ಐಶ್ವರ್ಯಾ ರೈ ಅಭಿಷೇಕ್​ ಬಚ್ಚನ್ ಗಿಂತ ಎಷ್ಟು ವರ್ಷ ದೊಡ್ಡವರು ಗೊತ್ತೇ!

Aishwarya Rai Abhishek Bachchan Age Gap : ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಡಿವೋರ್ಸ್ ವದಂತಿ ಭಾರೀ ಸುದ್ದಿಯಲ್ಲಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. 

Written by - Chetana Devarmani | Last Updated : Dec 17, 2023, 01:56 PM IST
  • ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್‌ ವಿಚ್ಛೇದನ
  • ಇವರಿಬ್ಬರು ಮದುವೆಯಾಗಿ 16 ವರ್ಷ ಕಳೆದಿದೆ
  • ಐಶ್ವರ್ಯಾ ಗಿಂತ ಅಭಿಷೇಕ್‌ ಎಷ್ಟು ವರ್ಷ ಚಿಕ್ಕವರು ಗೊತ್ತೇ!
ಐಶ್ವರ್ಯಾ ರೈ ಅಭಿಷೇಕ್​ ಬಚ್ಚನ್ ಗಿಂತ ಎಷ್ಟು ವರ್ಷ ದೊಡ್ಡವರು ಗೊತ್ತೇ!  title=
Aishwarya Rai Abhishek Bachchan

Aishwarya Rai Abhishek Bachchan Age Gap : ನಟಿ ಐಶ್ವರ್ಯಾ ರೈ ಸದ್ಯ ಮುಖ್ಯಾಂಶಗಳಲ್ಲಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಐಶ್ವರ್ಯಾ ರೈ ಡಿವೋರ್ಸ್ ವದಂತಿ ಭಾರೀ ಸುದ್ದಿಯಲ್ಲಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಮದುವೆಯಾಗಿ 16 ವರ್ಷ ಕಳೆದಿದೆ. ಇದೀಗ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗ್ತಿದೆ. 

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್‌ ಮದುವೆಗೂ ಮುನ್ನ ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ್ದಾರೆ.ಇವರಿಬ್ಬರ ನಡುವೆ ಮೂರು ವರ್ಷಗಳ ವಯಸ್ಸಿನ ಅಂತರವಿದೆ. ಐಶ್ವರ್ಯಾ ರೈ ಮತ್ತು ಅಭಿಷೇಕ್ ಮೊದಲ ಬಾರಿಗೆ 2000 ರಲ್ಲಿ ಬಿಡುಗಡೆಯಾದ 'ಧೈ ಅಕ್ಷರ್ ಪ್ರೇಮ್ ಕೆ' ಚಿತ್ರದ ಸೆಟ್‌ನಲ್ಲಿ ಮೀಟ್‌ ಆದರು. 

ಈ ಸಿನಿಮಾ ಸೆಟ್‌ನಲ್ಲಿ ಶುರುವಾದ ಸ್ನೇಹ ಇವರಿಬ್ಬರನ್ನು ಆತ್ಮೀಯರನ್ನಾಗಿ ಮಾಡಿತು. ನಂತರ ಇಬ್ಬರೂ ಒಟ್ಟಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದರು. ದಿನ ಕಳೆದಂತೆ ಸ್ನೇಹ ಪ್ರೀತಿಯಾಗಿ ಬದಲಾಯಿತು. 

ಇದನ್ನೂ ಓದಿ: Aishwarya Rai: ವಿಚ್ಛೇದನ ವದಂತಿಗೆ ಬ್ರೇಕ್‌..‌ ನಮ್ಮ ಪ್ರೇಮ ಶಾಶ್ವತ ಎಂದ ಐಶ್ವರ್ಯ ಅಭಿಷೇಕ್! 

ಓಪ್ರಾ ವಿನ್ಫ್ರೇ ಶೋನಲ್ಲಿ ಐಶ್ವರ್ಯಾ ಅವರಿಗೆ  ಹೇಗೆ ಪ್ರಪೋಸ್ ಮಾಡಿದೆ ಎಂಬುದನ್ನು ಸ್ವತಃ ಅಭಿಷೇಕ್ ಹೇಳಿದ್ದಾರೆ. ಬಳಿಕ 4 ಜನವರಿ 2007 ರಂದು ಐಶ್ವರ್ಯಾ ಮತ್ತು ಅಭಿಷೇಕ್ ಏಂಗೇಜ್ಮೆಂಟ್‌ ನಡೆಯಿತು. 20 ಏಪ್ರಿಲ್ 2007 ರಂದು ಐಶ್ವರ್ಯಾ ಮತ್ತು ಅಭಿಷೇಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ 4 ವರ್ಷಗಳ ನಂತರ ಆರಾಧ್ಯ ಜನಿಸಿದರು. 

ಮದುವೆ ಆಗಿ 16 ವರ್ಷಗಳ ನಂತರ ಐಶ್ವರ್ಯಾ ರೈ ಜೊತೆ ಅಭಿಷೇಕ್‌ ಮುನಿಸಿಕೊಂಡಿದ್ದಾರೆ. ಇವರಿಬ್ಬರೂ ಬೇರೆಯಾಗಿ ವಾಸಿಸುತ್ತಿದ್ದಾರೆ. ಐಶ್ವರ್ಯಾಗೆ ವಿಚ್ಛೇದನ ನೀಡಲಿದ್ದಾರೆ ಎಂಬೆಲ್ಲ ವದಂತಿಗಳು ಶುರುವಾಗಿವೆ. ಡಿವೋರ್ಸ್‌ಗೆ ಹಲವು ಕಾರಣಗಳಿರಬಹುದು. ಆದರೆ ಅದರಲ್ಲೊಂದು ಏಜ್‌ ಗ್ಯಾಪ್‌ ಎಂದು ಹಲವರು ಹೇಳುತ್ತಿದ್ದಾರೆ. 

ಅಭಿಷೇಕ್ ಬಚ್ಚನ್‌ ವಯಸ್ಸಿನಲ್ಲಿ ಐಶ್ವರ್ಯಾ ರೈಗಿಂತ ಚಿಕ್ಕವರು. ಐಶ್ವರ್ಯಾ ರೈ ಅವರಿಗಿಂತ ಅಭಿಷೇಕ್ 3 ವರ್ಷ ಚಿಕ್ಕವರು. ಹೀಗಾಗಿ ಇದು ಕೂಡ ಮನಸ್ತಾಪ ಮೂಡಲು ಕಾರಣವಾಗಬಹುದು ಎನ್ನುತ್ತಿದ್ದಾರೆ. ಐಶ್ವರ್ಯಾ ದೊಡ್ಡವರಾದ ಕಾರಣ ಸಹಜವಾಗಿಯೇ ಡಾಮಿನೆನ್ಸಿ ಬರಬಹುದು. ಇದು ಅಭಿಷೇಕ್‌ ಅಸಹನೆಗೆ ಕಾರಣವಾಗಬಹುದು ಎಂದು ಹಲವರ ಅಭಿಪ್ರಾಯವಾಗಿದೆ. 

ಇದನ್ನೂ ಓದಿ: ಡಿವೋರ್ಸ್ ಬಳಿಕ ಐಶ್ವರ್ಯಾಗೆ ಅಭಿಷೇಕ್ ಎಷ್ಟು ಜೀವನಾಂಶ ನೀಡಬೇಕು? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News