Clean Chit to Aryan Khan : ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕ್ಲೀನ್ ಚಿಟ್ ಸಿಕ್ಕಿದೆ. ಶುಕ್ರವಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಡ್ರಗ್ಸ್ ಪ್ರಕರಣದಲ್ಲಿ 6000 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ 14 ಆರೋಪಿಗಳನ್ನು ಹೆಸರಿಸಲಾಗಿದೆ. ಆದ್ರೆ, ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರು ಇಲ್ಲ. ಕಳೆದ ವರ್ಷ ಮುಂಬೈನ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಇದರಲ್ಲಿ ಆರ್ಯನ್ ಭಾಗಿಯಾಗಿದ್ದಾರೆ ಎಂದು ಜೈಲು ವಾಸ ಕುಡು ಅನುಭವಿಸಿದ್ದರು.


COMMERCIAL BREAK
SCROLL TO CONTINUE READING

ಆರ್ಯನ್‌ನನ್ನು ಬಂಧಿಸಿತ್ತು ಎನ್‌ಸಿಬಿ


ಆರ್ಯನ್ ಖಾನ್ ಮತ್ತು ಇತರ ಐದು ಜನರ ವಿರುದ್ಧ ಎನ್‌ಸಿಬಿಗೆ ಯಾವುದೇ ದೃಢವಾದ ಪುರಾವೆಗಳು ಕಂಡುಬಂದಿಲ್ಲ ಎಂದು ಹಿರಿಯ ಏಜೆನ್ಸಿ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಹೇಳಿದ್ದಾರೆ. ಆರ್ಯನ್ ಮತ್ತು ಮೋಹಕ್ ಹೊರತುಪಡಿಸಿ ಎಲ್ಲಾ ಆರೋಪಿಗಳ ಬಳಿ ನಶೆ ಪದಾರ್ಥಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ 14 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉಳಿದ ಆರು ಜನರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ದೂರು ದಾಖಲಾಗುತ್ತಿಲ್ಲ.


ಇದನ್ನೂ ಓದಿ : ಹಾಲಿವುಡ್ ನಟ ರೇ ಲಿಯೊಟ್ಟಾ ಇನ್ನಿಲ್ಲ


3 ಅಕ್ಟೋಬರ್ 2021 ರಂದು, ಬೂಟ್ ನಲ್ಲಿ ಡ್ರಗ್ಸ್ ಪಾರ್ಟಿಗೆ ಹೋಗಿದ್ದ ಆರ್ಯನ್ ಖಾನ್ ನನ್ನು NCB ಬಂಧಿಸಿತು. ಸುಮಾರು 28 ದಿನಗಳ ಕಾಲ ಜೈಲಿನಲ್ಲಿದ್ದ ಆರ್ಯನ್ ಬಾಂಬೆ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರ ಬಂದಿದ್ದ, ಈಗ ಈ ಪ್ರಕರಣದಿಂದ ಮುಕ್ತಿ ಸಿಕ್ಕಂತಾಗಲಿದೆ.


ಹಲವು ಮಹತ್ವದ ಸಂಗತಿಗಳನ್ನು ಬಹಿರಂಗಪಡಿಸಿದ ಎಸ್‌ಐಟಿ 


ಕೆಲವು ತಿಂಗಳ ಹಿಂದೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ತನಿಖೆಯ ಕೆಲವು ಮಾಹಿತಿಯನ್ನ ಹಂಚಿಕೊಂಡಿದೆ, ಅದು ಎನ್‌ಸಿಬಿ ಮುಂಬೈನ ಆರೋಪಗಳಿಗೆ ವ್ಯತಿರಿಕ್ತವಾಗಿದೆ. ಆರ್ಯನ್ ಖಾನ್ ಬಳಿ ಯಾವುದೆ ಡ್ರಗ್ಸ್ ಇರಲಿಲ್ಲ ಎಂಬುದು ಎಸ್ ಐಟಿ ತನಿಖೆಯಲ್ಲಿ ಕಂಡು ಬಂದಿದ್ದು, ಹೀಗಾಗಿ ಆತನ ಫೋನ್ ತೆಗೆದುಕೊಂಡು ಚಾಟ್ ಚೆಕ್ ಮಾಡುವ ಅಗತ್ಯವಿರಲಿಲ್ಲ. ಆರ್ಯನ್ ಖಾನ್ ಯಾವುದೇ ಅಂತರರಾಷ್ಟ್ರೀಯ ಸಿಂಡಿಕೇಟ್‌ನ ಭಾಗವಾಗಿದ್ದಾರೆ ಎಂದು ಮೊಬೈಲ್ ಚಾಟ್ ನಲ್ಲಿ ಯಾವುದೆ ಮಾಹಿತಿ ಸಿಕ್ಕಿಲ್ಲ ಎಂದು ಎಸ್‌ಐಟಿ ಹೇಳಿತ್ತು. ಇದಲ್ಲದೆ, ಎನ್‌ಸಿಬಿ ದಾಳಿ ಮಾಡುವ ವೇಳೆ ವೀಡಿಯೊ-ರೆಕಾರ್ಡ್ ಮಾಡಲಾಗಿಲ್ಲ ಎಂದು ತಿಳಿಸಿದೆ.


ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖಾ ತಂಡ ಡ್ರಗ್ಸ್ ಪಾರ್ಟಿ ವೇಳೆ ನಡೆಸಿದ ದಾಳಿಯಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದು ಹೇಳಿತ್ತು. ಎನ್‌ಸಿಬಿ ಹ್ಯಾಂಡ್ ಬುಕ್ ಪ್ರಕಾರ, ದಾಳಿಯ ಸಮಯದಲ್ಲಿ ವೀಡಿಯೊ ರೆಕಾರ್ಡಿಂಗ್ ಕಡ್ಡಾಯವಾಗಿದೆ, ಆದರೆ ಡ್ರಗ್ಸ್ ಪ್ರಕರಣದ ದಾಳಿಯ ಸಮಯದಲ್ಲಿ ಇದನ್ನು ಮಾಡಲಾಗಿಲ್ಲ. ಎಸ್‌ಐಟಿ ತನಿಖೆಯ ತರ್ಕವು ದಾಳಿಯ ನಡವಳಿಕೆ ಮತ್ತು ಏಜೆನ್ಸಿಯ ಮುಂಬೈ ಪ್ರಾದೇಶಿಕ ಘಟಕದ ಮಾಜಿ ನಿರ್ದೇಶಕ ಸಮೀರ್ ವಾಂಖೆಡೆ ಅವರ ಕಾರ್ಯಶೈಲಿಯ ಮೇಲೆ ಪ್ರಶ್ನೆಗಳನ್ನು ಎತ್ತಿದೆ. ಸಮೀರ್ ವಾಂಖೆಡೆ ಅವರನ್ನು ಅವರ ಪೋಷಕ ಕೇಡರ್‌ಗೆ ಹಿಂತಿರುಗಿಸಲಾಗಿದೆ ಮತ್ತು ವಿಷಯದ ತನಿಖೆಗಾಗಿ ಎಸ್‌ಐಟಿ ಮತ್ತು ಏಜೆನ್ಸಿಯ ವಿಜಿಲೆನ್ಸ್ ತಂಡದಿಂದ ಹಲವಾರು ಬಾರಿ ಪ್ರಶ್ನಿಸಲಾಗಿದೆ.


ಇದನ್ನೂ ಓದಿ : ಡೆತ್‌ನೋಟ್‌ ಬರೆದಿಟ್ಟು ಯುವ ನಟಿ ಆತ್ಮಹತ್ಯೆ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.