South Actress: ʻಮಾಣಿಕ್ಯʼನ ಸುಂದರಿಗೆ ಬಾಲ್ಯದಲ್ಲಿ ಲೈಂಗಿಕ ಕಿರುಕುಳ: ಸತ್ಯ ಬಿಚ್ಚಿಟ್ಟ ನಟಿ!
South Actress Sexual Harassement: ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ ವರಲಕ್ಷಿ ಬಾಲ್ಯದಲ್ಲಿ ತಾವು ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Sexual Harassemnt On Varalakshmi In Childhood: ಸೌತ್ ಚಿತ್ರರಂಗದ ನಟಿ ವರಲಕ್ಷಿ ಬಾಲ್ಯದಲ್ಲಿ ತಾನು ಲೈಂಗಿಕ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ. ಸಿನಿಮಾರಂಗದಲ್ಲಿ ಸ್ಟಾರ್ ಮಕ್ಕಳಿಗೆ ಯಾವುದೇ ಅಡೆತಡೆಗಳಿಲ್ಲ ಮತ್ತು ಅವರ ಹಿನ್ನೆಲೆಯಿಂದ ಅವಕಾಶಗಳು ಸಿಗುತ್ತವೆಂದು ನಂಬಲಾಗಿದೆ. ಆದರೆ ಬಣ್ಣದ ಲೋಕದಲ್ಲಿ ಸ್ಟಾರ್ ಮಕ್ಕಳಿಗೂ ಸಹ ಲೈಂಗಿಕ ಕಿರುಕುಳದಂತಹ ಕೆಟ್ಟ ಅನುಭವಗಳಾಗಿವೆ. ಇದೀಗ ನಟಿ ವರಲಕ್ಷಿ ಬಾಲ್ಯದಲ್ಲಿ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಹೌದು.. ನಟಿ ವರಲಕ್ಷ್ಮಿ ಶರತ್ ಕುಮಾರ್ ಮಗಳಾಗಿದ್ದು ಈಕೆ ಸ್ಟಾರ್ ಕಿಡ್ ಆಗಿ ತಮಿಳು ಇಂಡಸ್ಟ್ರಿಗೆ ಪ್ರವೇಶಿಸಿದರು. ವೃತ್ತಿಜೀವನದ ಆರಂಭದಲ್ಲಿ ಹೆಚ್ಚು ಪ್ರಭಾವಶಾಲಿಯಾಗಿಲ್ಲದಿದ್ದರೂ, ತನ್ನ ನಟನಾ ಕೌಶಲ್ಯವನ್ನು ಸುಧಾರಿಸಿಕೊಂಡು ಕಾಲಿವುಡ್‌ನಲ್ಲಿ ಮಾತ್ರವಲ್ಲದೆ ಟಾಲಿವುಡ್‌ನಲ್ಲಿಯೂ ಅಭಿನಯಿಸಿ ಜನಪ್ರಿಯತೆ ಪಡೆದುಕೊಂಡರು. ಇತ್ತೀಚೆಗೆ ಈ ನಟಿ ಹನುಮಾನ್ ಚಿತ್ರದ ಪ್ರಚಾರದ ಭಾಗವಾಗಿ ಸಂದರ್ಶನವೊಂದರಲ್ಲಿ ತಮ್ಮ ಬಾಲ್ಯದ ಬಗ್ಗೆ ಬೆಚ್ಚಿಬೀಳಿಸುವ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Sangeetha Sringeri: ಬಂಡೀಪುರದಲ್ಲಿ ಸಫಾರಿ ವೇಳೆ ಹುಲಿ ನೋಡಿ ಗಾಬರಿಯಾದ ಬಿಗ್ ಬಾಸ್ ಸಂಗೀತಾ!
ದಕ್ಷಿಣ ಚಿತ್ರರಂಗದ ನಟಿ ವರಲಕ್ಷ್ಮಿ ಶರತ್ ಕುಮಾರ್ ತನ್ನ ಜೀವನದಲ್ಲಿ ಮರೆಯಲಾಗದ ಆಘಾತ ಎಂದು ಹೇಳಿ, ಇವತ್ತಿನ ಕಾಲದ ಜನರ ಮಾನಸಿಕ ಸ್ಥಿತಿ ಹೇಗಿದೆ ಎಂದು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ಮಾನಸಿಕ ಸ್ಥಿತಿಯ ಬಗ್ಗೆ ಸಂಬಂಧಿಕರು ಮತ್ತು ಸ್ನೇಹಿತರಿಗೆ ಹೇಳಲು ಹೆದರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ. ಕುಟುಂಬಸ್ಥರ ಬಳಿ ಯಾವುದೇ ಸಮಸ್ಯೆಯ ಬಗ್ಗೆ ಮಾತನಾಡಿದರೆ ಅವರೇ ನಮಗೆ ಮತ್ತೊಮ್ಮೆ ತೀರ್ಪು ಕೊಡುತ್ತಾರೆಂದು ಹೇಳಿದ್ದಾರೆ.
ವರಲಕ್ಷ್ಮಿ ಮಾತನ್ನು ಮುಂದುವರೆಸುತ್ತಾ ಎಲ್ಲರೂ ಥೆರಪಿಸ್ಟ್ ಜೊತೆ ಮಾತನಾಡಿದರೆ ನಮ್ಮನ್ನು ಸರಿ ದಾರಿಗೆ ತರಲು ಪ್ರಯತ್ನಿಸುತ್ತಾರೆ. ಆದರಿಂದ ಯಾವುದೇ ತೊಂದರೆಯಾದರೆ ಥೆರಪಿಸ್ಟ್ ಬಳಿ ಹೋಗುವುದು ಒಳ್ಳೆಯದು ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ ಸ್ಟಾರ್ ಕಿಡ್ ಒಬ್ಬರು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂದು ಹೇಳುವುದು ಸಂಚಲನ ಮೂಡಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ನಟಿ ಹೀಗೆ ಶಬರಿ ಚಿತ್ರದ ಪ್ರಚಾರದ ಸಮಯದಲ್ಲಿ ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ಹೇಳಿ ಕಮೆಂಟ್ ಮಾಡುವವರಿಗೆ ಇದು ಬಿಸಿ ವಿಷಯವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.