Shahid Kapoor , ಮೀರಾ ಹೋಳಿ ಸಂಭ್ರಮ ; ವೈರಲ್ ಆಯಿತು Romantic Video
ನಟ ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್ ಕಪೂರ್ ಹೋಳಿ ಸಂಭ್ರಮದ ವಿದೆಒಗಳು ಈಗ ಭಾರಿ ವೈರಲ್ ಆಗುತ್ತಿದೆ. ಇವರ ಕೊಲಾಜ್ ವೀಡಿಯೊ ಇವರಿಬ್ಬರನ್ನು ಬೆಸ್ಟ್ ಕಪಲ್ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ.
ನವದೆಹಲಿ : ಹೋಳಿ ಹಬ್ಬವನ್ನು ಸಾಮಾನ್ಯವಾಗಿ ರೋಮ್ಯಾಂಟಿಕ್ ಹಬ್ಬ ಎಂದು ಕೂಡಾ ಕರೆಯಲಾಗುತ್ತದೆ. ಶಾಹಿದ್ ಕಪೂರ್ (Shahid Kapoor) ಮತ್ತು ಮೀರಾ ಕಪೂರ್ ಶೇರ್ ಮಾಡಿರುವ ಈ ವೀಡಿಯೊ ನೋಡಿದರೆ, ಈ ಮಾತು ನಿಜ ಅನಿಸುತ್ತದೆ. ಹೋಳಿ ಸಂದರ್ಭದ ಕೆಲವು ವೀಡಿಯೊ ಗಳನ್ನೂ ಮೀರಾ ರಜಪೂತ್ (Mira Rajput) ಶೇರ್ ಮಾಡಿಕೊಂಡಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ವೀಡಿಯೊವನ್ನು ಶೇರ್ ಮಾಡುವಾಗ ಮೀರಾ (Meera Rajput), ತನಗೆ ಈ ಬಾರಿ ನಿಜವಾದ ಶಾಹಿದ್ ಸಿಕ್ಕಿರುವುದಾಗಿ ಕಾಪ್ಶನ್ ನೀಡಿದ್ದಾರೆ. 'ಹ್ಯಾಪಿ ಹೋಳಿ! ಈ ಸಮಯದಲ್ಲಿ ನನಗೆ ನಿಜವಾದ ಎಸ್.ಕೆ. ಸಿಕ್ಕಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೊಗೆ ಶಾಹಿದ್ (Shahid Kapoor) ಮತ್ತು ಮೀರಾ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಈ ಜೋಡಿಯನ್ನು ಬೆಸ್ಟ್ ಕಪಲ್ ಎಂದರೆ ಇನ್ನು ಕೆಲವರು ಪರ್ಫೆಕ್ಟ್ ಕಪಲ್ ಎನ್ನುತ್ತಿದ್ದಾರೆ.
Sofia Hayat: 'ಹೋಳಿ ಹಬ್ಬದ ಸಂದರ್ಭದಲ್ಲಿ ಆತ ನನ್ನ ಸ್ಕರ್ಟ್ ಗೆ ಕೈ ಹಾಕಿದ್ದ'
ಈ ಫೋಟೋಗಳಲ್ಲಿ (Photo) ಒಂದನ್ನು ಹಂಚಿಕೊಂಡ ಶಾಹಿದ್, 'ಹ್ಯಾಪಿ ಹೋಳಿ' ಎಂದು ಬರೆದಿದ್ದಾರೆ. ಈ ಫೋಟೋಗೆ ಕಾಮೆಂಟ್ ಮಾಡಿರುವ ಶಾಹಿದ್ ಸಹೋದರ ಇಶಾನ್ ಖಟ್ಟರ್, ಹಾರ್ಟ್ ನ ಇಮೊಜಿಯನ್ನು ಕಳುಹಿಸಿದ್ದಾರೆ. ಶಾಹಿದ್ ಸಹನಟಿ ರಾಶಿ ಖನ್ನಾ, ಕೂಡಾ ಈ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೀಘ್ರದಲ್ಲೇ ಶಾಹಿದ್ 'ಜರ್ಸಿ' (Jersy) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ತೆಲುಗು ಸಿನಿಮಾ (Cinema) ರಿಮೇಕ್ ಆಗಿದೆ. ಮೂಲ ಚಿತ್ರದಲ್ಲಿ ತೆಲುಗು ಸೂಪರ್‌ಸ್ಟಾರ್‌ಗಳಾದ ನಾನಿ ಮತ್ತು ಶ್ರದ್ಧಾ ಶ್ರೀನಾಥ್ (Shruddha Shrinath) ನಟಿಸಿದ್ದಾರೆ. ಈ ಚಿತ್ರವನ್ನು ಗೌತಮ್ ತಿನ್ನನುರಿ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ : Viral Video : ಹೋಳಿ ಬಣ್ಣ ಹಿಡಿದು ಶೃದ್ಧ ಕಪೂರ್ ಹಿಂದೆ ಬಂದ ಮಕ್ಕಳು..! ಮುಂದೆ ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.