ಧ್ರುವ ಸರ್ಜಾ.. ಪಂಚಿಂಗ್ ಡೈಲಾಗ್ ಮೂಲಕ ಅಭಿಮಾನಿಗಳ ಮನಗೆದ್ದ ಸ್ಟಾರ್.  ಧ್ರುವ ಸರ್ಜಾ ಸಿನಿಮಾ ನೋಡೋದೇ ಒಂಥರಾ ಮಜಾ ಬಿಡಿ. ಇಡೀ ಕುಟುಂಬ ಕುಳಿತು ಸಿನಿಮಾ ನೋಡೋ ಲೆವೆಲ್ಲಿಗೆ ಇವ್ರ ಸಿನಿಮಾಗಳು ಇರುತ್ತವೆ. ಪ್ರತಿಯೊಬ್ಬ ಅಭಿಮಾನಿಯೂ ಧ್ರುವ ಸರ್ಜಾ ನಮ್ಮನೇ ಮಗ ಅಂತಲೇ ಭಾವಿಸಿದ್ದಾರೆ. ಇದೀಗ ಧ್ರುವ ಸಿನಿಮಾನ ಯಾವಾಗಪ್ಪ ತೆರೆ ಮೇಲೆ ನೋಡೋದು ಅಂತ ಶಬರಿಯಂತೆ ಕಾದುಕುಳಿತ್ತಿದ್ದಾರೆ. ಧ್ರುವ ಕೂಡ ಅದ್ಬುತ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಲೇಟ್ ಆದ್ರೂ ಪರವಾಗಿಲ್ಲ ಲೇಟೆಸ್ಟ್ ಆಗಿ ತೆರೆ ಮೇಲೆ ಬರೋಣ ಅಂತ ಕೆಲಸ ಮಾಡೋ ಅದ್ಬುತ ನಟ. ಇದೀಗ ಧ್ರುವ ಸರ್ಜಾ ಸಿನಿಮಾದಲ್ಲಿ ಇಬ್ಬರು ಭಯಂಕರ ನಟರು ನಟನೆ ಮಾಡೋದು ಪಕ್ಕಾ ಆಗಿದೆ. ಯಾರವರು ಗೊತ್ತಾ..?


COMMERCIAL BREAK
SCROLL TO CONTINUE READING

ಅದ್ಧೂರಿ ಹಿಟ್ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಟ್ರೆ ಹಿಟ್ ಸಿನಿಮಾನೇ ಕೊಡೋದು ಅನ್ನೋದು ಆಕ್ಷನ್ ಪ್ರಿನ್ಸ್ ಹಠ. ಅಂತೆಯೇ ಅಭಿಮಾನಿಗಳು ಕೂಡ ಧ್ರುವ ಸರ್ಜಾ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಇದೀಗ ಒಂದು ಬಿಗ್ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ.


ಇದನ್ನೂ ಓದಿ- RRR, Kashmir Files ಅಲ್ಲ ಆಸ್ಕರ್ ಗೆ ಪ್ರವೇಶ ಗಿಟ್ಟಿಸಿದ ಗುಜರಾತಿ ಚಿತ್ರ ಇದು


ಮಾರ್ಟಿನ್ ಬಳಿಕ ಇದೀಗ ಜೋಗಿ ಪ್ರೇಮ್ ಜೊತೆ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ. ಈ ಕುರಿತು  ಇತ್ತೀಚಿಗೆ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಮತ್ತೊಂದು ಸಿನಿಮಾಗೆ ತಯಾರಾಗುತ್ತಿರುವುದಾಗಿ ಘೋಷಿಸಿದ್ದರು . ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದರು.


ಇದೀಗ  ಧ್ರುವ ಸರ್ಜಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಕಾದಿದೆ. ಜೋಗಿ ಪ್ರೇಮ್ ಜೊತೆಗಿನ ಸಿನಿಮಾದಲ್ಲಿ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಅಧೀರ ಪಾತ್ರದಲ್ಲಿ ಮಿಂಚಿದ ಸಂಜಯ್ ದತ್ ನಟನೆ ಮಾಡೋದು ಕನ್ಫರ್ಮ್ ಆಗಿದೆ. ಇದೀಗ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.


ಇದನ್ನೂ ಓದಿ- DKD-6 ಗ್ರಾಂಡ್ ಫಿನಾಲೆ: ಯಾರ ಪಾಲಾಗುತ್ತೆ "ಪವರ್ ಸ್ಟಾರ್ ಟ್ರೋಫಿ"?


ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಧ್ರುವ ಸರ್ಜಾ ಅವರ 6ನೇ ಚಿತ್ರ ಇದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.