Kiccha Sudeep : ಸುದೀಪ್‌ಗೆ ಬಂದ ಬೆದರಿಕೆ ಪತ್ರಕ್ಕೂ.. "ಆ ವ್ಯಕ್ತಿ"ಗೂ ಇದೆಯಾ ನಂಟು!?

Kiccha Sudeep threat letter: ಒಂದೆಡೆ ಸುದೀಪ್‌ ಬಿಜೆಪಿಗೆ ಬೆಂಬಲಿಸಿದ ವಿಚಾರದ ಬಗ್ಗೆ ಚರ್ಚೆ ಜೋರಾಗಿದ್ದರೆ, ಮತ್ತೊಂದೆಡೆಕಿಚ್ಚನಿಗೆ ಬಂದ ಬೆದರಿಕೆ ಪತ್ರ ಸಂಚಲನ ಮೂಡಿಸಿದೆ. ಸುದೀಪ್‌ಗೆ ಬಂದ ಬೆದರಿಕೆ ಪತ್ರಕ್ಕೂ.. "ಆ ವ್ಯಕ್ತಿ"ಗೂ ಇದೆಯಾ ನಂಟು!?  ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.   

Written by - Chetana Devarmani | Last Updated : Apr 6, 2023, 03:33 PM IST
  • ಸುದೀಪ್‌ಗೆ ಬಂದ ಬೆದರಿಕೆ ಪತ್ರ
  • ಪತ್ರಕ್ಕೂ, ಆ ವ್ಯಕ್ತಿ"ಗೂ ಇದೆಯಾ ನಂಟು!?
  • ಬೆದರಿಕೆ ಪತ್ರ ಬರೆದವರು ಯಾರು?
Kiccha Sudeep : ಸುದೀಪ್‌ಗೆ ಬಂದ ಬೆದರಿಕೆ ಪತ್ರಕ್ಕೂ.. "ಆ ವ್ಯಕ್ತಿ"ಗೂ ಇದೆಯಾ ನಂಟು!?   title=
Kiccha Sudeep

Threat letter to Sudeep: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬೆದರಿಕೆ ಪತ್ರ ಬಂದ ವಿಚಾರ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅವಾಚ್ಯ ಶಬ್ದಗಳನ್ನು ಬಳಸಿ, ನಿಂದನೀಯ ಪದಗಳನ್ನು ಉಪಯೋಗಿಸಿ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರದ ಮೂಲಕ ಬೆದರಿಕೆ ಹಾಕಲಾಗಿದೆ. ಬೆಂಗಳೂರಿನಲ್ಲಿರುವ ಸುದೀಪ್ ನಿವಾಸಕ್ಕೆ ಈ ಪತ್ರವನ್ನು ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಯಾರು ಈ ಕೃತ್ಯ ಮಾಡಿದ್ದಾರೆ ಅನ್ನೋದು ಗೊತ್ತಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಸರಿಯಾದ ಉತ್ತರ ಕೊಡದೇ ಬಿಡುವವನೂ ಅಲ್ಲ ಎಂದಿದ್ದಾರೆ. 

ಇದನ್ನೂ ಓದಿ : ಬಾಕ್ಸಾಫೀಸ್ ನಲ್ಲಿ 'ದಸರಾ' ಧಮಾಕ.. 100 ಕೋಟಿ ಕ್ಲಬ್ ಸೇರಿದ ನ್ಯಾಚುರಲ್ ಸ್ಟಾರ್ ನಾನಿ ಸಿನಿಮಾ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಸ್ಟಾರ್‌ ಪ್ರಚಾರಕರಾಗಿರುವ ಕಿಚ್ಚ ಸುದೀಪ್‌ ಅವರಿಗೆ ಈ ಬೆದರಿಕೆ ಪತ್ರ ಬಂದಿರುವುದು ರಾಜಕೀಯ ಆಯಾಮ ಪಡೆದುಕೊಳ್ಳುತ್ತಿದೆ. ಇದರ ಬಗ್ಗೆಯೂ ನಿನ್ನೆ ಮಾತನಾಡಿದ ಸುದೀಪ್‌, ಇದಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲ, ಇದನ್ನು ಚಿತ್ರರಂಗದಲ್ಲಿರುವವರೇ ಮಾಡಿದ್ದಾರೆ. ಯಾರು ಮಾಡಿದ್ದಾರೆ ಎಂದು ಸಹ ಗೊತ್ತಿದೆ. ಸರಿಯಾಗಿ ಉತ್ತ ಕೊಡ್ತೀನಿ ಎಂದಿದ್ದಾರೆ. 

ಬೆದರಿಕೆ ಪತ್ರದ ಬಗ್ಗೆ ಕಿಚ್ಚನ ಈ ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಸುದೀಪ್ ಅವರನ್ನು ಎದುರು ಹಾಕಿಕೊಂಡ ಆ ವ್ಯಕ್ತಿ ಯಾರು? ಯಾಕೆ ಈ ಕೆಲಸ ಮಾಡಿದ್ದಾರೆ? ಕಿಚ್ಚನಿಗೆ ಬೆದರಿಕೆ ಪತ್ರ ಕಳಿಸಿದ್ದು ಏಕೆ ಎಂಬ ವಿಚಾರಗಳ ಚರ್ಚೆ ಜೋರಾಗಿದೆ.

ಇದನ್ನೂ ಓದಿ : ಹೊಸ ನಟರಿಗೆ ಬಹಿರಂಗ ಸವಾಲು ಹಾಕಿದ ಸಲ್ಮಾನ್ ಖಾನ್!

ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಸುದೀಪ್ ಅವರ ಮ್ಯಾನೇಜರ್ ಮತ್ತು ನಿರ್ಮಾಪಕ ಜಾಕ್ ಮಂಜು ಪಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಈ ದೂರಿನನ್ವಯ ಎಫ್ ಐ ಆರ್ ದಾಖಲಾಗಿದ್ದು, ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News