ಮುಂಬೈ : ನಟಿ ಶಿಲ್ಪಾ ಶೆಟ್ಟಿಯ (Shilpa Shetty) ತಾಯಿ ಸುನಂದಾ ಶೆಟ್ಟಿ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಸಲಿಗೆ ತಾನು ಜಮೀನು ಖರೀದಿಸಿ ಮೋಸ ಹೋಗಿರುವ ಬಗ್ಗೆ ಸುನಂದಾ ಶೆಟ್ಟಿ (Sunanda Shetty) ಪೊಲೀಸ್ ಮೆಟ್ಟಿಲೇರಿದ್ದಾರೆ. ರಾಯಘಡ ಜಿಲ್ಲೆಯ ಕರ್ಜತ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸುಧಾಕರ್ ಘಾರೆ ಎಂಬ ವ್ಯಕ್ತಿಯ ವಿರುದ್ಧ ಈ ದೂರನ್ನು ನೀಡಲಾಗಿದೆ.


COMMERCIAL BREAK
SCROLL TO CONTINUE READING

1 ಕೋಟಿ 60 ಲಕ್ಷ ರೂ. ಮೋಸ  :
2019 ರಿಂದ ಫೆಬ್ರವರಿ 2020 ರ ಅವಧಿಯಲ್ಲಿ ಸುನಂದಾ ಶೆಟ್ಟಿ (Sunanda Shetty), ಸುಧಾಕರ್ ಘಾರೆ ಜೊತೆ ಕರ್ಜತ್‌ನ ಜಮೀನು ಖರೀದಿಗೆ  ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದರು. ಈ ವೇಳೆಯಲ್ಲಿ ಸುಧಾಕರ್ ಈ ಜಮೀನು ತನಗೆ ಸೇರಿದ್ದು ಎಂದು ಹೇಳಿ, ಜಮೀನಿಗೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ನಕಲಿ ದಾಖಲೆ ಪತ್ರಗಳ ಸಹಾಯದಿಂದ ಜಮೀನನ್ನು 1 ಕೋಟಿ 60 ಲಕ್ಷ ರೂಗಳಿಗೆ ,ಮಾರಾಟ ಮಾಡಿರುವುದಾಗಿ ಸುನಂದಾ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.  


ಇದನ್ನೂ ಓದಿ : ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮೂರು ಲಕ್ಷ ದಂಡ ಹಾಕಿದ SEBI


ನಂತರ ಬಹಿರಂಗವಾದ ಸತ್ಯ : 
ಸ್ವಲ್ಪ ಸಮಯದ ನಂತರ, ವಿಷಯ ತಿಳಿದ ನಂತರ, ಸುನಂದಾ ಶೆಟ್ಟಿ, ಸುಧಾಕರ್ ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ, ತಾನೊಬ್ಬ ರಾಜಕೀಯ ಪಕ್ಷದ ನಾಯಕನಿಗೆ ಬಹಳ ಹತ್ತಿರವಾಗಿರುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಅಲ್ಲದೆ ಜಮೀನಿಗೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹೋಗುವಂತೆ ಸುಧಾಕರ್ ಹೇಳಿದ್ದಾರೆ ಎಂದು ಸುನಂದಾ ಶೆಟ್ಟಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.  ಇದಾದ ನಂತರ ಸುನಂದಾ ಶೆಟ್ಟಿ ನ್ಯಾಯಾಲಯದ (Court) ಮೊರೆ ಹೋಗಿದ್ದರು. ಇದೀಗ ಪ್ರಕರಣದ ತನಿಖೆ ನಡೆಸುವಂತೆ ಪೊಲೀಸರಿಗೆ ಕೋರ್ಟ್ ಆದೇಶ ನೀಡಿದ್ದು, ಪೊಲೀಸರು ಪ್ರಕರಣದ ವಿಚಾರಣೆ ಆರಂಭಿಸಿದ್ದಾರೆ. 


ಸಂಕಷ್ಟದಲ್ಲಿ ಅಳಿಯ ರಾಜ್ ಕುಂದ್ರಾ : 
ಮತ್ತೊಂದೆಡೆ, ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ (Pornography Case) ಸುನಂದಾ ಶೆಟ್ಟಿ ಅಳಿಯ ರಾಜ್ ಕುಂದ್ರಾ (Raj Kundra) ಪೊಲೀಸ್ ವಶದಲ್ಲಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ, ಈ ಪ್ರಕರಣದ ಇತರ ಆರೋಪಿಗಳಾದ ರೂಪದರ್ಶಿ ಗೆಹಾನಾ  (Gehana Vasisth) ಮತ್ತು ರೋವಾ ಖಾನ್ (Rowa Khan) ಅವರ ಸಮಸ್ಯೆಗಳು ಹೆಚ್ಚಿವೆ ಎನ್ನಲಾಗಿದೆ. ರಾಜ್ ಕುಂದ್ರಾ ಜೊತೆಗೆ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಇಬ್ಬರೂ ಆರೋಪಿಗಳಾಗಿದ್ದಾರೆ. ಈ ಮಧ್ಯೆ, ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಲು ತಮ್ಮನ್ನು ಒತ್ತಾಯಿಸಲಾಗಿತ್ತು ಎಂದು ಇಬ್ಬರು ಮಹಿಳೆಯರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಮಡ್ ಐಲ್ಯಾಂಡ್‌ನ ಒಂದೇ ಬಂಗಲೆಯಲ್ಲಿ ವಿಡಿಯೋ ಚಿತ್ರೀಕರಿಸಲಾಗಿತ್ತು ಎಂದು ಇಬ್ಬರೂ ಸಂತ್ರಸ್ತರು ಹೇಳಿಕೆ ನೀಡಿದ್ದಾರೆ. 


ಇದನ್ನೂ ಓದಿ : ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣ : ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಶಿಲ್ಪಾ ಶೆಟ್ಟಿ ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ