Shilpa Shetty bold look : ಶುಕ್ರವಾರ ರಾತ್ರಿ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್‌ʼನಲ್ಲಿ ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಮತ್ತು ಸೇರಿದಂತೆ ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರು. ತಾರೆಗಳು ಈವೆಂಟ್‌ನಲ್ಲಿ ಭಾಗವಹಿಸಿದ್ದ ನಟಿಯರ ಗ್ಲಾಮರ್‌ ಲುಕ್‌ ಹೆಚ್ಚಾಗಿ ಟಾಕ್‌ ಆಗುತ್ತಿದೆ. ತುಂಡು ತುಂಡು ಬಟ್ಟೆ ತೊಟ್ಟಿದ್ದ ನಟಿಯರ ಸೊಬಗಿಗೆ ಜನ ಫಿದಾ ಆಗಿದ್ದರು. ಇನ್ನು ಶಿಲ್ಪಾ ಶೆಟ್ಟಿ ಕೂಡಾ ತಮ್ಮದೇ ಸ್ಟೈಲ್‌ನಲ್ಲಿ ಮಿಂಚಿದರು.


COMMERCIAL BREAK
SCROLL TO CONTINUE READING

ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್‌ನೊಂದಿಗೆ ಶಿಲ್ಪಾ ಶೆಟ್ಟಿ ಕಾರ್ಯಕ್ರಮಕ್ಕೆ ಬಂದಿದ್ದರು. ಬಿಳಿ ಬ್ಲೇಜರ್ ತೊಟ್ಟಿದ್ದ ಶಿಲ್ಪಾ ಸೌಂದರ್ಯ ಎದ್ದುಕಾಣುವಂತಿತ್ತು. 47 ವರ್ಷದ ನಟಿಯ ಸೌಂದರ್ಯ ನೋಡಿದ ನೆಟ್ಟಿಗರು ಶಾಕ್‌ ಆಗಿದ್ದರು. ಕೆಲ ಶಿಲ್ಪಾ ಪ್ಯಾನ್ಸ್‌ ಸೂಪರ್‌ ಆಂತ ಕಾಮೆಂಟ್‌ ಮಾಡಿ ಮೆಚ್ಚುಗೆ ಸೂಚಿಸಿದರು. ಆದ್ರೆ ನೆಟಿಜನ್‌ ಶಿಲ್ಪಾ ಅವತಾರ ನೋಡಿ ಗರಂ ಆದ್ರು. ಅಲ್ಲದೆ, ಟ್ರೋಲ್ ಮಾಡುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಕೆಲವು ಅಸಹ್ಯ ರೀತಿಯ ಟೀಕೆ ಮಾಡುತ್ತಿದ್ದಾರೆ.


ನಮ್ಮ ಕುಟುಂಬದಲ್ಲಿ ʼಗೇʼಗಳಿದ್ದಾರೆ.. ಆದ್ರೆ ನಾನು ಅವರ ಜೊತೆ...!
    
ಇನ್ನು ಸಿನಿಮಾ ವಿಚಾರವಾಗಿ ಮಾತನಾಡುವುದಾದ್ರೆ, ಸದ್ಯ ಶಿಲ್ಪಾ, ಅಭಿಮನ್ಯು ದಾಸಾನಿ ಮತ್ತು ಶೆರ್ಲಿ ಸೆಟಿಯಾ ಅವರೊಂದಿಗೆ 'ನಿಕಮ್ಮ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಪ್ರೇಕ್ಷಕರನ್ನು ಮತ್ತು ಸಿಟಿಕ್ಸ್ ಅನ್ನು ಮೆಚ್ಚಿಸಲು ವಿಫಲವಾಯಿತು. ಬಾಕ್ಸ್ ಆಫೀಸ್ ಅಷ್ಟೊಂದು ಸದ್ದು ಮಾಡಲಿಲ್ಲ. ಶೀಘ್ರದಲ್ಲೇ ರೋಹಿತ್ ಶೆಟ್ಟಿ ಅವರ ಮುಂಬರುವ ವೆಬ್ ಸರಣಿ 'ಇಂಡಿಯನ್ ಪೋಲಿಸ್ ಫೋರ್ಸ್' ನಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವಿವೇಕ್ ಒಬೆರಾಯ್ ಜೊತೆಗೆ ಶಿಲ್ಪಾ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರತ್ಯೇಕವಾಗಿ ಸ್ಟ್ರೀಮ್ ಆಗಲಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.