Shivarajkumar : ಸಿನಿಮಾಗಳಲ್ಲಿ ಅಪ್ಪು ಫೋಟೋ ಹಾಕಲೇಬೇಕು ಅನ್ನೋದನ್ನ ಕಡ್ಡಾಯ ಮಾಡ್ಬೇಡಿ..!
Shivarajkumar on appu photo : ಸ್ಯಾಂಡಲ್ವುಡ್ ಸಿನಿ ಪ್ರೇಕ್ಷಕರ ನೆಚ್ಚಿನ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನದ ನಂತರ ಅಪ್ಪು ಫೋಟೋವನ್ನು ರಿಲೀಸ್ ಆಗುವ ಪ್ರತಿ ಸಿನಿಮಾಗಳ ಆರಂಭದಲ್ಲಿ ಹಾಕಲಾಗುತ್ತಿದೆ. ಇನ್ನು ಈ ಕುರಿತು ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಗರಂ ಆಗಿದ್ದಾರೆ.. ಶಿವಣ್ಣ ಹೇಳಿದ್ದೇನು.. ಇಲ್ಲಿದೆ ನೋಡಿ..
Shivarajkumar : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ದೈಹಿಕವಾಗಿ ಇಲ್ಲದಿದ್ದರೂ, ಅವರ ನೆನೆಪು ಮಾತ್ರ ಅಜರಾಮರ. ಇಂದಿಗೂ ಇಲ್ಲೋ ಎಲ್ಲೋ ಹೋಗಿದ್ದಾರೆ ಬರ್ತಾರೆ ಅಪ್ಪು.. ಅಂತ ಅನಿಸುತ್ತೆ. ಅಷ್ಟರ ಮಟ್ಟಿಗೆ ವೀರ ಕನ್ನಡಿಗ ಕರುನಾಡಿದ ಜನ ಮನದಲ್ಲಿ ನೆಲೆಸಿದ್ದಾರೆ.
ಇನ್ನು ಅಪ್ಪು ಅಗಲಿಕೆಯ ನಂತರ ಬಿಡುಗಡೆಯಾಗುತ್ತಿರುವ ಪ್ರತಿ ಸಿನಿಮಾದ ಪ್ರಾರಂಭದಲ್ಲಿ ಅವರ ಫೋಟೋ ಹಾಕಿ ಗೌರವ ನಮನ ಸಲ್ಲಿಸಲಾಗುತ್ತಿದೆ. ಇದೇ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಕುರಿತು ದೊಡ್ಮನೆ ಹಿರಿ ಮಗ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ವಿಶ್ವ ಸುಂದರಿ 2024ʼ ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಸುಂದರಿ..! ಭಾರತ..?
ಬಿಡುಗಡೆಯಾಗುವ ಎಲ್ಲಾ ಸಿನಿಮಾಗಳಲ್ಲಿ ಅಪ್ಪು ಫೋಟೋ ಹಾಕಲೇಬೇಕು ಎಂಬುದನ್ನು ಕಡ್ಡಾಯಗೊಳಿಸಬೇಡಿ. ಪೋಟೋ ಹಾಕಿದ್ರೆ ಮಾತ್ರ ಗೌರವ ಕೊಟ್ಟಂತಾಗಲ್ಲ. ಅದು ಮನಸ್ಸಿನಲ್ಲಿ ಇರಬೇಕು. ಹಾಗಿದ್ರೆ ಅಪ್ಪಾಜಿ, ವಿಷ್ಣು ಸರ್, ಅಂಬರೀಶ್ ಸರ್, ಶಂಕರ್ನಾಗ್ ಫೋಟೋ ಹಾಕಬೇಕಾಗುತ್ತೆ. ಫೋಟೋ ಹಾಕುವುದು ಸರಿಯಲ್ಲ, ಅವರ ನೆನಪುಗಳು ಯಾವತ್ತಿದ್ದರೂ ಶಾಶ್ವತ ಅಂತ ಶಿವಣ್ಣ ಹೇಳಿದ್ದಾರೆ.
ಅಪ್ಪು ಫೋಟೋ ಹಾಕಿ, ವಿ ಮಿಸ್ ಯೂ ಅಪ್ಪು, ವಿ ಲವ್ ಯೂ ಅಪ್ಪು ಅನ್ನೋದೆಲ್ಲ ಬೇಡ. ಅವನನ್ನು ನಾವು ಹೃದಯದಿಂದ ಪ್ರೀತಿಸಬೇಕು. ಫೋಟೋ ಹಾಕಿದ್ರೆ ಮಾತ್ರ ಲವ್ ಅಲ್ಲ ಅಂತ ಶಿವರಾಜ್ಕುಮಾರ್ ಅವರು ಹೇಳಿದರು. ಸಧ್ಯ ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.