ನವದೆಹಲಿ: ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ ಭಾರತೀಯ ಸೈನ್ ಲಾಂಗ್ವೇಜ್ ಡಿಕ್ಷನರಿಯಲ್ಲಿ ಕಾಣಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಸೈನ್ ಲಾಂಗ್ವೇಜ್ ಡಿಕ್ಷನರಿಯ ಮೊದಲ ಆವೃತ್ತಿಯನ್ನು 2018 ರಲ್ಲಿ 3000 ಪದಗಳೊಂದಿಗೆ ಬಿಡುಗಡೆ ಮಾಡಲಾಯಿತು.ವರದಿಗಳ ಪ್ರಕಾರ,ಇದು ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಪ್ರಿಯಾಂಕಾ ಚೋಪ್ರಾ ಮುಂತಾದ ನಟ ನಟಿಯರ ಹೆಸರುಗಳನ್ನು ಒಳಗೊಂಡಿದೆ.ಭಾರತೀಯ ಸಂಜ್ಞಾ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರದ ನಿಘಂಟಿನ ಇತ್ತೀಚಿನ ಆವೃತ್ತಿಯು 10,000 ಪದಗಳನ್ನು ಒಳಗೊಂಡಿದೆ.ಇದನ್ನು 17 ನೇ ಫೆಬ್ರವರಿ 2021 ರಂದು ಆನ್‌ಲೈನ್ ಕಾರ್ಯಕ್ರಮದಲ್ಲಿ ಉದ್ಘಾಟಿಸಲಾಯಿತು.


ಶಾರುಖ್ ಪುತ್ರನ ಜೊತೆ ಕಾಣಿಸಿಕೊಂಡ ಜೂಹ್ಲಿ ಪುತ್ರಿ ಜಾಹ್ನವಿ? ಜೂಹ್ಲಿ ಚಾವ್ಲಾ ಹೇಳಿದ್ದೇನು ಗೊತ್ತೇ?


ಟ್ವಿಟ್ಟರ್ ನಲ್ಲಿ, ಅಭಿಮಾನಿಯೊಬ್ಬರು ಶಾರುಖ್ ಖಾನ್ (Shah Rukh Khan) ಸಂಕೇತವನ್ನು ಪ್ರದರ್ಶಿಸುವ ವಿಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ಎಡ ಎದೆಯ ಹತ್ತಿರ ಬಂದೂಕಿನಂತೆ ಎರಡು ಬೆರಳುಗಳನ್ನು ಹಿಡಿದಿಟ್ಟುಕೊಂಡು ನಂತರ ಅದನ್ನು ಆ ಪ್ರದೇಶದಲ್ಲಿ ಎರಡು ಬಾರಿ ತಟ್ಟುವುದು ಒಳಗೊಂಡಿರುತ್ತದೆ.ಈ ಸುದ್ದಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಟನಿಗೆ ಅಭಿನಂದನೆ ಸಲ್ಲಿಸಿದ್ದಾರೆ.


ಇದನ್ನೂ ಓದಿ: ದೆಹಲಿಯಲ್ಲಿರುವ ತಂದೆ ತಾಯಿ ಸಮಾಧಿಗೆ ಭೇಟಿ ನೀಡಿದ ನಟ ಶಾರುಖ್ ಖಾನ್


ಶಾರುಖ್ ಖಾನ್ ಈಗ ಸಿದ್ಧಾರ್ಥ್ ಆನಂದ್ ಅವರ ಬಹು ನಿರೀಕ್ಷಿತ ಚಿತ್ರ ಪಠಾಣ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ವರದಿಯ ಪ್ರಕಾರ, ಅವರು 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಎಂಬ ವೈಜ್ಞಾನಿಕ ನಾಟಕದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ