“ನಾನು ವಿಚ್ಛೇದನ ಪಡೆಯುತ್ತಿದ್ದೇನೆ..”- ಐಶ್ವರ್ಯಾಗೆ ಡಿವೋರ್ಸ್ ನೀಡಲು ಕಾರಣ ಹೇಳಿದ ಅಭಿಷೇಕ್

Abhishek Bachchan: ಸದ್ಯ ಬಾಲಿವುಡ್ ಪವರ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬೆಲ್ಲಾ ವದಂತಿ ಭಾರೀ ಹಬ್ಬುತ್ತಿದೆ. ಇದರ ನಡುವೆ ಹಳೆಯ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.

Written by - Bhavishya Shetty | Last Updated : Dec 26, 2023, 10:17 PM IST
    • ಅಭಿಷೇಕ್ ಬಚ್ಚನ್ ಟ್ವಿಟರ್‌ ಮೂಲಕ ಪೋಸ್ಟ್ ಶೇರ್
    • “ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ಏಕೆ ಎಂದು ಆಶ್ಚರ್ಯಪಡುತ್ತೀರಾ?"
    • ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬ ವದಂತಿ
“ನಾನು ವಿಚ್ಛೇದನ ಪಡೆಯುತ್ತಿದ್ದೇನೆ..”- ಐಶ್ವರ್ಯಾಗೆ ಡಿವೋರ್ಸ್ ನೀಡಲು ಕಾರಣ ಹೇಳಿದ ಅಭಿಷೇಕ್ title=
Abhishek Bachchan

Abhishek Bachchan: ಅದು 2014… ಅಭಿಷೇಕ್ ಬಚ್ಚನ್ ಟ್ವಿಟರ್‌ ಮೂಲಕ ಪೋಸ್ಟ್ ಒಂದನ್ನು ಶೇರ್ ಮಾಡಿ ಎಲ್ಲರಿಗೂ ಶಾಕ್ ನೀಡಿದ್ದರು. ಅಷ್ಟಕ್ಕೂ ಆ ಪೋಸ್ಟ್’ನಲ್ಲಿ ಇದ್ದಿದ್ದೇನು ಗೊತ್ತಾ?- ಹೀಗೆ; "ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ಏಕೆ ಎಂದು ಆಶ್ಚರ್ಯಪಡುತ್ತೀರಾ?"

ಇದನ್ನೂ ಓದಿ: ಕಿತ್ತಳೆ ಜ್ಯೂಸ್ ಕುಡಿದರೆ ದೂರವಾಗುತ್ತೆ ಈ ಕಾಯಿಲೆಗಳು… ಸಿಗುತ್ತೆ ಈ 5 ಅದ್ಭುತ ಪ್ರಯೋಜನಗಳು

ಸದ್ಯ ಬಾಲಿವುಡ್ ಪವರ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎಂಬೆಲ್ಲಾ ವದಂತಿ ಭಾರೀ ಹಬ್ಬುತ್ತಿದೆ. ಇದರ ನಡುವೆ ಹಳೆಯ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಆ ಪೋಸ್ಟ್’ನ ಅರ್ಥ ಏನೆಂದು ಗೊತ್ತಾ? ಅಂದು ಕೂಡ ಇದೇ ರೀತಿ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ ಹಬ್ಬಿತ್ತು. ಹೀಗಾಗಿ ಇಂತಹದ್ದೊಂದು ಪೋಸ್ಟ್ ಶೇರ್ ಮಾಡಿ ಆ ವದಂತಿಯನ್ನು ಅತ್ಯಂತ ತಮಾಷೆಯ ರೀತಿಯಲ್ಲಿ ನಿಲ್ಲಿಸಿದ್ದರು.

ಅಭಿಷೇಕ್, "ಸರಿ.. ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ನನಗೆ ಈ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು! ಅಂದಹಾಗೆ ನಾನು ಮರು ಮದುವೆ ಯಾವಾಗ ಆಗುತ್ತೇನೆ ಎಂಬುದನ್ನು ಸಹ ನನಗೆ ತಿಳಿಸುವಿರಾ? ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದರು.

"ನನಗೆ ಮತ್ತು ಐಶ್ವರ್ಯಾಗೆ ಹೇಗೆ ನಮ್ಮ ಜೀವನವನ್ನು ನಡೆಸಬೇಕು ಎಂಬುದು ತಿಳಿದಿದೆ. ಮೂರನೇ ವ್ಯಕ್ತಿ ಅದರ ಬಗ್ಗೆ ತಿಳಿಸಿಕೊಡಲು ಅನುಮತಿಸುವುದಿಲ್ಲ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ಅವಳು ನನ್ನನ್ನು ಎಷ್ಟು ಪ್ರೀತಿಸುತ್ತಾಳೆಂದು ನನಗೆ ತಿಳಿದಿದೆ'' ಎಂದಿದ್ದಾರೆ.

ಇದನ್ನೂ ಓದಿ: “ಫ್ರೆಂಡ್ಸ್ ಜೊತೆ ಮಲಗು ಅಂತಿದ್ದ ನನ್ನ ಗಂಡ, ಅದಕ್ಕೆ ಡಿವೋರ್ಸ್ ಕೊಟ್ಟೆ”- ಖ್ಯಾತ ನಟಿ ಕಣ್ಣೀರು

“ನೀವು ನಿಮ್ಮ ಅನುಕೂಲಕ್ಕಾಗಿ ಏನನ್ನಾದರೂ ತಪ್ಪಾಗಿ ಅರ್ಥೈಸಿಕೊಂಡಿದ್ದರೆ, ಅದನ್ನೇ ಮುಂದುವರಿಸಿ. ಅಷ್ಟಕ್ಕೂ ನಾನು ಸಾರ್ವಜನಿಕ ವ್ಯಕ್ತಿ. ನಾನು ಎಲ್ಲಾ ಸಮಯದಲ್ಲೂ ಮಾಧ್ಯಮವನ್ನು ಸಂತೋಷಪಡಿಸಲು ಸಾಧ್ಯವಿಲ್ಲ. ನನ್ನ ಮದುವೆ ಮತ್ತು ನನ್ನ ಜೀವನ ಮಾಧ್ಯಮಗಳು ಏನು ಹೇಳುತ್ತವೆ ಎಂಬುದನ್ನು ಅನುಸರಿಸಲು-ಅರಿಯಲು ಹೋಗುವುದಿಲ್ಲ. ಹಾಗಾಗಿ ಇದು ನಿಜವಾಗಿಯೂ ನನಗೆ ಸಮಸ್ಯೆಯಲ್ಲ" ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News