Mahesh Babu Workout: ಜಿಮ್‌ನಲ್ಲಿ ಮಹೇಶ್ ಬಾಬು ವರ್ಕೌಟ್ ನೋಡಿ ಬೆರಗಾದ ಫ್ಯಾನ್ಸ್‌

Mahesh Babu Workout: ಸೂಪರ್ ಸ್ಟಾರ್ ಮಹೇಶ್ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಅವರು ವ್ಯಾಯಾಮ ಮಾಡುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Written by - Chetana Devarmani | Last Updated : Jul 3, 2023, 08:13 PM IST
  • ಸೂಪರ್ ಸ್ಟಾರ್ ಮಹೇಶ್ ಬಾಬು
  • ಜಿಮ್ ನಲ್ಲಿ ಬೆವರಿಳಿಸಿದ ಮಹೇಶ್ ಬಾಬು
  • ಮಹೇಶ್ ಬಾಬು ವರ್ಕೌಟ್ ವಿಡಿಯೋ ವೈರಲ್‌
Mahesh Babu Workout: ಜಿಮ್‌ನಲ್ಲಿ ಮಹೇಶ್ ಬಾಬು ವರ್ಕೌಟ್ ನೋಡಿ ಬೆರಗಾದ ಫ್ಯಾನ್ಸ್‌     title=

 Mahesh Babu Workout: 47ರ ಹರೆಯದಲ್ಲೂ ಸೂಪರ್ ಸ್ಟಾರ್ ಮಹೇಶ್ ಬಾಬು 25ರ ಹರೆಯದವರಂತೆ ಕಾಣುವುದು. ಉತ್ತಮ ಆಹಾರ ಕ್ರಮ ಹಾಗೂ ನಿತ್ಯ ವ್ಯಾಯಾಮ ಮಾಡುವುದರಿಂದಲೇ ತಮ್ಮ ದೇಹ ಫಿಟ್ ಆಗಿರುವುದಕ್ಕೆ ಕಾರಣ ಎನ್ನುತ್ತಾರೆ. ಇತ್ತೀಚೆಗಷ್ಟೇ ಮಹೇಶ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. 

ಇದನ್ನೂ ಓದಿ: ʼManasu Jarideʼ: ಭಜರಂಗಿ 2 ಖ್ಯಾತಿಯ ಚೆಲುವರಾಜು ನಟನೆಯ "ಮನಸು ಜಾರಿದೆ" ಆಲ್ಬಮ್ ಸಾಂಗ್ ಬಿಡುಗಡೆ

ಈ ವಿಡಿಯೋಗೆ "ಶನಿವಾರದ ಮಿಂಚು.. ಒಂದು ನಿಮಿಷ ಲ್ಯಾಂಡ್ ಮೈನ್ ಪ್ರೆಸ್, ಒಂದು ನಿಮಿಷ ಕೆಟಲ್ ಬೆಲ್ ಸ್ವಿಂಗ್, ಒಂದು ನಿಮಿಷ ಸ್ಕಿಲ್ ಮಿಲ್ ರನ್.. ಎಷ್ಟು ಸೆಟ್ ಮಾಡಬಹುದು" ಶೀರ್ಷಿಕೆ ನೀಡಿದ್ದಾರೆ. ಈ ವಿಡಿಯೋದಲ್ಲಿ ಮಹೇಶ್ ಜಿಮ್‌ನಲ್ಲಿ ಕೆಲವು ಸಲಕರಣೆಗಳೊಂದಿಗೆ ಒಂದು ನಿಮಿಷ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದು.

 

 
 
 
 
 

 

ಸಿನಿಮಾಗಳ ಬಗ್ಗೆ ಹೇಳುವುದಾದರೆ ಮಹೇಶ್ ಬಾಬು ಸದ್ಯ ತ್ರಿವಿಕ್ರಮ್ ನಿರ್ದೇಶನದಲ್ಲಿ ಗುಂಟೂರು ಖಾರಂ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷ ಸಂಕ್ರಾಂತಿ ಉಡುಗೊರೆಯಾಗಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದಾರೆ. ಆ ನಂತರ  ರಾಜಮೌಳಿ ಜೊತೆ ಪ್ಯಾನ್ ವರ್ಲ್ಡ್ ಸಿನಿಮಾ ಮಾಡಲಿದ್ದಾರೆ. ಸದ್ಯ ಈ ಚಿತ್ರದ ಸ್ಕ್ರಿಪ್ಟ್ ಕೆಲಸ ವೇಗವಾಗಿ ನಡೆಯುತ್ತಿದೆ. ಸೂಪರ್ ಸ್ಟಾರ್ ಹುಟ್ಟುಹಬ್ಬದ ದಿನವಾದ ಆಗಸ್ಟ್ 9 ರಂದು ಚಿತ್ರದ ಸಂಪೂರ್ಣ ವಿವರಗಳು ಅಧಿಕೃತವಾಗಿ ಬಹಿರಂಗಗೊಳ್ಳುವ ಸಾಧ್ಯತೆಯಿದೆ. ಈ ಸಿನಿಮಾದ ಸಂಪೂರ್ಣ ಕಥೆಯನ್ನು ಸಿದ್ಧಪಡಿಸಲು ರಾಜಮೌಳಿಗೆ ಇನ್ನೂ ಎರಡು ತಿಂಗಳು ಬೇಕು. ಕಥೆ ಮುಗಿದ ನಂತರ ಜಕ್ಕಣ್ಣ - ಮಹೇಶ್ ಬಾಬು ಕಾಂಬಿನೇಷನ್‌ನ ಸಿನಿಮಾ ಪ್ರೇಕ್ಷಕರನ್ನು ಬೆರಗುಗೊಳಿಸಲಿದೆ.  

ಇದನ್ನೂ ಓದಿ:TRP ರೇಸ್‌ನಲ್ಲಿ ʻಅಮೃತಧಾರೆʼಗೆ 3ನೇ ಸ್ಥಾನ.. ʻಭಾಗ್ಯಲಕ್ಷ್ಮೀʼ ವೀವರ್ಸ್‌ ಕುಸಿತ, No.1 ಯಾರು?

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

  

Trending News