ತೆಲುಗು ಕಿರುತೆರೆಗೆ ಕನ್ನಡದ ಅಮೂಲ್ ಬೇಬಿ ಎಂಟ್ರೀ: ಹಾಗಾದ್ರೆ ಸಾಗರ್ ಯಾವ ಸೀರಿಯಲ್ನಲ್ಲಿ ಮಿಂಚಲಿದ್ದಾರೆ?
Sagar Biligowda: ಪ್ರಸ್ತುತ ಜೀ ಕನ್ನಡ ವಾಹಿನಿಯ `ಸತ್ಯ` ಧಾರಾವಾಹಿಯಲ್ಲಿ ನಾಯನ ನಟ ಸಾಗರ್ ಬಿಳೀಗೌಡ, ಇದೀಗ ತೆಲುಗು ಸೀರಿಯಲ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದ್ರೇ ಈ ನಟಿ ಯಾವ ಧಾರವಾಹಿಯಲ್ಲಿ ನಟಿಸುತ್ತಾರೆ? ಇದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Sagar Biligowda Entry To Telugu Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸತ್ಯ' ಧಾರಾವಾಹಿಯಲ್ಲಿ ನಾಯನ ನಟ ಕಾರ್ತಿಕ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗ ಸಾಗರ್ ಬಿಳೀಗೌಡ, ಈತ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಾಯಕ ನಕುಲ್ ಸ್ನೇಹಿತ ನಂದು ಆಗಿ ಕಾಣಿಸಿಕೊಳ್ಳುವ ಮೂಲಕ ಸಾಗರ್ ನಟನಾ ಪಯಣ ಶುರುವಾಯಿತು. ಮೊದಲ ಬಾರಿಗೆ ಪೋಷಕ ಪಾತ್ರದ ಮೂಲಕ ಕಿರುತೆರೆಗೆ ಕಾಲಿಟ್ಟ ಸಾಗರ್ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸಾರೆ' ಧಾರಾವಾಹಿಯಲ್ಲಿ ನಾಯಕನಾಗಿ ಭಡ್ತಿ ಪಡೆದರು.
ನಟ ಸಾಗರ್ ಬಿಳಿಗೌಡ ಯುವರಾಜನ ಪಾತ್ರಕ್ಕೆ ಜೀವ ತುಂಬಿ ವೀಕ್ಷಕರ ಮನ ಸೆಳೆದಿದ್ದು, ತದ ನಂತರ ಕಾರಣಾಂತರಗಳಿಂದ ಯುವರಾಜ ಪಾತ್ರದಿಂದ ಹೊರಬಂದರು. ಮುಂದೆ 'ಸತ್ಯ' ಧಾರಾವಾಹಿಯ ಅಮೂಲ್ ಬೇಬಿ ಆಲಿಯಾಸ್ ಕಾರ್ತಿಕ್ ಆಗಿ ಕಾಣಿಸಿಕೊಂಡು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿಸುತ್ತಿದ್ದಾರೆ. ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸಾಗರ್ ಸತ್ಯ ಸೀರಿಯಲ್ ವೀಕ್ಷಕರ ಪಾಲಿನ ಪ್ರೀತಿಯ ಅಮೂಲ್ ಬೇಬಿಯಾಗಿ ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ನೆಚ್ಚಿನ ಅಳಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸಾಗರ್ ಬಿಳೀಗೌಡ ಪ್ರೇಕ್ಷಕರು ನೀಡಿದ ಪ್ರೀತಿಗೆ ಫಿದಾ ಆಗಿದ್ದಾರೆ.
ಇದನ್ನು ಓದಿ: Rashmika Mandanna: ವಿಜಯ್ - ರಶ್ಮಿಕಾ ಲವ್ ಸ್ಟೋರಿ ರಿವೀಲ್.! ಶೀಘ್ರದಲ್ಲೇ ಮದುವೆಯಾಗೋದು ಪಕ್ಕಾ?
ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಸಾಗರ್ ಬಿಳೀಗೌಡ "ನಾನು ನಿಮ್ಮ ಪ್ರೀತಿಯ ಅಮೂಲ್ ಬೇಬಿ. ಈ ಸಲವೂ ನಿಮ್ಮ ಪ್ರೀತಿಯಿಂದ ನನಗೆ ನೆಚ್ಚಿನ ಅವಾರ್ಡ್ ದೊರಕಿದೆ. ಇದೇ ತರ ಸಪೋರ್ಟ್ ಮಾಡುತ್ತಿರಿ. ವೋಟ್ ಪಡೆದಿರುವುದಕ್ಕೆ ನನಗೂ ಖುಷಿಯಾಗುತ್ತಿದೆ. ನನ್ನ ನಿಜ ಜೀವನದಲ್ಲಿ ಇತ್ತೀಚೆಗಷ್ಟೇ ಮದುವೆಯಾಯಿತು. ಹಾಗಾಗಿ ನಾನು ಈ ಅವಾರ್ಡ್ ಅನ್ನು ನನ್ನ ಹೆಂಡತಿ, ಅತ್ತೆ, ಮಾವ ಜೊತೆಗೆ ಅಪ್ಪ ಅಮ್ಮನಿಗೆ ಅರ್ಪಿಸುತ್ತಿದ್ದೇನೆ. ಇದು ನನ್ನ ಟೀಂ 'ಸತ್ಯ' ಧಾರಾವಾಹಿಗೆ ನನ್ನ ಟ್ರಿಬ್ಯೂಟ್ ಹೌದು. ತುಂಬಾ ಧನ್ಯವಾದಗಳು" ಎಂದು ಹೇಳಿರುವ ಸಾಗರ್ ಮಗದೊಂದು ಸಿಹಿ ಸುದ್ದಿಯನ್ನು ಕೂಡಾ ನೀಡಿದ್ದಾರೆ.
ಹೌದು.. ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಸಾಗರ್ ಬಿಳೀಗೌಡ ಇದೀಗ ಪರಭಾಷೆಯ ಕಿರುತೆರೆಯಲ್ಲಿ ನಟಿಸುವ ಸುವರ್ಣಾವಕಾಶವನ್ನು ಪಡೆದುಕೊಂಡಿದ್ದು, ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಲಿದ್ದಾರೆ. ಈ ಹಿಂದೆ 'ಒಂಟರಿ ಗುಲಾಬಿ' ಧಾರಾವಾಹಿಯಲ್ಲಿ ನಾಯಕ ಬಾಲು ಆಗಿ ಅಭಿನಯಿಸುತ್ತಿದ್ದ ರಾಹುಲ್ ರವಿ ಕಾರಣಾಂತರಗಳಿಂದ ಧಾರಾವಾಹಿಯ ಪಾತ್ರಕ್ಕೆ ವಿದಾಯ ಹೇಳಿದ್ದು, ಇದೀಗ ಆ ಜಾಗಕ್ಕೆ ಸಾಗರ್ ಎಂಟ್ರಿ ಆಗಲಿದೆ.
ಇದನ್ನು ಓದಿ: Priya Prakash Warrier: ಕಣ್ಸನ್ನೆ ಬೆಡಗಿಯ ಬೋಲ್ಡ್ ಅವತಾರಕ್ಕೆ ಪಡ್ಡೆಹೈಕ್ಳು ಫಿದಾ..!
'ಸತ್ಯ' ಧಾರಾವಾಹಿಯ ಕಾರ್ತಿಕ್ ಆಗಿ ಕಾಣಿಸಿಕೊಂಡು ಕಿರುತೆರೆ ಪ್ರೇಕ್ಷಕರನ್ನು ಮನೋರಂಜಿಸುತ್ತಿರುವ ಸಾಗರ್ ಬಿಳೀಗೌಡ ಲಂಡನ್‌ನಲ್ಲಿ ಎಂಬಿಎ ಪದವಿ ಪಡೆದು, ಪದವಿಯ ಬಳಿಕ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರನ್ನು ನಟನಾಗಿ ಮಾಡಿದ್ದೇ ನಾಟಕದ ಮೇಲಿನ ಪ್ರೀತಿ. ಟಿ.ಎಸ್ ನಾಗಾಭರಣ ನಟನಾ ತರಬೇತಿ ಕೇಂದ್ರಕ್ಕೆ ಸೇರಿದ ಸಾಗರ್ ನಟನೆಯ ಆಗು ಹೋಗುಗಳನ್ನು ಅರಿತುಕೊಂಡರು. ಇದೀಗ ನಟನಾಗಿ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ ಸಾಗರ್ ಬಿಳೀಗೌಡ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.