ಬಂತು. ಕಿರುತೆರೆಯಲ್ಲಿ `ಚಿಟ್ಟೆ ಹೆಜ್ಜೆ',``ಅಂಬಾರಿ',`ಖುಷಿ', `ಓಂ ಶಕ್ತಿ ಓಂ ಶಾಂತಿ' ಸೀರಿಯಲ್‌ಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ' ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು.


ಇದನ್ನೂ ಓದಿ-Kiccha Sudeep : ಸುದೀಪ್‌ಗೆ ಬಂದ ಬೆದರಿಕೆ ಪತ್ರಕ್ಕೂ.. "ಆ ವ್ಯಕ್ತಿ"ಗೂ ಇದೆಯಾ ನಂಟು!? 


2017ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ `ಹುಲಿರಾಯ' ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಾ, ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು. ರಾಜಕೀಯ ಆಧಾರಿತ `ಧ್ವಜ' ಮತ್ತು `ಫೇಸ್ 2 ಪೇಸ್' ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅಲ್ಲದೇ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಭಾಗವಹಿಸಿದ್ದ ದಿವ್ಯಾ ಉರುಡುಗ, ಮತ್ತೆ ಬಿಗ್ ಬಾಸ್ ಕನ್ನಡ ಸೀಸನ್ 9ಕ್ಕೆ ಪ್ರವೇಶ ಮಾಡಿದ್ದರು. ಅದರಲ್ಲಿ 5ನೇ ಸ್ಥಾನ  ಪಡೆದಿದ್ದರು. 


ದಿವ್ಯಾ ಉರುಡುಗ ಹಾಗೂ ಅರವಿಂದ್‌ ಕೆ.ಪಿ ಜೋಡಿಯ ಪೋಟೋಗಳನ್ನು ನೋಡಿದ ನೆಟ್ಟಿಗರು ಈ ಜೋಡಿಗೆ ಯಾರ ದೃಷ್ಟಿಯು ತಾಗದಿರಲಿ, ಕ್ಯೂಟ್‌ ಜೋಡಿ, ಜನುಮದ ಜೋಡಿ, ಎಂದೆಲ್ಲಾ ಕಾಮೆಂಟ್‌ ಮಾಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.