Kasturi Nivasa: 1971 ರ ಕನ್ನಡದ ಹಿಟ್‌ ಸಿನಿಮಾ ಕಸ್ತೂರಿ ನಿವಾಸ. ಕನ್ನಡ ಸಿನಿರಂಗದಲ್ಲಿ ಒಂದು ಹೆಗ್ಗುರುತು ಈ ಸಿನಿಮಾ. ಪ್ರಖ್ಯಾತ ನಿರ್ದೇಶಕ ಬಿ ದೊರೈ ರಾಜ್ ಮತ್ತು ಎಸ್‌ಕೆ ಭಗವಾನ್‌ರವರು ನಿರ್ದೇಶಿಸಿದ ಈ ಚಿತ್ರವು ಬಿಡುಗಡೆಯಾದಾಗ ಹೇಳಿಕೊಳ್ಳುವಂತಹ ಕಲೆಕ್ಷನ್‌ ಮಾಡಲಿಲ್ಲ. ಒಬ್ಬ ವಿಮರ್ಷಕರು ಕಸ್ತೂರಿ ನಿವಾಸದ ಉತ್ತಮ ವಿಮರ್ಶೆಯನ್ನು ಪ್ರಕಟಿಸಿದರು, ಆ ಬಳಿಕ ಅದು ಪ್ರೇಕ್ಷಕರನ್ನು ಸೆಳೆಯಲು ಆರಂಭಿಸಿತು. ದೊರೈ-ಭಗವಾನ್ ನಿರ್ದೇಶನದ ಈಕಸ್ತೂರಿ ನಿವಾಸ ಚಿತ್ರಮಂದಿರಗಳಲ್ಲಿ ಬ್ಲಾಕ್‌ಬಸ್ಟರ್ ಆಯಿತು.


COMMERCIAL BREAK
SCROLL TO CONTINUE READING

ಸಿನಿಮಾ ಕನ್ನಡದ್ದೇ ಆದರೂ ಕಸ್ತೂರಿ ನಿವಾಸದ ಚಿತ್ರಕಥೆಯನ್ನು ತಮಿಳು ಬರಹಗಾರ ಜಿ ಬಾಲಸುಬ್ರಮಣ್ಯಂ ಬರೆದಿದ್ದಾರೆ. ನಿರ್ಮಾಪಕರು ದಿವಂಗತ ತಮಿಳು ನಟ ಶಿವಾಜಿ ಗಣೇಶನ್ ಅವರನ್ನು ಈ ಸಿನಿಮಾದ ನಾಯಕನನ್ನಾಗಿ ಮಾಡಲು ಬಯಸಿದ್ದರಂತೆ. ಆದರೆ ಸ್ಕ್ರಿಪ್ಟ್ ಕೇಳಿದ ನಂತರ ಶಿವಾಜಿ ಗಣೇಶನ್ ಕಸ್ತೂರಿ ನಿವಾಸದ ಭಾಗವಾಗಲು ನಿರಾಕರಿಸಿದರಂತೆ. ಚಿತ್ರವು ಸುಖಾಂತ್ಯವನ್ನು ಹೊಂದಿಲ್ಲ ಎಂಬುದು ಅವರಿಗೆ ಇಷ್ಟವಾಗಲಿಲ್ಲ. ಆಗ ಬಿ ದೊರೈ ರಾಜ್ ಅವರ ಸಹೋದರ ಸಂಭಾಷಣಾ ಬರಹಗಾರ ಚಿ.ಉದಯಶಂಕರ್ ಅವರು ಚಿತ್ರವನ್ನು ಕನ್ನಡಕ್ಕೆ ಅಳವಡಿಸಲು ತಮ್ಮ ಆಸಕ್ತಿಯನ್ನು ತೋರಿಸಿದರು. ಆಗ ಡಾ ರಾಜ್‌ಕುಮಾರ್ ಅವರನ್ನು ಸಿನಿಮಾ ನಾಯಕರಾಗಿ ಆಯ್ಕೆ ಮಾಡಿದರು. 


ಇದನ್ನೂ ಓದಿ: Pooja Hegde : ಕೆಜಿಎಫ್‌ 3 ನಲ್ಲಿ ಪೂಜಾ ಹೆಗ್ಡೆ!? ಯಶ್‌ ಭೇಟಿಯಾಗಿದ್ದೇಕೆ ಸೌತ್‌ ಬ್ಯೂಟಿ!!


ವರದಿ ಪ್ರಕಾರ, ಡಾ.ರಾಜ್‌ಕುಮಾರ್ ಅವರು ಆರಂಭದಲ್ಲಿ ಈ ಸಿನಿಮಾದಲ್ಲಿ ನಟಿಸಲು ಹಿಂಜರಿದಿದ್ದರಂತೆ, ಕಸ್ತೂರಿ ನಿವಾಸದಲ್ಲಿ ಚಲನಚಿತ್ರ ನಿರ್ಮಾಪಕರ ನಂಬಿಕೆಯನ್ನು ನೋಡಿದ ನಂತರ ಅವರು ಒಪ್ಪಿಕೊಂಡರಂತೆ. ಈ ಚಿತ್ರವನ್ನು ಕೆಸಿಎನ್ ಗೌಡ ಅವರು ಅದರ ಮೂಲ ನಿರ್ಮಾಪಕ ನೂರಿ ಅವರಿಂದ 38,000 ರೂಪಾಯಿಗೆ ಖರೀದಿಸಿದ್ದಾರೆ. ಅಂತಿಮವಾಗಿ, ಜನವರಿ 29, 1971 ರಂದು ಕಸ್ತೂರಿ ನಿವಾಸ ಕರ್ನಾಟಕದಾದ್ಯಂತ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಯಿತು.


ಮೊದಲ ಕೆಲವು ದಿನಗಳಲ್ಲಿ ನಿಧಾನಗತಿಯ ಆರಂಭದ ನಂತರ, ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್‌ ಮಾಡಿತು. ಕಸ್ತೂರಿ ನಿವಾಸ ರಾಜ್ಯದ 16 ಚಿತ್ರಮಂದಿರಗಳಲ್ಲಿ ಸುಮಾರು 100 ದಿನ ಯಶಸ್ವಿ ಪ್ರದರ್ಶನ ಕಂಡಿದೆ. ರವಿ ವರ್ಮಾ ಪಾತ್ರದಲ್ಲಿ ಡಾ ರಾಜ್‌ಕುಮಾರ್ ಅವರ ಪಾತ್ರವು ಪ್ರೇಕ್ಷಕರಿಂದ ಹೆಚ್ಚು ಮೆಚ್ಚುಗೆ ಪಡೆದಿದೆ. ನಂತರ 2014 ರಲ್ಲಿ, ಕಸ್ತೂರಿ ನಿವಾಸವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಬಣ್ಣದ ಆವೃತ್ತಿಯಲ್ಲಿ ಮರು ಬಿಡುಗಡೆ ಮಾಡಲಾಯಿತು. ಟಿ.ಆರ್.ನರಸಿಂಹರಾಜು, ಟಿ.ಎನ್.ಬಾಲಕೃಷ್ಣ, ಕೆ.ಎಸ್.ಅಶ್ವಥ್, ಆರತಿ, ಜಯಂತಿ ಮತ್ತು ರಾಜಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಸ್ತೂರಿ ನಿವಾಸ ರವಿ ವರ್ಮಾ ಎಂಬ ಉದಾರ ವ್ಯಕ್ತಿಯ ಸುತ್ತ ಸುತ್ತುತ್ತದೆ. 


ಇದನ್ನೂ ಓದಿ: ಸ ರಿ ಗ ಮ ಪ ಕಿರೀಟ ಮುಡಿಗೇರಿಸಿಕೊಂಡ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್ ಯಾರು ಗೊತ್ತಾ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.