Shah Rukh Khan Son Fees: ಬಾಲಿವುಡ್‌ನ ಕಿಂಗ್‌ ಶಾರುಖ್ ಖಾನ್ ಔಆರತದ ಅತ್ಯಂತ ಜನಪ್ರಿಯ ನಟ. ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್. ಇವರಿಗೆ ಮೂವರು ಮಕ್ಕಳಿದ್ದಾರೆ. ಆರ್ಯನ್ ಖಾನ್, ಸುಹಾನಾ ಮತ್ತು ಅಬ್ರಾಮ್. ಶಾರುಖ್ ಖಾನ್ ಅವರ ಕಿರಿಯ ಪುತ್ರ ಅಬ್ರಾಮ್‌ ಓದುವ ಶಾಲೆಯ ಶುಲ್ಕ ಕೇಳಿದ್ರೆ ನೀವು ಅರೆಕ್ಷಣ ಶಾಕ್‌ ಆಗುವಿರಿ. 


COMMERCIAL BREAK
SCROLL TO CONTINUE READING

ಶಾರುಖ್ ಖಾನ್ ಅವರ ಮಗ ಅಬ್ರಾಮ್ ಭಾರತದ ಅತ್ಯಂತ ದುಬಾರಿ ಶಾಲೆಗಳಲ್ಲಿ ಒಂದಾದ, ಮುಂಬೈನ ಅತ್ಯಂತ ಪ್ರತಿಷ್ಠಿತ ಶಾಲೆ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ವಿದ್ಯಾರ್ಥಿ. ಅಬ್ರಾಮ್ ಶಾಲೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಆಗಾಗ್ಗೆ ನೋಡಿದ್ದೇವೆ. 


ಇದನ್ನೂ ಓದಿ: ವಿಷ್ಣು ಸ್ಮಾರಕ ನಿರ್ಮಾಣ ಹೋರಾಟಕ್ಕೆ ಸುದೀಪ್​, ಧನಂಜಯ್​ ಬೆಂಬಲ 


ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನ ಫೀಸ್‌ ತರಗತಿಗೆ ತಕ್ಕಂತೆ ಬದಲಾಗುತ್ತದೆ. ವಿವಿಧ ವರದಿಗಳ ಪ್ರಕಾರ, LKG ತರಗತಿಯಿಂದ 7 ನೇ ತರಗತಿಯ ವರ್ಷದ ಶುಲ್ಕ 1.70 ಲಕ್ಷ ರೂಪಾಯಿ. 8ನೇ ತರಗತಿಯಿಂದ 10ನೇ ತರಗತಿವರೆಗೆ 4.48 ಲಕ್ಷ ರೂಪಾಯಿ ಫೀಸ್‌ ಇದೆ. 11ನೇ ಮತ್ತು 12ನೇ ತರಗತಿ (PCU 1st & 2nd) ಶುಲ್ಕವು ಸರಿಸುಮಾರು 9.65 ಲಕ್ಷ ರೂಪಾಯಿ ಆಗಿದೆ. ಶಾಲೆಯ ಶುಲ್ಕ ರಚನೆಯ ಪ್ರಕಾರ, ಅಬ್ರಾಮ್‌ನ ಮಾಸಿಕ ಶುಲ್ಕ 1.70 ಲಕ್ಷ ರೂಪಾಯಿ ಎಂದು ವರದಿಗಳು ತಿಳಿಸಿವೆ. 


ಭಾರತದ ಪ್ರಮುಖ ಶಾಲೆಗಳಲ್ಲಿ ಒಂದಾದ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು 2003 ರಲ್ಲಿ ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಸ್ಥಾಪಿಸಿದರು. ಶಾಲೆಯು ಏಳು ಅಂತಸ್ತಿನ ಕಟ್ಟಡ ಹೊಂದಿದ್ದು, ಸುಸಜ್ಜಿತ ತರಗತಿ ಕೊಠಡಿಗಳು, ಆಟದ ಮೈದಾನಗಳು, ಇಂಟರ್ನೆಟ್ ಸೌಲಭ್ಯ, ಸಂಪೂರ್ಣ ಹವಾನಿಯಂತ್ರಿತಕ್ಲಾಸ್‌ ರೂಮ್, ಟೆರೇಸ್ ಗಾರ್ಡನ್, ಟೆನ್ನಿಸ್ ಕೋರ್ಟ್‌ ಹೀಗೆ ನಾನಾ ಸೌಲಭ್ಯಗಳನ್ನು ಹೊಂದಿದೆ. 


ಇದನ್ನೂ ಓದಿ:  ಐಶ್ವರ್ಯಾ ರೈ ಅಭಿಷೇಕ್​ ಬಚ್ಚನ್ ಗಿಂತ ಎಷ್ಟು ವರ್ಷ ದೊಡ್ಡವರು ಗೊತ್ತೇ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.