Kabzaa movie : ಕಬ್ಜ ಸಿನಿಮಾದ ದೊಡ್ಡ ಸುದ್ದಿ ಇಂದು ರಿವೀಲ್ ಆಗಿದೆ. ಸ್ಯಾಂಡಲ್ ವುಡ್ ನ ಮೂರು ಸೂಪರ್ ಸ್ಟಾರ್ ಗಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಪೇಂದ್ರ ಜೊತೆ ಸುದೀಪ್ ಸ್ಕ್ರೀನ್ ಶೇರ್ ಮಾಡಿರೋದು ಮಾತ್ರವಲ್ಲ, ಸೆಂಚುರಿ ಸ್ಟಾರ್ ಶಿವಣ್ಣ ಕಬ್ಜದಲ್ಲಿರೋದು ಪಕ್ಕಾ ಆಗಿದೆ. ಶಿವರಾಜ್ ಕುಮಾರ್ ಕೋವಿ ಹಿಡಿದು ಪೋಸ್ ಕೊಟ್ಟಿರೋ ಪೋಸ್ಟರ್  ಇದೀಗ ರಿವೀಲ್ ಆಗಿದೆ. ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ಇಂದು ಉತ್ತರ ಕೊಟ್ಟಿದೆ ಚಿತ್ರತಂಡ.ಇಂದು ಬೆಳಿಗ್ಗೆ 10 ಘಂಟೆಗೆ ಕಬ್ಜ ನಯಾ ಪೋಸ್ಟರ್ ರಿವೀಲ್ ಆಗಿದ್ದು ಫ್ಯಾನ್ಸ್.


COMMERCIAL BREAK
SCROLL TO CONTINUE READING

ಇದು ದೊಡ್ಮನೆ ಅಭಿಮಾನಿಗಳು ಸಂಭ್ರಮಿಸುವಂತೆ ಮಾಡಿರೋ ದೊಡ್ಡ ಸುದ್ದಿ. ಉಪೇಂದ್ರ...ಸುದೀಪ್ ಮಾತ್ರವಲ್ಲ ಶಿವಣ್ಣ ಕಬ್ಜದಲ್ಲಿ ಕೋವಿ ಹಿಡಿದು ಕಮಾಲ್ ಮಾಡಿದ್ದಾರೆ ಅನ್ನೋದು ನಿಜಕ್ಕೂ ಥ್ರಿಲ್ ಅನಿಸಿದೆ. ಮೂರು ಸ್ಟಾರ್ ಗಳನ್ನ ಒಂದೇ ಸಿನಿಮಾದಲ್ಲಿ ಸೇರಿಸಿರೋ ನಿರ್ದೇಶಕ ಆರ್ ಚಂದ್ರು ಬಗ್ಗೆ ಇದೀಗ ಗಾಂಧಿನಗರದಲ್ಲಿ ಸಖತ್ ಚರ್ಚೆ ಆಗುತ್ತಿದೆ.


ಇದನ್ನೂ ಓದಿ : Bhagya Lakshmi: ಭಾಗ್ಯಲಕ್ಷ್ಮಿ ಸೀರಿಯಲ್‍ನಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಗೊಂಬೆ - ಚಿನ್ನು ಎಂಟ್ರಿ


ಪ್ಯಾನ್ ಇಂಡಿಯಾ ಕಬ್ಜ ಸಿನಿಮಾಗೆ ಇಡೀ ಎಲ್ಲಾ ಇಂಡಸ್ಟ್ರಿ ಮತ್ತು ಸ್ಟಾರ್  ನಟನಟಿಯರು ಕೂಡ ಕಾದುಕುಳಿತಿದ್ದಾರೆ.ರವಿ ಬಸ್ರೂರ್ ಸಂಗೀತದ ಮೂಲಕ ದೊಡ್ಡ ಮಟ್ಟದಲ್ಲಿ  ಕಮಾಲ್ ಮಾಡ್ತಿದೆ ಕಬ್ಜ ಹಾಡು. ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 


'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ. 


ಇದನ್ನೂ ಓದಿ : Kiccha Sudeep : ಸುದೀಪ್ ಮುಂದಿನ ಚಿತ್ರದ ಬಗ್ಗೆ ಅನೂಪ್ ಭಂಡಾರಿ ಬಿಗ್‌ ಅಪ್‌ಡೇಟ್‌.!?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.