Sofia Hayat: 'ಹೋಳಿ ಹಬ್ಬದ ಸಂದರ್ಭದಲ್ಲಿ ಆತ ನನ್ನ ಸ್ಕರ್ಟ್ ಗೆ ಕೈ ಹಾಕಿದ್ದ'

Sofia Hayat Revelation - ಬಾಲಿವುಡ್ (Bollywood) ನಟಿ ಸೋಫಿಯಾ ಹಯಾತ್ ಬಹಿರಂಗ ಹೇಳಿಕೆಯೊಂದನ್ನು ನೀಡಿದ್ದಾರೆ. ಇದರಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಜೊತೆಗೆ ನಡೆದ ಒಂದು ಕಹಿ ಘಟನೆಯ ಕುರಿತು ಉಲ್ಲೇಖಿಸಿದ್ದಾರೆ. ಅವರು ಉಲ್ಲೇಖಿಸಿರುವ ಘಟನೆಗೆ ಜನರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. 

Written by - Nitin Tabib | Last Updated : Mar 29, 2021, 04:33 PM IST
  • ತನ್ನ ಜೊತೆಗೆ ನಡೆದ ಒಂದು ಕಣಿ ಘಟನೆ ನೆನಪಿಸಿಕೊಂಡ ಸೋಫಿಯಾ
  • ಪಾರ್ಟಿಯೊಂದರ ವೇಳೆ ವ್ಯಕ್ತಿ ನೇರವಾಗಿ ನನ್ನ ಸ್ಕರ್ಟ್ ಗೆ ಕೈಹಾಕಿದ್ದ .
  • ಈ ಘಟನೆ ಬಗ್ಗೆ ತಿಳಿದು ಜನರು ಜಾಗರೂಕರಾಗಿರಬೇಕು ಎಂಬುದು ಸೋಫಿಯಾ ಅಭಿಮತ.
Sofia Hayat: 'ಹೋಳಿ ಹಬ್ಬದ ಸಂದರ್ಭದಲ್ಲಿ ಆತ ನನ್ನ ಸ್ಕರ್ಟ್ ಗೆ ಕೈ ಹಾಕಿದ್ದ' title=
Sofia Hayat Revelation (File Photo)

ನವದೆಹಲಿ: Sofia Hayat Revelation - ದೇಶಾದ್ಯಂತ ಜನರು ಹೋಳಿ ಹಬ್ಬದ ಬಣ್ಣಗಳಲ್ಲಿ ಮಿಂದೇಳುತ್ತಿದ್ದಾರೆ. ಎಲ್ಲರೂ ಈ ಬಣ್ಣಗಳ ಹಬ್ಬವನ್ನು ಎಂಜಾಯ್ ಮಾಡುತ್ತಿದ್ದಾರೆ. ಏತಮಧ್ಯೆ ನಟಿ ಸೋಫಿಯಾ ಹಯಾತ್ (Sofia Hayat) ಅವರು ಹಂಚಿಕೊಂಡ ಒಂದು ಘಟನೆ ತುಂಬಾ ವೈರಲ್ ಆಗುತ್ತಿದೆ. ಈ ಘಟನೆಯ ಕುರಿತು ಕೇಳಿ ಜನರೂ ಕೂಡ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಹೋಳಿ ಹಬ್ಬದ ಆಚರಣೆಯ (Sofia Hayat Holi) ವೇಳೆ ತಮ್ಮೊಂದಿಗೆ ಯಾವ ರೀತಿಯ ದುರ್ವರ್ತನೆ ನಡೆದಿದ್ದು ಎಂಬುದನ್ನು ಹೇಳಿಕೊಂಡಿರುವ ಸೋಫಿಯಾ, ಆ ವ್ಯಕ್ತಿ ತಮ್ಮ ಸ್ಕರ್ಟ್ ಗೆ ಕೈ ಹಾಕಿದ್ದ ಎಂದಿದ್ದಾರೆ. 

ಸೋಫಿಯಾ ಜೊತೆ ನಡೆದಿತ್ತು ಈ ದುರ್ವರ್ತನೆ.
ಸ್ಪಾಟ್ ಬಾಯ್ ಜೊತೆಗೆ ಮಾತನಾಡುತ್ತ ಹೇಳಿರುವ ಸೋಫಿಯಾ, " ನಾನು ಹೋಳಿ ಹಬ್ಬದ ಪಾರ್ಟಿಯಲ್ಲಿದ್ದೆ. ಅಲ್ಲಿ ಹಲವು ಸೆಲಿಬ್ರಿಟಿಗಳು ಸೇರಿದ್ದರು. ಹಲವು ಜನರು ನನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಅಭಿಮಾನಿಗಳು ಹೆಚ್ಚಾಗಿರುವ ಇಂತಹ ಪ್ರದೇಶಗಳಲ್ಲಿ ನಾನು ಎಚ್ಚರಿಕೆಯಿಂದ ಇರುತ್ತೇನೆ. ಆದರೆ, ಈ ಬಾರಿ ಮಾತ್ರ ನನ್ನ ಚಿತ್ತ ವಿಚಲಿತಗೊಂಡಿತು ಏಕೆಂದರೆ ನಾನು ಭಾಂಗ್ ಬೆರೆಸಿದ ಪಾನಿಪುರಿ ಸೇವಿಸಿದ್ದೆ. ಬಳಿಕ ನಾನು ಖುಷಿಯ ಅಲೆಯಲ್ಲಿ ತೆಲಾಡುತ್ತಿದ್ದೆ ಹಾಗೂ ನನಗೆ ನನ್ನ ಮೇಲೆಯೇ ಕಂಟ್ರೋಲ್ ಇರಲಿಲ್ಲ. ಆ ಸಂದರ್ಭದಲ್ಲಿ ಫೋಟೋ ಕ್ಲಿಕ್ಕಿಸುವಾಗ ಓರ್ವ ವ್ಯಕ್ತಿ ನನ್ನ ಸ್ಕರ್ಟ್ ಗೆ ಕೈ ಹಾಕಿದ್ದ (Sexual Harrasment). ಮೊದ-ಮೊದಲಿಗೆ ಯಾರು ಈ ರೀತಿ ಏಕೆ ಮಾಡುತ್ತಾರೆ ಎಂಬ ಆಲೋಚನೆ ಬಂತು, ಆದರೆ, ಮತ್ತೆ ಆ ಕೃತ್ಯ ನಡೆಯಿತು. ಆಗ ನಾನು ಆ ವ್ಯಕ್ತಿಯ ಎದೆಗೆ ಜೋರಾಗಿ ಹೊಡೆದೆ ಮತ್ತು ಆತ ಹೊಡೆತದ ರಬಸಕ್ಕೆ ನೆಲಕ್ಕೆ ಕುಸಿದ" ಎಂದು ಹೇಳಿದ್ದಾರೆ. 

ಇದನ್ನೂ ಓದಿ- ನನ್ನ ಮುಂದೆ ನಟ ಅಲೋಕ್ ನಾಥ್ ಏಕಾಏಕಿ ಬಟ್ಟೆ ಬಿಚ್ಚಿ ದೌರ್ಜನ್ಯಕ್ಕೆ ಮುಂದಾದ- ಮಹಿಳೆಯೊಬ್ಬಳ ಆರೋಪ

ಈ ಘಟನೆಯ ಕುರಿತು ಮುಂದೆ ಮಾತನಾಡಿರುವ ಸೋಫಿಯಾ, "ಈ ಘಟನೆಯ ಬಳಿಕ ಓರ್ವ ಮಾಧ್ಯಮ ವ್ಯಕ್ತಿ ನನ್ನನ್ನು ರಕ್ಷಿಸಿ ನನ್ನ ವಾಹನದವರೆಗೆ ತಲುಪಿಸಿದೆ. ನಂತರ ನಾನು ಭಾರಿ ಕಷ್ಟಪಟ್ಟು ಮನೆಗೆ ತಲುಪಿದೆ. ಈ ಕುರಿತು ಮಾತನಾಡಿರುವ ಸೋಫಿಯಾ "ಆ ಸಂದರ್ಭದಲ್ಲಿ ಓರ್ವ ಮಾಧ್ಯಮಕರ್ಮಿ ಹಾಗೂ ನನ್ನ ಸ್ನೇಹಿತ ನನ್ನ ಬಳಿ ಬಂದು ಬನ್ನಿ ನಿಮ್ಮನ್ನು ನಾನು ವಾಹನದವರೆಗೆ ತಲುಪಿಸುವೆ ಎಂದು ವಾಹನದವರೆಗೆ ತಲುಪಿಸಿ, ಈಗ ನೀನು ಮನೆಗೆ ಹೋಗು ಎಂದ. ಇಲ್ಲಿ ಜನರು ಹುಚ್ಚರಂತೆ ವರ್ತಿಸುತ್ತಿದ್ದಾರೆ ಎಂದ ಆತನ ನೆರವಿನಿಂದ ಸೇಫಾಗಿ  ನಾನು ವಾಹನದವರೆಗೆ ತಲುಪಿದೆ ಮತ್ತು ಅಲ್ಲಿಂದ ನಾನು ನನ್ನ ಮನೆಗೆ ತೆರಳಿದೆ' ಎಂದಿದ್ದಾಳೆ.

ಇದನ್ನೂ ಓದಿ- #ME TOO: ಸ್ಕ್ರಿಪ್ಟ್ ನೆಪ ಹೇಳಿ ಆಫೀಸ್ ಕರೆದ ಖ್ಯಾತ ಡೈರೆಕ್ಟರ್ ಈ ನಟಿಯ ಜೊತೆ..!

ಜನರಿಗೆ ಇಂತಹ ಘಟನೆಯ ಬಗ್ಗೆ ಅರಿವಿರಬೇಕು ಎನ್ನುತ್ತಾಳೆ ಸೋಫಿಯಾ (Sofia Hayat Holi Revelation)
ತಮ್ಮ ಈ ಮಾತುಕತೆಯ ವೇಳೆ ಹೇಳಿರುವ ಸೋಫಿಯಾ (Sofia Hayat Instagram)" ಈ ಘಟನೆಯ ಕುರಿತು ಜನರಿಗೆ ತಿಳಿಯಬೇಕು ಎಂಬುದು ನನ್ನ ಅನಿಸಿಕೆ ಮತ್ತು ಜನರು ಇಂತಹ ಪ್ರದೇಶಗಳಲ್ಲಿ ತಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಜೊತೆಗೆ ಹೋಗಬೇಕು" ಎನ್ನುತ್ತಾಳೆ. ಸೋಫಿಯಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರವಾಗಿ ತಮ್ಮ ಭಾವಚಿತ್ರ ಮತ್ತು ವೀಡಿಯೊಗಳನ್ನು ಹಂಚಿಕೊಂಡು ಚರ್ಚೆಯಲ್ಲಿರುತ್ತಾಳೆ. ಇದಲ್ಲದೆ ತನ್ನ ಸೆನ್ಸೇಷನಲ್ ಭಾವಚಿತ್ರಗಳ ಮೂಲಕ ಕೂಡ ಸೋಫಿಯಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿರುತ್ತಾಳೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- ಸಲ್ಲು ಬಾಯಿ ಜೈಲಿಗೆ ಹೋಗಿದ್ದಕ್ಕ 'ಹ್ಯಾಪಿ' ಅಂದ ಬಿಟ್ಟಾಳ್ರಿ ಈ ನಟಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News