Pornography case: ಮಾಡೆಲ್, ನಟಿ ಗೆಹಾನಾ ವಸಿಷ್ಠ ಸೇರಿ ಮೂವರಿಗೆ ಮುಂಬೈ ಕ್ರೈ ಬ್ರಾಂಚ್ ಸಮನ್ಸ್..!

ವಿವಾದಾತ್ಮಕ ಮಾಡೆಲ್, ಕಿರುತೆರೆ ನಟಿ ಗೆಹನಾ ವಸಿಷ್ಠ ಸೇರಿ ಮೂವರಿಗೆ ಸಮನ್ಸ್.

Written by - Puttaraj K Alur | Last Updated : Jul 25, 2021, 12:07 PM IST
  • ಅಶ್ಲೀಲ ವಿಡಿಯೋ ಚಿತ್ರೀಕರಿಸಿ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪದ ಮೇರೆಗೆ ಗೆಹಾನಾ ವಸಿಷ್ಠ ಬಂಧನವಾಗಿತ್ತು
  • ಭಾನುವಾರ ಮಧ್ಯಾಹ್ನ 12 ಗಂಟೆಯೊಳಗೆ ಗೆಹಾನಾ ವಸಿಷ್ಠ ಸೇರಿ ಮೂವರು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಕ್ರೈಂ ಬ್ರಾಂಚ್ ಸಮನ್ಸ್
  • ರಾಜ್ ಕುಂದ್ರಾರ ವಯಾನ್ ಮತ್ತು ಮುಂಬೈನ ಅಂಧೇರಿಯ ಜೆಎಲ್ ಸ್ಟ್ರೀಮ್ ಕಚೇರಿಯಲ್ಲಿ ಗುಪ್ತ ಬೀರು ಪತ್ತೆ ಹಚ್ಚಿದ ಪೊಲೀಸರು
Pornography case: ಮಾಡೆಲ್, ನಟಿ ಗೆಹಾನಾ ವಸಿಷ್ಠ ಸೇರಿ ಮೂವರಿಗೆ ಮುಂಬೈ ಕ್ರೈ ಬ್ರಾಂಚ್ ಸಮನ್ಸ್..!  title=
ತನಿಖೆ ಚುರುಕುಗೊಳಿಸಿದ ಮುಂಬೈ ಅಪರಾಧ ವಿಭಾಗದ ಪೊಲೀಸರು

ಮುಂಬೈ: ಅಶ್ಲೀಲ ಸಿನಿಮಾಗಳ ನಿರ್ಮಾಣ ಆರೋಪ ಪ್ರಕರಣ ಸಂಬಂಧ ವಿವಾದಾತ್ಮಕ ಮಾಡೆಲ್ ಹಾಗೂ ಕಿರುತೆರೆ ನಟಿ ಗೆಹಾನಾ ವಸಿಷ್ಠ ಅಲಿಯಾಸ್ ವಂದನಾ ತಿವಾರಿ ಸೇರಿದಂತೆ ಮೂವರಿಗೆ ಮುಂಬೈನ ಅಪರಾಧ ವಿಭಾಗದ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಭಾನುವಾರ ಮಧ್ಯಾಹ್ನ 12 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಮೂವರಿಗೂ ಸೂಚಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ವೆಬ್​ಸೈಟ್​ನಲ್ಲಿ ಅಪ್​ಲೋಡ್​ ಮಾಡುತ್ತಿದ್ದ ಆರೋಪದ ಮೇರೆಗೆ ಗೆಹಾನಾ ವಸಿಷ್ಠ(Gehana Vashisht)ರನ್ನು 2021ರ ಫೆಬ್ರುವರಿಯಲ್ಲಿ ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಈ ಮಧ್ಯೆ ನೀಲಿ ಚಿತ್ರಗಳ ನಿರ್ಮಾಣ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರಿಗೆ  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ(Raj Kundra) ಅವರ ವಯಾನ್ ಮತ್ತು ಮುಂಬೈನ ಅಂಧೇರಿಯ ಜೆಎಲ್ ಸ್ಟ್ರೀಮ್ ಕಚೇರಿಯಲ್ಲಿ ಗುಪ್ತ ಬೀರು ಸಿಕ್ಕಿದೆ.

ಇದನ್ನೂ ಓದಿ: ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಬಿಡುಗಡೆಗೆ ಮುಹೂರ್ತ ಫಿಕ್ಸ್!

‘ತನಿಖೆಯ ಭಾಗವಾಗಿ ಶೋಧ ನಡೆಸುತ್ತಿರುವ ವೇಳೆ ಕುಂದ್ರಾರ ಕಚೇರಿಯಲ್ಲಿ ಗುಪ್ತ ಬೀರು ಪತ್ತೆಯಾಗಿದೆ’ ಎಂದು ಮುಂಬೈ ಪೊಲೀಸರು ಹೇಳಿದ್ದು, ಅದರಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ರಾಜ್ ಕುಂದ್ರಾ ಶೀಘ್ರದಲ್ಲೇ ಮನಿ ಲಾಂಡರಿಂಗ್ ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಪ್ರಕರಣಗಳನ್ನು ಎದುರಿಸಲಿದ್ದಾರೆ. ಏಕೆಂದರೆ ಜಾರಿ ನಿರ್ದೇಶನಾಲಯ (ED) ಅವರ ವಿರುದ್ಧ ಈ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.

ಅಶ್ಲೀಲ ಚಿತ್ರಗಳನ್ನು (ನೀಲಿ ಚಿತ್ರ) ತಯಾರಿಸಿದ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಹಂಚಿಕೆ ಮಾಡಿರುವ ಆರೋಪದ ಮೇರೆಗೆ 45ರ ಹರೆಯದ ಕುಂದ್ರಾ(Raj Kundra)ರನ್ನು ಜು.19ರಂದು ಮುಂಬೈ ಪೊಲೀಸರು ಬಂಧಿಸಿ, ಜು.23ರವರೆಗೆ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ಆದರೆ ತನಿಖೆಗೆ ಕುಂದ್ರಾ ಸಹಕರಿಸುತ್ತಿಲ್ಲ, ಹೆಚ್ಚಿನ ವಿಚಾರಣೆಯ ಅಗತ್ಯವಿದೆ ಎಂದು ಪೊಲೀಸರು, ಮುಂಬೈ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರಿಂದ ಕಸ್ಟಡಿ ಅವಧಿಯನ್ನು ಜು.27ರವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ನಟಿ ಪ್ರಿಯಾಮಣಿಗೆ ಸುಳ್ಳು ಹೇಳಿ ಮದುವೆಯಾದರೆ ಮುಸ್ತಾಪಾ ?

ನೀಲಿ ಚಿತ್ರಗಳ ನಿರ್ಮಾಣ ಪ್ರಕರಣ(Pornography Case)ದಲ್ಲಿ ಉದ್ಯಮಿ ರಾಜ್ ಕುಂದ್ರಾ ಅವರೇ ಪ್ರಮುಖ ಆರೋಪಿಯಾಗಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಅವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಮಹತ್ವದ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News