Sharmila Tagore : ಬಿಟೌನ್‌ ನಟ ಸೈಫ್‌ ಅಲಿಖಾನ್‌ ಮೊದಲ ಪ್ರೀತಿಯ ಬಗ್ಗೆ ಅವರ ತಾಯಿ ನೀಡಿರುವ ಹೇಳಿಕೆಯೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಅಲ್ಲದೆ, ಸ್ವತಃ ತಮ್ಮ ಮಗ ಇನ್ನೊಬ್ಬ ನಟಿಯ ಜೊತೆ ಓಡಿ ಹೋಗಿ ಮದುವೆಯಾಗಿದ್ದ ಅಂತ ತಿಳಿಸಿದ್ದು, ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ..


COMMERCIAL BREAK
SCROLL TO CONTINUE READING

ಹೌದು.. ಇತ್ತೀಚಿಗೆ ಕರಣ್‌ ಜೋಹರ್‌ ನಡೆಸಿಕೊಡುವ ಜನಪ್ರೀಯ ಟಾಕ್‌ ಶೋ ಕಾಫಿ ವಿತ್ ಕರಣ್‌ 8ನೇ ಆವೃತ್ತಿಯಲ್ಲಿ ಬಾಲಿವುಡ್‌ ಹಿರಿಯ ನಟಿ ಶರ್ಮಿಳಾ ಠಾಗೋರ್ ತಮ್ಮ ಪುತ್ರ ಬಾಲಿವುಡ್ ನಟ ಸೈಫ್‌ ಅಲಿಖಾನ್ ಜೊತೆ ಭಾಗವಹಿಸಿದ್ದರು. ಇದೇ ವೇಳೆ ಶರ್ಮಿಳಾ ಅವರು ತಮ್ಮ ಮಗ ಸೈಫ್ ಕುರಿತು ಹಲವು ಸಿಕ್ರೇಟ್‌ಗಳನ್ನು ರಿವೀಲ್ ಮಾಡಿದ್ದಾರೆ. 


ಇದನ್ನೂ ಓದಿ: Vijayakanth : ತಮಿಳು ನಟ ʼಕ್ಯಾಪ್ಟನ್‌ʼ ವಿಜಯಕಾಂತ್ ಪತ್ನಿ, ಮಕ್ಕಳು ಯಾರು ಗೊತ್ತೆ..?


ಮಾತಿನ ಮಧ್ಯ ತಮ್ಮ ಮಗಳ ಹಳೆ ಪ್ರೇಮ ಪುರಾಣಗಳನ್ನು ಬಯಲು ಮಾಡಿರುವ ಶರ್ಮಿಳಾ, ಸೈಫ್ 1991ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಸಾರಾ ಅಲಿಖಾನ್ ಹಾಗೂ ಸೋದರ ಇಬ್ರಾಹಿಂ ಅಲಿ ಖಾನ್ ಅಮೃತಾ-ಸೈಫ್‌ ಮಕ್ಕಳು.


ಪ್ರೀತಿಸಿ ಮದುವೆಯಾಗಿದ್ದ ಜೋಡಿ 2004 ರಲ್ಲಿ ದೂರಾಗಿದ್ದರು. ಸೈಫ್‌ಗೆ ಕೇವಲ 20 ವರ್ಷ ವಯಸ್ಸಿದ್ದಾಗ ಅಮೃತಾ ಜೊತೆ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು. ಆದ್ರೆ ಅಮೃತಾ ಸೈಫ್‌ಗಿಂತ ಬರೋಬ್ಬರಿ 12 ವರ್ಷ ದೊಡ್ಡವರು.  ಸಧ್ಯ ಸೈಫ್‌ ಅಲಿಖಾನ್‌ ನಟಿ ಕರೀನಾ ಕಪೂರ್‌ ಅವರನ್ನು ಮದುವೆಯಾಗಿದ್ದು, ಈ ಜೋಡಿಗೆ ತೈಮೂರ್‌ ಎಂಬ ಒರ್ವ ಮಗನಿದ್ದಾನೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.