Avatara Purusha 2 movie review : ನಟ ಶರಣ್‌ ಅಭಿನಯದ ʼಅವತಾರ ಪುರುಷ ಪಾರ್ಟ್‌2ʼ ಸಿನಿಮಾ ತೆರೆ ಕಂಡಿದೆ. ರೊಮ್ಯಾಂಟಿಕ್ ಕಾಮಿಡಿ ಸಿನಿಮಾಗಳಿಂದ ಖ್ಯಾತಿ ಪಡೆದಿದ್ದ ನಿರ್ದೇಶಕ ಸಿಂಪಲ್ ಸುನಿ (Simple Suni) ಇದೀಗ ಹಾರರ್‌ ಸಿನಿಮಾ ಮಾಡಿ ಬಹುತೇಕ ಗೆದ್ದಿದ್ದಾರೆ ಎಂದು ಹೇಳಬಹುದು. 


COMMERCIAL BREAK
SCROLL TO CONTINUE READING

ಹೌದು.. ʼಅವತಾರ ಪುರುಷʼ ಮೊದಲ ಭಾಗದಲ್ಲಿ, ಓವರ್ ಆ್ಯಕ್ಟಿಂಗ್ ಅನಿಲನಾಗಿ ಕಾಣಿಸಿಕೊಂಡಿದ್ದ ಶರಣ್ ಅವರು ಎರಡನೇ ಪಾರ್ಟ್‌ನಲ್ಲಿ ಮಂತ್ರವಾದಿಯಾಗಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಶರಣ್‌ ಡಿಫರೆಂಟ್ ಲುಕ್‌ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. 


ಇದನ್ನೂ ಓದಿ: "ಬಡವ್ರ ಮಕ್ಳೂ ಬೆಳಿಬೇಕು ಕಣ್ರಯ್ಯ" ಡಾಲಿ ಹೇಳಿದ ಮಾತು ಈಗ ಸಿನಿಮಾ ಟೈಟಲ್!!  


ಅಲ್ಲದೆ, ಸಿನಿಮಾದಲ್ಲಿ ಹಾಸ್ಯದ ಕೊರತೆ ಇದೆ ಅಂತ ಹೇಳಬಹುದು. ಏಕೆಂದರೆ ಶರಣ್‌ ಸಿನಿಮಾದಲ್ಲಿ ಹೆಚ್ಚಾಗಿ ಜನ ಕಾಮಿಡಿ ನಿರೀಕ್ಷೆ ಮಾಡ್ತಾರೆ. ಸಾಧಕೋಕಿಲ ಅವರಂತಹ ಸ್ಟಾರ್‌ ಕಮಿಡಿಯನ್‌ ಇದ್ದರೂ ಸಹ ಸಿನಿಮಾದಲ್ಲಿ ನಗು ಅಷ್ಟಾಗಿ ಉಕ್ಕುವುದಿಲ್ಲ. ಹೆಚ್ಚಿನ ಸನ್ನಿವೇಶಗಳು ವಾಮಾಚಾರಕ್ಕೆ ಸಿಮೀತವಾಗಿದೆ. 


ಇನ್ನು ಹಾರರ್ ಅಂಶವನ್ನು ಬಯಸುವ ಪ್ರೇಕ್ಷಕರೂ ಸಹ ಚಿತ್ರ ನೋಡಿ ಭಯಬೀಳುವ ಸಾಧ್ಯತೆ ಕಡಿಮೆ. ಈ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್ ಪಾತ್ರಕ್ಕೆ ಹೆಚ್ಚಿನ ಸ್ಕೋಪ್ ಇಲ್ಲ. ಸುಧಾರಾಣಿ, ಭವ್ಯ ಹೀಗೆ ಬಂದು ಹಾಗೆ ಹೋಗುತ್ತಾರೆ. ಸಾಯಿಕುಮಾರ್ ತಮಗೆ ನೀಡಿದ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. 


ಇದನ್ನೂ ಓದಿ:ʼಆʼ ನಟನೊಂದಿಗೆ ತೆರೆಹಂಚಿಕೊಳ್ಳಲು ಭಯಪಟ್ಟಿದ್ದರಂತೆ ಖ್ಯಾತ ನಟಿ ಮಾಧುರಿ ದೀಕ್ಷಿತ್!!  


ಶ್ರೀನಗರ ಕಿಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಲಾವಿದರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮೇಕಿಂಗ್ ಅದ್ಬುತವಾಗಿ ಮೂಡಿ ಬಂದಿದೆ. ಛಾಯಾಗ್ರಹಣ, ಹಿನ್ನೆಲೆ ಸಂಗೀತ ಸಖತ್ತಾಗಿದೆ. ತಾಯಿ ಸೆಂಟಿಮೆಂಟ್‌, ಲವ್‌, ಎಲ್ಲವನ್ನೂ ಸುನಿ ಅಚ್ಚುಕಟ್ಟಾಗಿ ತೋರಿಸಿದ್ದಾರೆ.


ಕ್ಲೈಮ್ಯಾಕ್ಸ್‌ನಲ್ಲಿ ಕ್ಯೂರಿಯಾಸಿಟಿ ಹುಟ್ಟಿಸುತ್ತದೆ. ಅಲ್ಲದೆ, ‘ಪಾರ್ಟ್ 3’ ಸುಳಿವು ಸಹ ನೀಡಲಾಗಿದೆ. ಅವತಾರ ಪುರುಷ 2 ಒಂದೊಳ್ಳೆ ಕನ್ನಡ ಸಿನಿಮಾ, ಕುಟುಂಬ ಸಮೇತ ಚಿತ್ರಮಂದಿರಕ್ಕೆ ಹೋಗಿ ನೋಡಬಹುದು.. ದುಡ್ಡಿಗೆ ನಷ್ಟವಿಲ್ಲ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ