Shaakuntalam movie song : ನಟಿ ಸಮಂತಾ ಅಭಿನಯದ ʼಶಾಕುಂತಲಾʼ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಶಾಕುಂತಲೆಯ ಕಥೆ ಹೇಳುವ ಈ ಹಾಡನ್ನು ಟಾಲಿವುಡ್‌ ಖ್ಯಾತ್‌ ಸಿಂಗರ್‌ ರಮ್ಯಾ ಬೆಹೆರಾ ಹಾಡಿದ್ದಾರೆ. ಮಣಿ ಶರ್ಮಾ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಚೈತನ್ಯ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಶಾಕುಂತಾ ಫೆಬ್ರವರಿ 17 ರಂದು ಚಿತ್ರಮಂದಿರಗಳಿಗೆ ಬರಲಿದೆ.


COMMERCIAL BREAK
SCROLL TO CONTINUE READING

ಸಮಂತಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದ ʼಶಾಕುಂತಲಾ' ಲಿರಿಕ್ ವಿಡಿಯೋ ಬಿಡುಗಡೆಯಾಗಿದೆ. ಈ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದು, ಮಲಯಾಳಂನ ಯುವ ನಟ ದೇವ್ ಮೋಹನ್ 'ದುಷ್ಯಂತನ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ʼಸೂಫಿಯುಂ ಸುಜಾತಂʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ನಟ ದೇವ್ ಮೋಹನ್. ಮಲಯಾಳಂ, ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಶಾಕುಂತಲಂ 3ಡಿಯಲ್ಲಿ ಬಿಡುಗಡೆಯಾಗಲಿದೆ. ʼಶಾಕುಂತಲಾʼ ದೃಷ್ಟಿಕೋನದಿಂದ ಈ ಸಿನಿಮಾದ ಕಥೆ ಹೆಣೆಯಲಾಗಿದೆ.


ಇದನ್ನೂ ಓದಿ: ಶಿವಣ್ಣ, ರಜನಿಕಾಂತ್‌ ʼಜೈಲರ್‌ʼ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನಾ..!


ಅಲ್ಲು ಅರ್ಹ, ಸಚಿನ್ ಖೇಡೇಕರ್, ಕಬೀರ್ ಬೇಡಿ, ಡಾ. ಎಂ ಮೋಹನ್ ಬಾಬು, ಪ್ರಕಾಶ್ ರಾಜ್, ಮಧುಬಾಲಾ, ಗೌತಮಿ, ಅದಿತಿ ಬಾಲನ್, ಅನನ್ಯ ನಾಗಲ್ಲ ಮತ್ತು ಜಿಶು ಸೇನ್‌ಗುಪ್ತ ಇತರ ಪಾತ್ರಗಳಲ್ಲಿ ನಟಿಸಿದ್ದಾರೆ. ಗುಣ ಟೀಮ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನೀಲಿಮಾ ಗುಣ ನಿರ್ಮಿಸಿರುವ ಈ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಪ್ರಸ್ತುತಪಡಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.