Shah Rukh Khan Movie Pathaan On OTT: ಕಿಂಗ್ ಖಾನ್ ಅಭಿಮಾನಿಗಳಿಗೊಂದು ಸಂತಸದ ಸುದ್ದಿ. ಶಾರುಖ್ ಖಾನ್ ಅವರ ಬ್ಲಾಕ್ ಬಸ್ಟರ್ ಚಿತ್ರ 'ಪಠಾಣ್' ನಾಳೆ ಅಂದರೆ ಮಾರ್ಚ್ 22 ರಂದು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. 4 ವರ್ಷಗಳ ನಂತರ ಹಿರಿತೆರೆಗೆ ಮರಳಿರುವ ಶಾರೂರ್ ಖಾನ್ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಸೃಷ್ಟಿಸಿದ್ದರು. ಪಠಾಣ್‌ನ ಬಿಡುಗಡೆ ಆಗಿ ತಿಂಗಳಾಗಲಿದೆ, ಆದರೆ ಇನ್ನೂ ಚಿತ್ರವು ಚಿತ್ರಮಂದಿರಗಳಲ್ಲಿ ಉಳಿದಿದೆ. ನೀವು ಇನ್ನೂ ಪಠಾಣ್ ಸಿನಿಮಾ ನೋಡಿಲ್ಲದಿದ್ದರೆ, ನೀವು ಶಾರುಖ್ ಖಾನ್ ಅವರ ಪಠಾಣ್ ಚಿತ್ರವನ್ನು OTT ನಲ್ಲಿ ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದು.


COMMERCIAL BREAK
SCROLL TO CONTINUE READING

ಯಾವ OTT ನಲ್ಲಿ ಬಿಡುಗಡೆಯಾಗಲಿದೆ?


ಸಿದ್ಧಾರ್ಥ್ ಆನಂದ್ ನಿರ್ದೇಶನದ ಶಾರುಖ್ ಖಾನ್ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ಪಠಾಣ್ ಮಾರ್ಚ್ 22 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ವಿವಾದದ ನಂತರ ಥಿಯೇಟರ್‌ನಲ್ಲಿ ಬಿಡುಗಡೆಗೆ ಮುನ್ನ ಸೆನ್ಸಾರ್ ಮಂಡಳಿಯಿಂದ ತೆಗೆದುಹಾಕಲಾದ ಪಠಾಣ್ ದೃಶ್ಯಗಳನ್ನು OTT ಯಲ್ಲಿ ನೀವು ನೋಡಬಹುದಾಗಿದೆ.


ಇದನ್ನೂ ಓದಿ: ಶಿಲ್ಪಾಶೆಟ್ಟಿಗೆ ಮೋಸ ಮಾಡಿದ್ರಾ ಅಕ್ಷಯ್ ಕುಮಾರ್! ಪ್ರೀತಿಯಲ್ಲಿರುವಾಗಲೇ..?


ವಾಸ್ತವವಾಗಿ, ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿವಾದಗಳು ಉಂಟಾಗಿದ್ದವು, ನಂತರ ಸೆನ್ಸಾರ್ ಮಂಡಳಿಯು ಚಿತ್ರದ ಹಲವಾರು ದೃಶ್ಯಗಳನ್ನು ಕತ್ತರಿಸಬೇಕಾಯಿತು. ಆದರೂ ಪಠಾಣ್ ಯಾವುದೇ ದೃಶ್ಯವನ್ನು ಕತ್ತರಿಸದೆ OTT ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಚಿತ್ರದಲ್ಲಿ ಶಾರುಖ್ ಖಾನ್ ಅವರಿಗೆ ‘ಪಠಾಣ್’ ಎಂಬ ಹೆಸರು ಹೇಗೆ ಬಂತು ಎಂಬುದನ್ನು ಹೇಳುವ ವಿಶೇಷ ದೃಶ್ಯವನ್ನು ಸಹ ನೀವು ನೋಡಬಹುದು.


ಶಾರು ಖಾನ್ ಅವರ ಚಿತ್ರ 'ಪಠಾಣ್' ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇತ್ತೀಚೆಗಷ್ಟೇ ಪಠಾಣ್ ಬಿಡುಗಡೆಯಾದ 50 ದಿನಗಳ ಸಂಭ್ರಮ ಆಚರಿಸಿತು. ಪಠಾಣ್ ಇನ್ನೂ ಯುಕೆ, ಯುಎಸ್, ಆಸ್ಟ್ರೇಲಿಯಾ, ಯುಎಇ ಮತ್ತು ಕೆನಡಾದಂತಹ ದೇಶಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪಠಾಣ್ ಭಾರತದಲ್ಲಿ 650 ಕೋಟಿಗೂ ಹೆಚ್ಚು ಗಳಿಸಿದ್ದರೆ, ವಿದೇಶಿ ನೆಲದಲ್ಲಿ 1,000 ಕೋಟಿಗೂ ಹೆಚ್ಚು ಕಬಳಿಸಿದೆ.


ಇದನ್ನೂ ಓದಿ: "ವಾರಿಸು ಸೆಟ್‌ನಲ್ಲಿಯೇ ನಾನು ಪ್ರಜ್ಞೆ ತಪ್ಪುತ್ತಿದ್ದೆ" ನಟಿ ರಶ್ಮಿಕಾ ರಿವೀಲ್ ಮಾಡಿದ್ದೇನು?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.