Anasuya Bharadwaj : ನಮ್ಮ ಕುಟುಂಬದಲ್ಲಿ ʼಗೇʼಗಳಿದ್ದಾರೆ.. ಆದ್ರೆ ನಾನು ಅವರ ಜೊತೆ...!

ಸ್ಟೈಲಿಶ್‌ ಐಕಾನ್‌ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪಾ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ಆ್ಯಂಕರ್ ಅನಸೂಯಾ ಭಾರದ್ವಾಜ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಅಪಾರ ಪ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ ನಟಿ. ಅಲ್ಲದೆ, ತೆಲುಗಿನ ಹಾಟ್ ಆ್ಯಂಕರ್‌ಗಳಲ್ಲಿ ಪಟ್ಟಿಯಲ್ಲಿ ಅನಸೂಯಾ ಹೆಸರು ಮೊದಲ ಸ್ಥಾನದಲ್ಲಿದೆ. ಇತರ ಆ್ಯಂಕರ್‌ಗಳಿಗೆ ಪೈಪೋಟಿ ನೀಡುತ್ತಿರುವ ಅನು ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ.

Written by - Krishna N K | Last Updated : Feb 25, 2023, 06:43 PM IST
  • ಪುಷ್ಪಾ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ಆ್ಯಂಕರ್ ಅನಸೂಯಾ ಭಾರದ್ವಾಜ್.
  • ಆ್ಯಂಕರ್ ಅನಸೂಯಾ ಭಾರದ್ವಾಜ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಅಪಾರ ಪ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ ನಟಿ.
  • ತೆಲುಗಿನ ಹಾಟ್ ಆ್ಯಂಕರ್‌ಗಳಲ್ಲಿ ಪಟ್ಟಿಯಲ್ಲಿ ಅನಸೂಯಾ ಹೆಸರು ಮೊದಲ ಸ್ಥಾನದಲ್ಲಿದೆ.
Anasuya Bharadwaj : ನಮ್ಮ ಕುಟುಂಬದಲ್ಲಿ ʼಗೇʼಗಳಿದ್ದಾರೆ.. ಆದ್ರೆ ನಾನು ಅವರ ಜೊತೆ...! title=

Anasuya Bharadwaj : ಸ್ಟೈಲಿಶ್‌ ಐಕಾನ್‌ ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪಾ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ಆ್ಯಂಕರ್ ಅನಸೂಯಾ ಭಾರದ್ವಾಜ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಅಪಾರ ಪ್ಯಾನ್ಸ್‌ ಫಾಲೋಯಿಂಗ್‌ ಹೊಂದಿದ ನಟಿ. ಅಲ್ಲದೆ, ತೆಲುಗಿನ ಹಾಟ್ ಆ್ಯಂಕರ್‌ಗಳಲ್ಲಿ ಪಟ್ಟಿಯಲ್ಲಿ ಅನಸೂಯಾ ಹೆಸರು ಮೊದಲ ಸ್ಥಾನದಲ್ಲಿದೆ. ಇತರ ಆ್ಯಂಕರ್‌ಗಳಿಗೆ ಪೈಪೋಟಿ ನೀಡುತ್ತಿರುವ ಅನು ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ.

ಇತ್ತೀಚಿಗೆ ಜಬರ್ದಸ್ತ್‌ ನಂಥ ರಿಯಾಲಿಟಿ ಶೋಗಳಿಂದ ಹೊರಬಂದಿರುವ ಆ್ಯಂಕರ್ ಅನಸುಯಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೇಳಿಕೆಯ ಮೂಲಕ ಹಾಟ್ ಟಾಪಿಕ್ ಆಗುತ್ತಿದ್ದರು. ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರಲು ಹಾಗು ತಮ್ಮ ಕ್ರೇಜ್ ಕಡಿಮೆಯಾಗದಂತೆ ನೋಡಿಕೊಳ್ಳುತ್ತಿರುವ ಚೆಲುವು ಆಗಾಗ ಪ್ಯಾನ್ಸ್‌ಗಳ ಜೊತೆ ಚಿಟ್‌ ಚಾಟ್‌ ನಡೆಸುತ್ತಿರುತ್ತಾರೆ. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಯೊಂದಿಗೆ ಚಿಟ್ ಚಾಟ್ ಮಾಡಿದ ಬೆಡಗಿಯ ಹೇಳಿಕೆಯೊಂದು ಸಖತ್‌ ವೈರಲ್‌ ಆಗುತ್ತಿದೆ.

Anasuya Bharadwaj on Gays: ఫ్రెండ్స్, ఫామిలీలో 'గే'లు ఉన్నారు.. అనసూయ ఆసక్తికర కామెంట్స్!

ಇದನ್ನೂ ಓದಿ: ಆರ್ ಆರ್ ಆರ್ ಗೆ ಪ್ರತಿಷ್ಠಿತ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಪ್ರಶಸ್ತಿಯ ಗರಿ..!

ಚಿಟ್‌ ಚಾಟ್‌ನಲ್ಲಿ ಅನಸುಯಾಗೆ, ನೀವು ಎಂದಾದರೂ ಲೆಸ್ಬಿಯನ್‌ಗಳೊಂದಿಗೆ ಅನುಭವವನ್ನು ಹೊಂದಿದ್ದೀರಾ..? ಎಂದು ನೆಟ್ಟಿಗೊಬ್ಬರು ಪ್ರಶ್ನೆ ಮಾಡಿದ್ದರು. ಅದಕ್ಕೆ ನಟಿ ನಮ್ಮ ಸ್ನೇಹಿತರು ಮತ್ತು ಕುಟುಂಬದಲ್ಲಿ 'ಸಲಿಂಗಕಾಮಿಗಳು' ಇದ್ದಾರೆ. ಆದರೆ, ನಾನು ಅವರೊಂದಿಗೆ ಯಾವುದೇ ವೈಯಕ್ತಿಕ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದರು. ಇದೀಗ ಆ್ಯಂಕರ್ ಈ ನೇರ ಮಾತು ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಟಾಪಿಕ್‌ ಆಗಿದೆ. ಆದ್ರೆ, ಸಲಿಂಗಕಾಮಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಗೇ ಗಳ ಬಗ್ಗೆ ಉತ್ತರ ನೀಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News