Pragati Badiger : ಸ ರಿ ಗ ಮ ಪ ಕಿರೀಟ ಮುಡಿಗೇರಿಸಿಕೊಂಡ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್ ಯಾರು ಗೊತ್ತಾ?

Sa re ga ma pa Season 19: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದ್ದು ಎಂಬ ಮಾತಿಗೆ ಪ್ರಗತಿಗೆ ಬಡಿಗೇರ್ ಸರಿಸಾಟಿ.  ವಯಸ್ಸು ಚಿಕ್ಕದಾದರೂ ಈ ಪುಟ್ಟ ಬಾಲಕಿಯ ಧ್ವನಿಗೆ ಫಿಧ ಆಗದವರಿಲ್ಲ. ಮಧುರವಾಗಿ ಹಾಡಿ ಎಲ್ಲರ ಮನ ಗೆದ್ದಿರುವ ಹಳ್ಳಿ ಪ್ರತಿಭೆ ಸ ರಿ ಗ ಮ ಪ ಲಿಟಲ್ ಚಾಂಪ್ ಸೀಸನ್ 19ರ  ಟ್ರೋಫಿ ಕೂಡ ಗೆದ್ದಿದ್ದಾರೆ.   

Written by - Zee Kannada News Desk | Last Updated : Apr 19, 2023, 12:42 PM IST

    ಸ ರಿ ಗ ಮ ಪ ಲಿಟಲ್ ಚಾಂಪ್ ಸೀಸನ್ 19 ಟ್ರೋಫಿಯು ಗೆದ್ದ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್

    ರೇಡಿಯೋ ಮೂಲಕ ಸಂಗೀತ ಕಲಿಯುತ್ತಿದ್ದ ಟ್ರೋಫಿ ಗೆದ್ದ ಪ್ರಗತಿ

    ಕೊನೆಗೂ ಕೊಪ್ಪಳದ ಜನರ ಎದುರು ಒಲಿದ ಟ್ರೋಫಿ

Pragati Badiger : ಸ ರಿ ಗ ಮ ಪ ಕಿರೀಟ ಮುಡಿಗೇರಿಸಿಕೊಂಡ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್  ಯಾರು ಗೊತ್ತಾ? title=

ಬೆಂಗಳೂರು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ದದ್ದು ಎಂಬ ಮಾತಿಗೆ ಪ್ರಗತಿ ಬಡಿಗೇರ್ ಸರಿಸಾಟಿ.  ವಯಸ್ಸು ಚಿಕ್ಕದಾದರೂ ಈ ಪುಟ್ಟ ಬಾಲಕಿಯ ಧ್ವನಿಗೆ ಫಿಧ ಆಗದವರಿಲ್ಲ. ಅಷ್ಟು ಮಧುರವಾಗಿ ಹಾಡಿ ಎಲ್ಲರ ಮನ ಗೆದ್ದಿರುವ ಹಳ್ಳಿ ಪ್ರತಿಭೆ ಸ ರಿ ಗ ಮ ಪ ಲಿಟಲ್ ಚಾಂಪ್ ಸೀಸನ್  19 ಟ್ರೋಫಿಯು ಗೆದ್ದಿದ್ದಾರೆ.   

ಜೀ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸ ರಿ ಗ ಮ ಪ ಲಿಟ್ಲ್‌ ಚಾಂಪ್ಸ್‌ ಸೀಸನ್‌ 19  ಈಗಾಗಲೇ ಗ್ರ್ಯಾಂಡ್‌ ಫಿನಾಲೆ ಮುಗಿದಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಕರ್ನಾಟಕದ ಪ್ರತಿ  ಜಿಲ್ಲೆಗಳಿಗೆ ಹೋಗಿ ಆಡಿಷನ್‌ ಮಾಡಿ ಪ್ರತಿಭೆಗಳನ್ನುಆರಿಸಲಾಗುತ್ತದೆ. 

ಮೊದಲ ಹಂತದಲ್ಲಿ ಪ್ರತಿ ಜಿಲ್ಲೆಯಿಂದ 30 ಸ್ಪರ್ದಿಗಳನ್ನು ಆರಿಸಿ ಆ ಬಳಿಕ ವಾಹಿನಿಯ ಸ್ಟುಡಿಯೋದಲ್ಲಿ ಮೆಗ ಆಡಿಷನ್‌ ನಡೆಸಿ ಅಲ್ಲಿ ಉತ್ತಮ ಸ್ವರ್ದಿಗಳನ್ನು ಆರಿಸಲಾಗುತ್ತದೆ.  ಹಾಗೆಯೇ ಅದರಲ್ಲಿ ಸೆಲೆಕ್ಟ್‌ ಆದವರೇ ಪ್ರಗತಿ ಬಡಿಗೇರ್ . ಮೊದಲ ದಿನವೇ  ಹಂಸಲೇಖ, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಸೇರಿದಂತೆ ಎಲ್ಲಾ ಜ್ಯೂರಿಗಳ ಮನ ಗೆದ್ದಿದ್ದರು.

ಇದನ್ನೂ ಓದಿ: Aarti Mittal: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕಿರುತೆರೆ ನಟಿ ಅರೆಸ್ಟ್!

ಇದೀಗ ಮೊನ್ನೆ ನಡೆದ ಸ ರಿ ಗ ಮ ಪ ಲಿಟಲ್ ಚಾಂಪ್ ಸೀಸನ್ 19 ಗ್ರ್ಯಾಂಡ್ ಫಿನಾಲೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಪ್ರಗತಿ ಬಡಿಗೇ ಅವರು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಗ್ರಾಮದವಳಾದ ಈಕೆ ಪ್ರಸುತ್ತ ಕುಶಲನಗರದಲ್ಲಿ ತಮ್ಮ ಕುಟುಂಬದವರ ಜೊತೆ  ವಾಸವಾಗಿದ್ದಾರೆ. 

ಒಂದು ಪುಟ್ಟ ಹಳ್ಳಿಯಿಂದ ಬಂದವರು ಕುಟುಂಬದಿಂದಲೇ ಸಂಗೀತ ಕಲೆ ಅವರಿಗೆ ಒಲಿದು ಬಂದಿದೆ. ಪ್ರಗತಿ ಮಾತ್ರವಲ್ಲದೇ ಅವರ ತಂದೆ ಹಾಗೂ ತಂಗಿಯ ಸಿರಿ ಕಂಠ ಅಷ್ಟೇ ಮಧುರವಾಗಿದೆ.  

ಭವಿಷ್ಯದಲ್ಲಿ ಖ್ಯಾತ ಗಾಯಕಿ ಕನಸು ಕಂಡಿರುವ ಹಳ್ಳಿ ಪ್ರತಿಭೆಗೆ ಕೊನೆಗೂ  ಕೊಪ್ಪಳದ ಜನರ ಎದುರು ವೇದಿಕೆಯ ಮೇಲೆ ನಿರೂಪಕಿ ಅನುಶ್ರೀ ಒಂದು ಎರಡು ಕೌಂಟ್ ಡೌನ್ ಕೊಟ್ಟು ಸಂಗೀತದ ಮಹಾಗುರು ಎಂದೇ ಖ್ಯಾತಿ ಪಡೆದಿರುವ  ಹಂಸಲೇಖ ಅವರು  ಪ್ರಗತಿ ಹಾಗೂ ಶಿವಾನಿ ಇಬ್ಬರ ಸಂಗೀತ ಸ್ಪರ್ಧಿಗಳ ನಡುವೆ ಕೊನೆಗೂ ಪ್ರಗತಿ ಬಡಿಗೇರ್ ಅವರ ಕೈ ಮೇಲೆತ್ತಿ ವಿನ್ನರ್‌ ಎಂದು ಘೋಷಿಸಿದರು.  

ಇದನ್ನೂ ಓದಿ: Karisma Kapoor : ಈ 2 ಷರತ್ತು ಇಲ್ಲದಿದ್ರೆ.. ಅಭಿಷೇಕ್ ಬಚ್ಚನ್ ಪತ್ನಿಯಾಗುತ್ತಿದ್ರು ಕರಿಷ್ಮಾ ಕಪೂರ್‌!

ಸಂಗೀತದ ಮೂಲಕ ಎಲ್ಲರ ಮನೆಮಗಳಾಗಿರುವ ಸಂಗೀತವನ್ನು ಹೇಗೆ ಅಭ್ಯಾಸ ಮಾಡಬೇಂಕೆಂದು ರೇಡಿಯೋದಲ್ಲಿ ಬರುವ  ಹಾಡುಗಳನ್ನು ಕೇಳಿ ಪ್ರಾಕ್ಟೀಸ್‌ ಜೊತೆಗೆ ಇತ್ತಿಚೇಗೆ ಯೂಟುಬ್‌ ನೋಡ್ಕೊಂಡು ಕಲಿಯುತ್ತಿದ್ದಳಂತೆ. ಈಕೆಗೆ ಚಿಕ್ಕ ಹುಡುಗಿಯಿಂದಲೇ ಸಂಗೀತದ ಮೇಲೆ, ವ್ಯಾಮೋಹ ಹೊಂದಿದ್ದಳು.  

ವಿನ್ನರ್‌ ಪ್ರಗತಿಗೆ ಅವರಿಗೆ ಇಂದು ನಾಗರಾಜ್ ಮೆಂಟರ್‌ ಆಗಿದ್ದರು. ಆಕೆಯ ಗೆಲುವಿಗೆ ಕಾರಣವಾದ ಮೆಂಟರ್‌ ಕೂಡ ಸಂತಸ ವ್ಯಕ್ತ ಪಡಿಸಿದರು. ನಿರೂಪಕಿ ಅನುಶ್ರೀ ತೀರ್ಪುಗಾರರಾದ ವಿಜಯ ಪ್ರಕಾಶ್, ಹಂಸಲೇಖ, ಅರ್ಜುನ್ ಜನ್ಯ ಎಲ್ಲರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸದ್ಯ ಪ್ರಗತಿಗೆ ಬಡಿಗೇರ್ ಅವರಿಗೆ 21 ಲಕ್ಷ ರೂ. ಬೆಲೆ ಬಾಳುವ 30-40 ಸೈಟ್ ಹಾಗೂ 4 ಲಕ್ಷ ರೂಪಾಯಿಯ ಕ್ಯಾಶ್ ಸಿಕ್ಕಿದ್ದು,  ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರ್ ಕಡೆಯಿಂದ ಟ್ರೋಫಿ ನೀಡಲಾಗಿದೆ. ಜೊತೆಗೆ ಗಾನ ಕೋಗಿಲೆ ಚಿತ್ರಾ ಕೈ ಜೊತೆಗೆ ಮೈಕ್ ಇರುವ ನೆನಪಿನ ಕಾಣಿಕೆಯೂ ಸಿಕ್ಕಿದೆ. ಈ ವೇಳೆ ಮಾತನಾಡಿದ ಪ್ರಗತಿ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News