Vijayakanth : ತಮಿಳು ನಟ ʼಕ್ಯಾಪ್ಟನ್‌ʼ ವಿಜಯಕಾಂತ್ ಪತ್ನಿ, ಮಕ್ಕಳು ಯಾರು ಗೊತ್ತೆ..?

Actor Vijayakanth : ತಮಿಳು ಖ್ಯಾತ ನಟ, ರಾಜಕಾರಣಿ ವಿಜಯಕಾಂತ್ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಕಾಲಿವುಡ್‌ನಲ್ಲಿ ತಮ್ಮ ಅಭಿನಯ, ವ್ಯಕ್ತಿತ್ವದಿಂದ ಹೆಸರುವಾಸಿಯಾಗಿದ್ದ ನಾಯಕನನ್ನು ಕಳೆದುಕೊಂಡು ಚಿತ್ರರಂಗ ಬಡವಾಗಿದೆ. ಬನ್ನಿ ವಿಜಯಕಾಂತ್‌ ಅವರ ಕುಟುಂಬ, ನಟನಾ ಹಿನ್ನೆಲೆ ಕುರಿತು ತಿಳಿಯೋಣ..

Written by - Krishna N K | Last Updated : Dec 28, 2023, 04:41 PM IST
  • ತಮಿಳು ಖ್ಯಾತ ನಟ, ರಾಜಕಾರಣಿ ವಿಜಯಕಾಂತ್ ನಿಧನ
  • ಕ್ಯಾಪ್ಟನ್‌ ಎಂದು ಖ್ಯಾತರಾಗಿದ್ದ ಕಾಲಿವುಡ್‌ ಖ್ಯಾತ ನಟ
  • ಡಿಎಮ್‌ಡಿಕೆ ಪಕ್ಷದ ನಾಯಕರಾಗಿದ್ದ ವಿಜಯಕಾಂತ್‌
Vijayakanth : ತಮಿಳು ನಟ ʼಕ್ಯಾಪ್ಟನ್‌ʼ ವಿಜಯಕಾಂತ್ ಪತ್ನಿ, ಮಕ್ಕಳು ಯಾರು ಗೊತ್ತೆ..? title=

Vijayakanth death : ನಟ ಮತ್ತು ಡಿಎಂಡಿ ನಾಯಕ ವಿಜಯಕಾಂತ್ ಇಂದು ನಿಧನರಾಗಿದ್ದಾರೆ. ಅವರ ನಿಧನಕ್ಕೆ ಮುಖಂಡರು, ಗಣ್ಯರು, ಅಪಾರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ವಿಜಯಕಾಂತ್ ಅವರ ಪಾರ್ಥಿವ ಶರೀರವನ್ನು ನಾಳೆ ಸಂಜೆ 4:45 ಕ್ಕೆ ಕೊಯಮತ್ತೂರಿನ ಡಿಎಂಯುಡಿ ಕಚೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುವುದು. 

ಆಂಗ್ರಿ ಯಂಗ್ ಮ್ಯಾನ್ ಆಗಿ ನಟಿಸಿದ್ದ ಕ್ರಾಂತಿಕಾರಿ ಕಲಾವಿದ ವಿಜಯಕಾಂತ್ ಅವರ ಹುಟ್ಟು ಹೆಸರು ವಿಜಯರಾಜ್. ಆಗಸ್ಟ್ 25, 1952 ರಂದು ಮಧುರೈನ ತಿರುಮಂಗಲಂನಲ್ಲಿ ಅಳಗರಸ್ವಾಮಿ ಮತ್ತು ಆಂಡಾಳ್ ದಂಪತಿಗೆ ಜನಿಸಿದರು. ಅವರು ಓದಿದ್ದು ಹತ್ತನೇ ತರಗತಿಯವರೆಗೆ ಮಾತ್ರ.

ಇದನ್ನೂ ಓದಿ:ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಅವಿನಾಶ್ ಶೆಟ್ಟಿ ಪಡೆದ ಸಂಭಾವನೆ ಇಷ್ಟು ! ಸ್ಪರ್ಧಿಯೇ ನೀಡಿದ ಮಾಹಿತಿ ಇದು !

ಚಿಕ್ಕಂದಿನಿಂದಲೂ ಅವರಿಗೆ ಸಿನಿಮಾ ಅಂದ್ರೆ ಪಂಚಪ್ರಾಣ, ಅವಕಾಶ ಸಿಕ್ಕಾಗೆಲ್ಲ ಗೆಳೆಯರ ಜೊತೆಯಲ್ಲಿ ಸಿನಿಮಾಗಳನ್ನು ನೋಡುತ್ತಿದ್ದರು, ಈ ಕುರಿತು ಹಲವಾರು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಅದರಲ್ಲೂ ಎಂಜಿಆರ್ ಅವರ ಸಾಹಸಮಯ ಚಿತ್ರಗಳು ವಿಜಯ್‌ ಅವರನ್ನು ಬಹಳವಾಗಿ ಆಕರ್ಷಿಸಿದವು. 

ಮಗನಿಗೆ ಓದು ಬಾರದಿದ್ದಾಗ ಕೀರೈತುರೈನಲ್ಲಿದ್ದ ತಮ್ಮ ರೈಸ್ ಮಿಲ್ ನೋಡಿಕೊಳ್ಳಲು ವಿಜಯಕಾಂತ್‌ನನ್ನು ಅವನ ತಂದೆ ಬಿಟ್ಟರು. ತದನಂತರ ಹಲವಾರು ಅವಮಾನ, ತಿರಸ್ಕಾರಗಳ ನಡುವೆ 1979ರಲ್ಲಿ ಎಂ.ಎ.ಖಾಜಾ ಅವರ ‘ಇನಿಕ್ಕುಂ ಇಲ್ಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆ ನಂತರ ಆರ್.ಸೆಲ್ವರಾಜ್ ಅವರ ‘ಅಕಲ್ವಿಳಕ್ಕು’ ಸಿನಿಮಾದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು.

ಇದನ್ನೂ ಓದಿ:ವಿಕ್ಕಿ ಕೌಶಲ್,ರಶ್ಮಿಕಾ ಮಂದಣ್ಣ ಮತ್ತು ನೀಲ್ ಭೂಪಾಲಂ ತಮ್ಮ ಮುಂದಿನ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ

153ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಿಜಯಕಾಂತ್ 1984ರಲ್ಲಿ ಒಂದೇ ವರ್ಷದಲ್ಲಿ 18 ಸಿನಿಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ತಮಿಳುನಾಡು ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿ, ಎಂಜಿಆರ್ ಪ್ರಶಸ್ತಿ, ಕಲೈಮಾಮಣಿ ಪ್ರಶಸ್ತಿ ಸೇರಿದಂತೆ ವಿಜಯಕಾಂತ್ ಅವರಿಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

1990ರಲ್ಲಿ ವಿಜಯ್‌ ಪ್ರೇಮಲತಾ ಅವರನ್ನು ವಿವಾಹವಾದರು. ಅವರಿಗೆ ವಿಜಯ ಪ್ರಭಾಕರನ್ ಮತ್ತು ಷಣ್ಮುಖ ಪಾಂಡಿಯನ್ ಎಂಬ ಇಬ್ಬರು ಮಕ್ಕಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News