Dunki Box Office Day 6: 120 ಕೋಟಿ ಬಜೆಟ್‌ನಲ್ಲಿ ತಯಾರಾದ ಶಾರುಖ್ ಖಾನ್ ಅಭಿನಯದ ಡಂಕಿ 6 ದಿನದಲ್ಲಿ ಭರ್ಜರಿ ವ್ಯಾಪಾರ ಮಾಡಿದೆ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಅದ್ಭುತಗಳನ್ನು ಮಾಡುತ್ತಿದೆ. ಜವಾನ್ ಮತ್ತು ಪಠಾಣ್‌ಗೆ ಹೋಲಿಸಿದರೆ ಡಂಕಿ ಹಿಂದುಳಿದಿದ್ದರೂ, ಎಂದಿನಂತೆ ಈ ಬಾರಿಯೂ ಶಾರುಖ್ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದ್ದಾರೆ. 6ನೇ ದಿನಕ್ಕೆ ಚಿತ್ರ ಎಷ್ಟು ಗಳಿಕೆ ಮಾಡಿದೆ ಎಂಬುದನ್ನು ತಿಳಿಯೋಣ.


COMMERCIAL BREAK
SCROLL TO CONTINUE READING

Sacnilk ನ ಇತ್ತೀಚಿನ ವರದಿಯ ಪ್ರಕಾರ, ಡಂಕಿ 6 ನೇ ದಿನಕ್ಕೆ ಭಾರತದಲ್ಲಿ 10.25 ಕೋಟಿ ರೂ. 5 ದಿನಗಳಲ್ಲಿ ಚಿತ್ರ ಒಟ್ಟು 129.95 ಕೋಟಿ ಕಲೆಕ್ಷನ್ ಮಾಡಿದೆ. ಆರನೇ ದಿನದ ಅಂಕಿ-ಅಂಶಗಳನ್ನು ಸೇರಿಸಿದ ನಂತರ, ಈ ಚಿತ್ರವು ಈಗ ಭಾರತದಲ್ಲಿ 140.20 ಕೋಟಿ ತಲುಪಿದೆ. ಆದರೆ, ಗಳಿಕೆಯ ವಿಚಾರದಲ್ಲಿ 'ಡಂಕಿ' ಅಷ್ಟೊಂದು ಛಾಪು ಮೂಡಿಸಲು ಸಾಧ್ಯವಾಗಿಲ್ಲ.


ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ ಯುವತಿಯೊಂದಿಗೆ ಸಿಕ್ಕಿ ಬಿದ್ದ ನಟ ವಿಶಾಲ್‌ ವಿಡಿಯೋ ವೈರಲ್!


6 ದಿನಗಳ ವ್ಯವಹಾರ


120 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 6 ದಿನದಲ್ಲಿ ಭರ್ಜರಿ ವ್ಯಾಪಾರ ಮಾಡಿದೆ. ವಿಶ್ವಾದ್ಯಂತ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಈ ಚಿತ್ರದ ಕ್ರೇಜ್ ಪ್ರಪಂಚದಾದ್ಯಂತ ಕಂಡುಬರುತ್ತಿದೆ. ವಿಶ್ವದಾದ್ಯಂತ ಚಿತ್ರ 256.40 ಕೋಟಿ ಗಳಿಸಿದೆ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಈ ಚಿತ್ರ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ.


ಇದನ್ನೂ ಓದಿ: “ನಾನು ವಿಚ್ಛೇದನ ಪಡೆಯುತ್ತಿದ್ದೇನೆ..”- ಐಶ್ವರ್ಯಾಗೆ ಡಿವೋರ್ಸ್ ನೀಡಲು ಕಾರಣ ಹೇಳಿದ ಅಭಿಷೇಕ್


ಆದರೆ, ಐದನೇ ದಿನಕ್ಕೆ ಚಿತ್ರ ಭಾರತದಾದ್ಯಂತ 22.50 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಹೋಲಿಸಿದರೆ, ಅದರ ಅಂಕಿ ಅಂಶಗಳು ಆರನೇ ದಿನದಲ್ಲಿ ಕುಸಿದಿದೆ. ಅದೇ ಸಮಯದಲ್ಲಿ, ಜವಾನ್ ಮತ್ತು ಪಠಾಣ್‌ಗೆ ಹೋಲಿಸಿದರೆ ಚಿತ್ರವು ಹೆಣಗಾಡುತ್ತಿರುವಂತೆ ತೋರುತ್ತದೆ. ಜವಾನ್ 1100 ಕೋಟಿ ಗಿಂತ ಹೆಚ್ಚು ಕಲೆಕ್ಷನ್ ಮಾಡಿದ್ರೆ,  ಅದೇ ವೇಳೆ ಪಠಾಣ್ ಕೂಡ 1000 ಕೋಟಿ ದಾಟಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.