Shagufta Ali : ಜೀವನ ನಡೆಸಲು ಕಾರು, ಚಿನ್ನಾಭರಣ ಮಾರಿದ ಪ್ರಖ್ಯಾತ ನಟಿ
36 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿರುವ ಶಗುಫ್ತಾ ಅಲಿಯವರಿಗೆ ಕಳೆದ 4 ವರ್ಷಗಳಿಂದ ಯಾವುದೇ ಅವಕಾಶಗಳು ಸಿಕ್ಕಿಲ್ಲ
ನವದೆಹಲಿ : ಸಿನಿಮಾಗಳಲ್ಲಿ ಸರಿಯಾದ ಅವಕಾಶಗಳು ಸಿಗದೆ ಪ್ರಖ್ಯಾತ ನಟಿಯೊಬ್ಬರು ಜೀವನ ನಡೆಸಲು ತಮ್ಮ ಕಾರು ಮತ್ತು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಾರೆ.
ಹೌದು, ಸಿನಿಮಾ ನಟಿಯರೆಂದರೆ ಸಾಲು-ಸಾಲು ಅವಕಾಶಗಳು, ವೈಭೋಗದ ಜೀವನ ಎಂದೇ ಎಲ್ಲರೂ ಊಹಿಸಿರುತ್ತಾರೆ. ಆದರೆ ಟಿವಿ ಸಿರಿಯಲ್ ಗಳಲ್ಲಿ ಮತ್ತು ಸಿನಿಮಾ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿರುವ ಹಿರಿಯ ನಟಿ ಶಗುಫ್ತಾ ಅಲಿ(Shagufta Ali) ಅವರಿಗೆ ಸರಿಯಾದ ಅವಕಾಶಗಳು ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಡೆಸಲು ಕೂಡ ಅವರ ಬಳಿ ಹಣವಿಲ್ಲ.
ಇದನ್ನೂ ಓದಿ: Arindam Pramanik: ಕೆಲಸ ಸಿಗದೆ ಮೀನು ಮಾರಾಟ ಮಾಡುತ್ತಿರುವ ನಟ
36 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿರುವ ಶಗುಫ್ತಾ ಅಲಿಯವರಿಗೆ ಕಳೆದ 4 ವರ್ಷಗಳಿಂದ ಯಾವುದೇ ಅವಕಾಶಗಳು ಸಿಕ್ಕಿಲ್ಲ. ಹೀಗಾಗಿ ಜೀವನ ನಡೆಸಲು ಕೂಡ ನಟಿ(Actress) ಪರದಾಡುವಂತಾಗಿದೆ. ತಮಗಾದ ಈ ಕೆಟ್ಟ ಅನುಭವ ಮತ್ತು ನೋವುಗಳನ್ನು ಶಗುಫ್ತಾ ಮಾಧ್ಯಮಗಳ ಬಳಿ ಹಂಚಿಕೊಂಡಿದ್ದಾರೆ. ತಮಗೆ ಮತ್ತು ತಮ್ಮ ತಾಯಿಯ ಆರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಕೂಡ ನನ್ನ ಬಳಿ ಹಣವಿಲ್ಲವೆಂದು ಗೋಳು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನು 'ಜಾತ್ಯತೀತ ನಾಯಿ' ಎಂದ ಕಂಗನಾ ರನೌತ್
‘ಕಳೆದ 4 ವರ್ಷಗಳಿಂದ ನನಗೆ ಸರಿಯಾದ ಅವಕಾಶಗಳು ಸಿಗಲಿಲ್ಲ. ಕಡಿಮೆ ಅವಕಾಶಗಳು ಇದ್ದಿದ್ದರಿಂದ ನನಗೆ ಜೀವನ ನಡೆಸಲು ಕಷ್ಟವಾಯಿತು. ಜೀವನ ನಡೆಸಲು ನಾನು ನನ್ನ ಕಾರು ಮತ್ತು ಚಿನ್ನಾಭರಣ(Jewellery)ಗಳನ್ನು ಮಾರಬೇಕಾದ ಪರಿಸ್ಥಿತಿ ಎದುರಾಯಿತು. ಕಳೆದ 2-3 ವರ್ಷಗಳಿಂದ ಅನೇಕ ಸಂಕಷ್ಟಗಳ ನಡುವೆ ನಾನು ಹೇಗೋ ಜೀವನ ನಡೆಸಿದೆ. ಆದರೆ ಕಳೆದೊಂದು ವರ್ಷದಿಂದ ನನಗೆ ಕಠಿಣ ಪರಿಸ್ಥಿತಿ ಎದುರಾಯಿತು. ಉಳಿತಾಯದ ಎಲ್ಲ ಹಣವೂ ಖರ್ಚಾಯಿತು. ಈಗ ನನ್ನ ಬಳಿ ಏನೂ ಇಲ್ಲ. ಹೀಗಾಗಿ ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Aamir Khan: 15 ವರ್ಷಗಳ ನಂತರ ಕಿರಣ್ ರಾವ್ ಅವರಿಂದ ಬೇರ್ಪಟ್ಟ ಅಮೀರ್ ಖಾನ್
ಟೆಲಿವಿಷನ್ ಶೋ(TV Show)ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ಶಗುಫ್ತಾ, ದೇಶದ ಪ್ರತಿಯೊಬ್ಬ ಜನರು ಕಳೆದೊಂದು ವರ್ಷದಿಂದ ಲಾಕ್‌ಡೌನ್ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆದರೆ ಕಳೆದ 4 ವರ್ಷದಿಂದ ನಾನು ಇದನ್ನು ಎದುರಿಸುತ್ತಿದ್ದೇನೆ. ಜೀವನ ನಡೆಸುವುದು ತುಂಬಾ ದುಸ್ಥರವಾಗಿದೆ ಎಂದು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Rocking Star Yash: ಐಷಾರಾಮಿ ಬಂಗಲೆಗೆ ಎಂಟ್ರಿ ಕೊಟ್ಟ 'ರಾಕಿ ಭಾಯ್' ದಂಪತಿ
ಶಗುಫ್ತಾರಿಗೆ ತುರ್ತು ಆರ್ಥಿಕ ಸಹಾಯದ ಅಗತ್ಯವಿದೆ. ‘ನನ್ನ ತಾಯಿಯ ಆರೋಗ್ಯ(Health) ಹದಗೆಟ್ಟಿದ್ದು, ಅವರ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ. ಸಂಧಿವಾತ, ಸಕ್ಕರೆ ಕಾಯಿಲೆ ಮತ್ತು ಮೊಣಕಾಲು ಸಮಸ್ಯೆಯಿಂದ ನನ್ನ ತಾಯಿ ಬಳಲುತ್ತಿದ್ದಾರೆ. ನನಗೂ ಕೂಡ ಸಕ್ಕರೆ ಕಾಯಿಲೆ ಮತ್ತು ದೃಷ್ಟಿದೋಷದ ಸಮಸ್ಯೆ ಇದೆ. ಆದರೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಲು ತಮ್ಮ ಬಳಿ ಹಣವಿಲ್ಲವೆಂದು 54 ವರ್ಷದ ಹಿರಿಯ ನಟಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ಯಾಮಿ ಗೌತಮ್ ಗೆ ಸಮನ್ಸ್ ಜಾರಿ ಮಾಡಿದ ಜಾರಿ ನಿರ್ದೇಶನಾಲಯ
ಶಗುಫ್ತಾ ದೂರದರ್ಶನ ಕಾರ್ಯಕ್ರಮಗಳಾದ ‘ಬೆಪ್ಪನ್ನಾ, ಸಾಥ್ ನಿಭಾನಾ ಸಾಥಿಯಾ ಮತ್ತು ಸಾಸುರಲ್ ಸಿಮರ್ ಕಾ’ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅನೇಕ ಚಿತ್ರಗಳಲ್ಲಿಯೂ ನಟಿಸಿರುವ ಅವರು ಕೊನೆಯ ಬಾರಿಗೆ ‘ಲೈಲಾ ಮಜ್ನು’ (2018) ದಲ್ಲಿ ಕಾಣಿಸಿಕೊಂಡಿದ್ದರು. ನೀನಾ ಗುಪ್ತಾ ಅವರ 1998-99ರ ದೂರದರ್ಶನ ಕಾರ್ಯಕ್ರಮ ‘ಸಾನ್ಸ್’ ನಲ್ಲಿ ನಟಿಸಿದ್ದಕ್ಕಾಗಿ ಶಗುಫ್ತಾ ಖ್ಯಾತಿಯನ್ನು ಪಡೆದುಕೊಂಡಿದ್ದರು. ಆ ಸಂದರ್ಭದಲ್ಲಿ ನಟಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ ಅವರು ವಿವಿಧ ರೀತಿಯ ಕೀಮೋಥೆರಪಿಗೆ ಒಳಗಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.