India's Official Entry To Oscars: ಭಾರತದಿಂದ ವತಿಯಿಂದ ಆಸ್ಕರ್‌ಗೆ ಪ್ರವೇಶ ಪಡೆಯುವ ಚಿತ್ರಗಳ ಕುರಿತು ಕೆಲವು ದಿನಗಳಿಂದ ನಿರಂತರವಾಗಿ ಚರ್ಚೆಯಾಗುತ್ತಿದೆ. ವರ್ಷದ ಎರಡು ದೊಡ್ಡ ಚಿತ್ರಗಳು 'ದಿ ಕಾಶ್ಮೀರ್ ಫೈಲ್ಸ್' ಮತ್ತು 'ಆರ್ಆರ್ಆರ್' ಎರಡರ ಮಧ್ಯ ಕಠಿಣ ಸ್ಪರ್ಧೆ ಏರ್ಪಡಲಿದೆ ಎಂದು ಅಂದಾಜಿಸಲಾಗಿತ್ತು. ಈ ಎರಡು ಚಿತ್ರಗಳಲ್ಲಿ ಯಾವುದಾದರೂ ಒಂದು ಚಿತ್ರ ಭಾರತವನ್ನು ಪ್ರತಿನಿಧಿಸಲಿದೆ ಎನ್ನಲಾಗಿತ್ತು. ಅಷ್ಟೇ ಅಲ್ಲ ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ನಿರಂತರವಾಗಿ ತಮ್ಮ ಊಹೆಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ, ಗುಜರಾತಿ ಚಿತ್ರ ‘ಚೆಲೋ ಶೋ’ ಎರಡೂ ಚಿತ್ರಗಳನ್ನು ಹಿಂದಿಕ್ಕಿ ಆಸ್ಕರ್ ಎಂಟ್ರಿ ಗಿಟ್ಟಿಸಿದೆ. ಈ ಚಿತ್ರವನ್ನು ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಕಳುಹಿಸಲಾಗುವುದು ಎನ್ನಲಾಗಿದೆ.
ವಿಮರ್ಶಕರ ಮನ್ನಣೆಗೆ ಪಾತ್ರವಾದ ಚಿತ್ರ
ಮಂಗಳವಾರ, ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 'ಚೆಲೋ ಶೋ' ಆಸ್ಕರ್ ಪ್ರವೇಶಕ್ಕೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಘೋಷಿಸಿದೆ. ಗುಜರಾತಿ ಭಾಷೆಯ ಚಲನಚಿತ್ರವು ವಿಶ್ವಾದ್ಯಂತದ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಪಡೆದಿದೆ. ಇದೀಗ ಅದು ಗುಜರಾತ್ ಮತ್ತು ದೇಶದಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ 14 ಅಕ್ಟೋಬರ್ 2022 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ಪಾನ್ ನಳಿನ್ ನಿರ್ದೇಶಿಸಿದ್ದಾರೆ. ಇದರಲ್ಲಿ ಭವ್ರಿ ರಾಬ್ರಿ, ರಿಚಾ ಮೀನಾ, ದೀಪೆನ್ ರಾವಲ್, ಭವೇಶ್ ಶ್ರೀಮಾಲಿ ಮತ್ತು ಪರೇಶ್ ಮೆಹ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ-DKD-6 ಗ್ರಾಂಡ್ ಫಿನಾಲೆ: ಯಾರ ಪಾಲಾಗುತ್ತೆ "ಪವರ್ ಸ್ಟಾರ್ ಟ್ರೋಫಿ"?
ಅನೇಕ ಅಂತರರಾಷ್ಟ್ರೀಯ ಉತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿದೆ
'Chhello Show ' ಹಲವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದ್ದು ಅಲ್ಲಿ ಸಾಕಷ್ಟು ಪ್ರಶಂಸೆ ಗಳಿಸಿದೆ. ಈ ಚಲನಚಿತ್ರವು ರಾಬರ್ಟ್ ಡಿ ನಿರೋ ಅವರ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆರಂಭಿಕ ಚಲನಚಿತ್ರವಾಗಿ ಅದರ ವಿಶ್ವ ಪ್ರಥಮ ಪ್ರದರ್ಶನ ಕಂಡಿದೆ. ಇದು ಸ್ಪೇನ್‌ನಲ್ಲಿ ನಡೆದ 66 ನೇ ವಲ್ಲಾಡೋಲಿಡ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಸ್ಪೈಕ್ ಸೇರಿದಂತೆ ಇತರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಇದನ್ನೂ ಓದಿ-Emraan Hashmi: ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮೇಲೆ ಕಲ್ಲು ತೂರಾಟ
ನಿರ್ದೇಶಕರ ಸ್ವಂತ ನೆನಪುಗಳಿಂದ ಸ್ಫೂರ್ತಿ ಪಡೆದ ಚಿತ್ರ
'ಚೆಲೋ ಷೋ' ಯಾವುದೇ ಸದ್ದಿಲ್ಲದೇ ಆಸ್ಕರ್ ರೇಸ್ ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಮತ್ತು 'ಆರ್‌ಆರ್‌ಆರ್' ಚಿತ್ರಗಳನ್ನು ಹಿಂದಿಕ್ಕಿದೆ. ಗ್ರಾಮೀಣ ಗುಜರಾತ್ ನ ಒಂದು ಮಗುವಿನ ಚಲನಚಿತ್ರಗಳತ್ತ ಪ್ರೀತಿಯನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಇದು ನಿರ್ದೇಶಕ ಪ್ಯಾನ್ ನಲೀನ್ ಅವರ ಸ್ವಂತ ನೆನಪುಗಳಿಂದ ಸ್ಫೂರ್ತಿ ಪಡೆದಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.