ನವದೆಹಲಿ: ತೆಲುಗು ಸೂಪರ್‌ಸ್ಟಾರ್ ರವಿ ತೇಜ (Ravi Teja) ತಮ್ಮ ಮುಂದಿನ ಚಿತ್ರ ಖಿಲಾಡಿ ಚಿತ್ರಕ್ಕಾಗಿ ಇಟಲಿಯಲ್ಲಿ ಆಕ್ಷನ್ ಸ್ಟಂಟ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇತ್ತೀಚಿಗೆ ರವಿ ಇನ್ಸ್ಟಾಗ್ರಾಮ್ನಲ್ಲಿ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಆಕ್ಷನ್ ಮೋಡ್ ಆನ್ ಎಂಬ ಶೀರ್ಷಿಕೆಯೊಂದಿಗೆ ರವಿ ತೇಜ (Ravi Teja) ಈ ಪೋಸ್ಟ್ ಹಂಚಿಕೊಂಡಿದ್ದಾರೆ. 
ಇದರಲ್ಲಿ ಅವರು ಮಿಲನ್‌ನ ಬೀದಿಗಳಲ್ಲಿ ಬೈಕ್‌ನಲ್ಲಿ ಸಾಹಸ ಮಾಡುತ್ತಿರುವುದು ಕಂಡುಬರುತ್ತದೆ.  


Yuvarathnaa Trailer: YouTube ನಲ್ಲಿ ಧೂಳೆಬ್ಬಿಸಿದ ಪವರ್ ಫುಲ್ ಯುವರತ್ನ ಟ್ರೈಲರ್


ಖಿಲಾಡಿ ರಮೇಶ್ ವರ್ಮಾ ಬರೆದು ನಿರ್ದೇಶಿಸಿರುವ ಆಕ್ಷನ್ ಕಾಮಿಡಿ ಚಿತ್ರವಾಗಿದೆ. ಈ ಚಿತ್ರದಲ್ಲಿ ಅರ್ಜುನ್ ಸರ್ಜಾ (Arjun Sarja), ಉನ್ನಿ ಮುಕುಂದನ್, ಮೀನಾಕ್ಷಿ ಚೌಧರಿ ಮತ್ತು ಡಿಂಪಲ್ ಹಯಾತಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 


ಲಾಕ್‌ಡೌನ್ (Lockdown) ಬಳಿಕ ಚಿತ್ರಮಂದಿರಗಳು ತೆರೆದ ನಂತರ ರವಿ ತೇಜ ಅವರ ಚಿತ್ರ ಕ್ರ್ಯಾಕ್ ಬಿಡುಗಡೆಯಾಯಿತು. ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಶ್ರುತಿ ಹಾಸನ್ ಅಭಿನಯದ ತೆಲುಗು ಆಕ್ಷನ್ ಚಿತ್ರ ಜನವರಿಯಲ್ಲಿ ಬಿಡುಗಡೆಯಾಗಿದ್ದು ಯಶಸ್ವಿ ಪ್ರದರ್ಶನ ಕಂಡಿತು.


ಪತ್ನಿ ಎದುರು Preity Zinta ಕೈ ಚುಂಬಿಸಿದ Ritiesh Deshmukh, ಮುಂದೆ ಈ ವಿಡಿಯೋ ನೋಡಿ


ಟಾಲಿವುಡ್ (Tollywood) ನಟ ರವಿ ತೇಜ ಅವರನ್ನು ಮಾಸ್ ಮಹಾರಾಜ (Mass MahaRaja)  ಎಂದು ಪ್ರೀತಿಯಿಂದ ಕರೆಯುತ್ತಾರೆ. ತೆಲುಗು ನಟ ಮಹೇಶ್ ಬಾಬು ಅವರು ಕಿಕ್ 2 ಚಿತ್ರಕ್ಕೆ ಅವರಿಗೆ ಆಹ್ವಾನವನ್ನೂ ನೀಡಿದ್ದರು. ಆದರೆ ಅವರು ಅದನ್ನು ಮಾಡಲು ನಿರಾಕರಿಸಿದರು. ಸದಾ ವಿವಾದಗಳಿಂದ ದೂರವಿರುವ ರವಿ ತೇಜ ಉತ್ತಮ ಚಲನಚಿತ್ರ ನಟ ಮಾತ್ರವಲ್ಲ, ಅವರ ವೈಯಕ್ತಿಕ ಜೀವನದಲ್ಲಿ ಉತ್ತಮ ವ್ಯಕ್ತಿ ಕೂಡ ಎಂದು ಅವರ ಜೊತೆಗಾರರು ಅವರ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.