Shivarajkumar : ಪೈಲೆಟ್.. ಟ್ರೈನ್ ಮಾಸ್ಟರ್ ಲುಕ್ನಲ್ಲಿ ಸೆಂಚುರಿ ಸ್ಟಾರ್..ಇದು `ಕ್ಯಾಪ್ಟನ್ ಮಿಲ್ಲರ್` ಗೆಟಪ್ ಹೌದಾ..?
Shivarj Kumar in pilot train master look : ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸ್ಯಾಂಡಲ್ವುಡ್ನಲ್ಲಿ ಬ್ಯುಸಿ ಇರೋ ನಟರಲ್ಲಿ ಒಬ್ಬರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಹೊಸ ಗೆಟಪ್ ಫೋಟೊಗಳು ಹರಿದಾಡುತ್ತಿದ್ದು, ಅವುಗಳನ್ನು ಅಭಿಮಾನಿಗಳು `ಕ್ಯಾಪ್ಟನ್ ಮಿಲ್ಲರ್` ಗೆಟಪ್ ಅಂತ ವೈರಲ್ ಮಾಡುತ್ತಿದ್ದಾರೆ.
Dr. Shivarj Kumar : ಕೇವಲ ಕನ್ನಡದ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದ ನಟ ಶಿವರಾಜಕುಮಾರ್ ಇದೀಗ ತಮಿಳು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇನ್ನು ಈ ನಡುವೆ ಸೋಷಿಯಲ್ ಮಿಡಿಯಾದಲ್ಲಿ ಅವರ ಹೊಸ ಅವತಾರದ ಪೋಟೋಗಳು ಸಖತ್ ವೈರಲ್ ಆಗುತ್ತಿವೆ. ಅದೇ 'ಕ್ಯಾಪ್ಟನ್ ಮಿಲ್ಲರ್' ಗೆಟಪ್ ಎಂದು ಅಭಿಮಾನಿಗಳು ಊಹಿಸಿದ್ದಾರೆ.
ಇನ್ನು ಈ ಪೋಟೋಗಳು ಪ್ರೇಕ್ಷಕರಿಗೆ ಸಖತ್ ಇಷ್ಟ ಆಗಿವೆ, ಆದರೆ ಈ ಗೆಟಪ್ ಯಾವ ಸಿನಿಮಾಗಾಗಿ ಅನ್ನೋ ಪ್ರಶ್ನೆ ಎಲ್ಲ ಅಭಿಮಾನಿಗಳದ್ದು. ಸದ್ಯ ಶಿವಣ್ಣನ ಮೂರು ಸಿನಿಮಾಗಳು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಅದೇ ಒಂದು ಸಿನಿಮಾದಲ್ಲಿನ ಗೆಟಪ್ ಇರಬಹುದಾ..? ಎಂಬ ಅನುಮಾನವೂ ಇದೆ.
ಇದನ್ನೂ ಓದಿ-Katerra : 'ಕಾಟೇರ' ಶೂಟಿಂಗ್ ವೇಳೆ ದರ್ಶನ್ ಕಾಲಿಗೆ ಪೆಟ್ಟು..ಏನಿದು ಘಟನೆ..?
ಖಂಡಿತ ಅಲ್ಲ...ಈ ಎರಡೂ ಗೆಟಪ್ ಸಿನಿಮಾದಲ್ಲ. ಸೆಂಚುರಿ ಸ್ಟಾರ್ ಕೇವಲ ಸಿನಿಮಾಗಳಲ್ಲಿ ಮಾತ್ರ ಬ್ಯೂಸಿಯಾಗಿಲ್ಲ. ಜಾಹೀರಾತುಗಳಲ್ಲೂ ನಟಿಸುತ್ತಿದ್ದಾರೆ. ಹೌದು ಶಿವಣ್ಣ ಈಗಾಗಲೇ ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸದ್ಯ ಪೈಲೆಟ್ ಹಾಗೂ ಟ್ರೈನ್ ಮಾಸ್ಟರ್ ಲುಕ್ ಕೊಟ್ಟಿರೋದು ಸಹ ಜಾಹೀರಾತಿಗಾಗಿಯೇ ಎಂದು ಮತ್ತೊಂದಿಷ್ಟು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.
ವೈರಲ್ ಆಗುತ್ತಿರುವ ಪೋಟೋಗಳಲ್ಲಿ ಶಿವಣ್ಣ ತೊಟ್ಟಿರೋ ಶರ್ಟ್ ಮೇಲೆ ಶಿವರಾಜ್‌ಕುಮಾರ್ ಅಂತಲೇ ಇದೆ. ಆದ್ದರಿಂದ ಅದು ಯಾವುದೇ ಸಿನಿಮಾದ ಗೆಟಪ್ ಆಗಿರಲು ಸಾಧ್ಯವಿಲ್ಲ. ಜೊತೆಗೆ ಟ್ರೈನ್ ಮಾಸ್ಟರ್ ಲುಕ್‌ನಲ್ಲೂ ಸೆಂಚುರಿ ಸ್ಟಾರ್ ಖಡಕ್ ಆಗಿ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ-ನಂಬಿಕೆ ಸುಳ್ಳಾಗಿಸಿದ್ದಕ್ಕೆ ಧನ್ಯವಾದ...'ಹಾಸ್ಟೆಲ್ ಹುಡುಗರಿಗೆ' ರಾಜ್ ಬಿ ಶೆಟ್ಟಿ ಸಂದೇಶ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.