Shah Rukh Khan : ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ಕೊಳ್ಳೆ ಹೊಡೆಯುತ್ತಿದೆ. ಕಳೆದ ವಾರ ಬಹಳ ಸಂಭ್ರಮದಿಂದ ಬಿಡುಗಡೆಯಾಯಿತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದು, 10 ದಿನಗಳಲ್ಲಿ 700 ಕೋಟಿ ಕಲೆ ಹಾಕಿದೆ. 


COMMERCIAL BREAK
SCROLL TO CONTINUE READING

ಇದರ ಹೊರತಾಗಿಯೂ, ಅಟ್ಲೀ ನಿರ್ದೇಶನದ ಜವಾನ್‌ ಕ್ರೇಜ್ ಕಡಿಮೆಯಾಗಿಲ್ಲ. ಸೆಪ್ಟೆಂಬರ್ 15 ರಂದು ಮುಂಬೈನಲ್ಲಿ ಜವಾನ್‌ ಸಕ್ಸಸ್‌ ಪಾರ್ಟಿ ನಡೆಯಿತು. ಈ ಇವೆಂಟ್‌ನಲ್ಲಿ ಚಿತ್ರತಂಡ ಭಾಗಿಯಾಗಿತ್ತು. ಈ ವೇಳೆ ಶಾರುಖ್‌ ಖಾನ್‌ ಹೇಳಿದ ಒಂದು ಮಾತು ಭಾರೀ ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಅಚ್ಚರಿ ಮೂಡಿಸಿದೆ. 


ಇದನ್ನೂ ಓದಿ : ಕಲ್ಕಿ 2898 AD ಯಿಂದ ಪ್ರಭಾಸ್ ನ್ಯೂ ಲುಕ್ ಲೀಕ್...ವಿಎಫ್‌ಎಕ್ಸ್ ಕಂಪನಿಯ ವಿರುದ್ಧ ದೂರು!! 


ಶಾರುಖ್ ಖಾನ್, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ ಮತ್ತು ಇತರರು ಸೇರಿದಂತೆ ಚಿತ್ರದ ಇಡೀ ತಂಡವು ಭಾಗವಹಿಸಿತ್ತು. ಆದರೆ, ನಯನತಾರಾ, ಪ್ರಿಯಾಮಣಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಮುಂಬೈನಲ್ಲಿ ನಡೆದ ಜವಾನ್ ಚಿತ್ರದ ಸಕ್ಸಸ್‌ ಪಾರ್ಟಿಯಲ್ಲಿ, ನಿರೂಪಕರು ವಿಜಯ್ ಸೇತುಪತಿ ಅವರನ್ನು ಕೇಳಿದರು, "ಈ ರೀತಿಯ ಯಶಸ್ಸಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ", ಅದಕ್ಕೆ ಅವರು ಉತ್ತರಿಸಿದರು, "ಸರ್ ತುಂಬಾ ಯಶಸ್ಸನ್ನು ಕಂಡಿದ್ದಾರೆ. ಮೊದಲನೆಯದಾಗಿ, ನಾನು ಇಷ್ಟೊಂದು ಪ್ರೀತಿಯನ್ನು ನಿರೀಕ್ಷಿಸಿರಲಿಲ್ಲ, ಚೆನ್ನೈನಲ್ಲಿ ಬಿಡುಗಡೆಯಾದ ಮೊದಲ ದಿನ, ಬಹಳಷ್ಟು ಜನರು ನನಗೆ ಕರೆ ಮಾಡಿ ಜವಾನ್ ಮೊದಲ ದಿನದ ಮೊದಲ ಶೋಗೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಜನರು ಅವರನ್ನು (ಎಸ್‌ಆರ್‌ಕೆ) ತುಂಬಾ ಪ್ರೀತಿಸುತ್ತಾರೆ ಎಂದರು. 


ಶಾರುಖ್ ಖಾನ್ ಹೆಸರು ಸಾಕು. ಅವರು ಜನರೊಂದಿಗೆ ವರ್ತಿಸುವ ರೀತಿ ಅಮೋಘ. ಶಾರುಖ್ ಪ್ರೀತಿಯನ್ನು ಮಾತ್ರ ನೀಡುತ್ತಾರೆ. ಐ ಲವ್ ಯೂ ಸರ್ ಎಂದು ವಿಜಯ್‌ ಸೇತುಪತಿ ಮಾತು ಮುಗಿಸಿದರು.


ನಂತರ ಶಾರುಖ್ ಖಾನ್ ಪ್ರತಿಯಾಗಿ, ಐ ಲವ್ ಯೂ ಟೂ ಸರ್. ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ. ನಾವು ಈಗ ಮದುವೆಯಾಗಬಹುದು ಎಂದು ನಾನು ಭಾವಿಸುತ್ತೇನೆ. ನಾವು ಒಟ್ಟಿಗೆ ಸಾಕಷ್ಟು ನಟನೆಯನ್ನು ಮಾಡುತ್ತೇವೆ ಎಂರದರು. ಅದಕ್ಕೆ ವಿಜಯ್‌ ದಳಪತಿ, ಏನೂ ತಪ್ಪಿಲ್ಲ ಸರ್ ಎಂದು ಉತ್ತರಿಸಿದರು.


ಇದನ್ನೂ ಓದಿ : ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ಸಮಂತಾ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.