Shah Rukh Khan injured: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಅಮೆರಿಕದಲ್ಲಿ ಅಪಘಾತಕ್ಕೀಡಾಗಿದ್ದಾರೆ. ವರದಿಗಳ ಪ್ರಕಾರ, ಶಾರುಖ್ ಖಾನ್ ಯುಎಸ್‌ನ ಲಾಸ್ ಏಂಜಲೀಸ್‌ನಲ್ಲಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಅಪಘಾತಕ್ಕೊಳಗಾದರು. ಈ ವೇಳೆ ಅವರ ಮೂಗಿಗೆ ಗಾಯವಾಗಿದೆ. ಶಾರುಖ್ ಖಾನ್ ಗಾಯಗೊಂಡ ನಂತರ ಸಣ್ಣ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿಕಿತ್ಸೆ ಬಳಿಕ ಕಿಂಗ್ ಖಾನ್ ಭಾರತಕ್ಕೆ ಮರಳಿದ್ದು, ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇತ್ತೀಚಿನ ವರದಿಯ ಪ್ರಕಾರ, ಶಾರುಖ್ ಖಾನ್ ಲಾಸ್ ಏಂಜಲೀಸ್‌ನಲ್ಲಿ ಅವರ ಮುಂಬರುವ ಪ್ರಾಜೆಕ್ಟ್‌ನ ಶೂಟಿಂಗ್ ಮಾಡುತ್ತಿದ್ದರು. ಈ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಅವರ ಮೂಗಿಗೆ ಗಾಯವಾಗಿದೆ. ಗಾಯದ ನಂತರ ಶಾರುಖ್ ಅವರ ಮೂಗಿನಿಂದ ರಕ್ತ ಸುರಿಯಲು ಆರಂಭಿಸಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಯಾವುದೇ ರೀತಿಯ ಗಂಭೀರ ಸಮಸ್ಯೆ ಇಲ್ಲ ಎಂದು ವೈದ್ಯರು ಚಿತ್ರ ತಂಡಕ್ಕೆ ತಿಳಿಸಿದ್ದಾರೆ. 


ಇದನ್ನೂ ಓದಿ: ಪ್ರಭಾಸ್ ಫ್ಯಾನ್ಸ್‌ಗೆ ರೋಚಕ ಅಪ್ಡೇಟ್.. ಸಲಾರ್ ಟೀಸರ್ ಡೇಟ್‌ ಅನೌನ್ಸ್‌.!


ವರದಿಯ ಪ್ರಕಾರ, ಶಾರುಖ್ ಖಾನ್ ಮೂಗಿಗೆ ಗಾಯವಾದ ನಂತರ ರಕ್ತಸ್ರಾವವನ್ನು ನಿಲ್ಲಿಸಲು ಸಣ್ಣ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ ಎನ್ನಲಾಗಿದೆ. ಆಪರೇಷನ್ ನಂತರ ಶಾರುಖ್ ಖಾನ್ ಅವರ ಮೂಗಿಗೆ ಬ್ಯಾಂಡೇಜ್ ಹಾಕಲಾಗಿದ್ದು, ಚಿಕಿತ್ಸೆ ನಂತರ ನಟ ಭಾರತಕ್ಕೆ ಮರಳಿದ್ದಾರೆ. ಇದೀಗ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶಾರುಖ್ ಖಾನ್ ಅಥವಾ ಅವರ ತಂಡ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.


ಹಲವಾರು ವರ್ಷಗಳ ನಂತರ ಶಾರುಖ್ ಖಾನ್ ಪಠಾಣ್ ಚಿತ್ರದೊಂದಿಗೆ ಪುನರಾಗಮನ ಮಾಡಿದ್ದಾರೆ. ಈಗ ಆ್ಯಕ್ಷನ್ ಚಿತ್ರಗಳನ್ನು ಮಾಡಬೇಕೆ ಹೊರತು ರೊಮ್ಯಾಂಟಿಕ್ ಚಿತ್ರಗಳನ್ನಲ್ಲ ಎಂದು ಪಠಾಣ್ ಬಿಡುಗಡೆಗೂ ಮುನ್ನ ಶಾರುಖ್ ಖಾನ್ ಹೇಳಿದ್ದರು. ಈಗ ಶಾರುಖ್ ಖಾನ್ ಶೀಘ್ರದಲ್ಲೇ ಅಟ್ಲೀ ಅವರ ಜವಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್ ನಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ, ವಿಜಯ್ ಸೇತುಪತಿ ಸಖತ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜವಾನ್ ಸೆಪ್ಟೆಂಬರ್ 7 ರಂದು ಚಿತ್ರಮಂದಿರಗಳಿಗೆ ಬರುವ ನಿರೀಕ್ಷೆಯಿದೆ.


ಇದನ್ನೂ ಓದಿ: ಜಿಮ್‌ನಲ್ಲಿ ಮಹೇಶ್ ಬಾಬು ವರ್ಕೌಟ್ ನೋಡಿ ಬೆರಗಾದ ಫ್ಯಾನ್ಸ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.