ಕಲ್ಕಿ 2898 AD ಯಿಂದ ಪ್ರಭಾಸ್ ನ್ಯೂ ಲುಕ್ ಲೀಕ್...ವಿಎಫ್‌ಎಕ್ಸ್ ಕಂಪನಿಯ ವಿರುದ್ಧ ದೂರು!!

Kalki 2898 AD Prabhas Look: ಮಹಾನಟಿ ನಿರ್ದೇಶಕ ನಾಗ್ ಅಶ್ವಿನ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಕಲ್ಕಿ 2898 ಸಿನಿಮಾ ಪ್ಯಾನ್‌ ಪ್ಯಾನ್ ವರ್ಲ್ಡ್ ಲೆವೆಲ್ ನಲ್ಲಿ ನಿರ್ಮಾಣವಾಗುತ್ತಿದ್ದು, ಸದ್ಯ ಈ ಚಿತ್ರದ ಪ್ರಭಾಸ್ ನ್ಯೂ ಲುಕ್ ಲೀಕ್ ಆಗಿ, ವೈರಲ್‌ ಆಗುತ್ತಿದೆ. 

Written by - Savita M B | Last Updated : Sep 17, 2023, 01:25 PM IST
  • ಪ್ರಭಾಸ್‌ ನಟಿಸುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಕಲ್ಕಿ 2898.
  • ಸದ್ಯ ಈ ಸಿನಿಮಾದ ಶೂಟಿಂಗ್‌ ಭರ್ಜರಿಯಾಗಿ ನಡೆಯುದ್ದು, ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದೆ
  • ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಚಿತ್ರವಾಗಿ ಬರುತ್ತಿರುವ ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ
ಕಲ್ಕಿ 2898 AD ಯಿಂದ ಪ್ರಭಾಸ್ ನ್ಯೂ ಲುಕ್ ಲೀಕ್...ವಿಎಫ್‌ಎಕ್ಸ್ ಕಂಪನಿಯ ವಿರುದ್ಧ ದೂರು!! title=

Kalki 2898 AD: ಪ್ರಸ್ತುತ ಪ್ಯಾನ್ ಇಂಡಿಯಾ ಚಿತ್ರಗಳಲ್ಲಿ ಸತತವಾಗಿ ಬ್ಯುಸಿಯಾಗಿರುವ ಪ್ರಭಾಸ್‌ ನಟಿಸುತ್ತಿರುವ ಮತ್ತೊಂದು ದೊಡ್ಡ ಸಿನಿಮಾ ಕಲ್ಕಿ 2898. ಸದ್ಯ ಈ ಸಿನಿಮಾದ ಶೂಟಿಂಗ್‌ ಭರ್ಜರಿಯಾಗಿ ನಡೆಯುದ್ದು, ಬಹುತೇಕ ಚಿತ್ರೀಕರಣ ಮುಕ್ತಾಯಗೊಂಡಿದೆ ಎಂದು ವರದಿ ಮಾಡಲಾಗಿದೆ. 

ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ಯಾನ್ ವರ್ಲ್ಡ್ ಚಿತ್ರವಾಗಿ ಬರುತ್ತಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ-ಶೈನಿಂಗ್ ಲುಕ್‌ನಲ್ಲಿ ʼಓ ಮೈ ಕಡುವಲೆʼ ಖ್ಯಾತಿಯ ನಟಿ ಫೋಟೊಸ್‌ ವೈರಲ್

ಟೈಟಲ್‌ನಿಂದಲೇ ನಿರೀಕ್ಷೆ ಹೆಚ್ಚಿಸಿದ್ದ ಕಲ್ಕಿ 2898 ಸಿನಿಮಾ ಭಾರತದಲ್ಲೇ ಅತ್ಯಂತ ದುಬಾರಿ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ ಈ ಚಿತ್ರದಲ್ಲಿನ ಪ್ರಭಾಸ್‌ ಪಾತ್ರದ ಪೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಲೀಕ್‌ ಆಗಿದೆ. ಈ ಚಿತ್ರ ವಿಎಫ್‌ಎಕ್ಸ್ ಕಂಪನಿಯಿಂದ ಲೀಕ್ ಆಗಿದೆಯೆಂದು ತಿಳಿದುಬಂದಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಚಿತ್ರತಂಡ ವಿಎಫ್‌ಎಕ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ, ಭಾರಿ ಪರಿಹಾರವನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. 

ಇನ್ನು ಈ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಅಂದರೇ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಈ ಸಿನಿಮಾದಲ್ಲಿ ಟಾಪ್ ನಿರ್ದೇಶಕ ರಾಜಮೌಳಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳೂ ಸಹ ಹರಿದಾಡುತ್ತಿವೆ. ಹೀಗೆ ದಿನದಿಂದ ದಿನಕ್ಕೆ ಚಿತ್ರ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುತ್ತಿರುವ ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಮತ್ತು ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.. 

ಇದನ್ನೂ ಓದಿ-SIIMA 2023: ಸುದೀಪ್ ನಟನೆಯ ವಿಕ್ರಾಂತ್ ರೋಣ ಮಡಿಲಿಗೆ ಎರಡು ಸೈಮಾ ಪ್ರಶಸ್ತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News