Miss world 2024 : ʼವಿಶ್ವ ಸುಂದರಿ 2024ʼ ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಸುಂದರಿ..! ಭಾರತ..?

Miss World 2024 : ಮುಂಬೈನಲ್ಲಿ ನಡೆದ ವಿಶ್ವ ಸುಂದರಿ-2024 ಸ್ಪರ್ಧೆಯನ್ನು ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಗೆದ್ದರು. ಭಾರತದ ಸಿನಿ ಶೆಟ್ಟಿ..? ಇಲ್ಲಿದೆ ಮಾಹಿತಿ..

Written by - Krishna N K | Last Updated : Mar 10, 2024, 11:55 AM IST
  • ಕ್ರಿಸ್ಟೈನಾ ಪಿಸ್ಕೋವಾ ವಿಶ್ವ ಸುಂದರಿ-2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
  • 28 ವರ್ಷಗಳ ನಂತರ ಭಾರತದಲ್ಲಿ ನಡೆದಿದ್ದ ವಿಶ್ವ ಸುಂದರಿ 2024 ಸ್ಪರ್ಧೆ.
  • ಈ ಸ್ಪರ್ಧೆಗಳಲ್ಲಿ, 112 ದೇಶಗಳ ಸೌಂದರ್ಯ ರಾಣಿಯರು ಸ್ಪರ್ಧಿಸಿದರು.
Miss world 2024 : ʼವಿಶ್ವ ಸುಂದರಿ 2024ʼ ಕಿರೀಟ ಮುಡಿಗೇರಿಸಿಕೊಂಡ ಜೆಕ್ ಗಣರಾಜ್ಯದ ಸುಂದರಿ..! ಭಾರತ..? title=
Krystyna Pyszkova

Miss World 2024 winner : ಜೆಕ್ ಗಣರಾಜ್ಯದ ಕ್ರಿಸ್ಟೈನಾ ಪಿಸ್ಕೋವಾ ವಿಶ್ವ ಸುಂದರಿ-2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 28 ವರ್ಷಗಳ ನಂತರ ಭಾರತದಲ್ಲಿ 71 ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯನ್ನು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಆಯೋಜಿಸಿತ್ತು. ಈ ಸ್ಪರ್ಧೆಗಳಲ್ಲಿ, 112 ದೇಶಗಳ ಸೌಂದರ್ಯ ರಾಣಿಯರು ಸ್ಪರ್ಧಿಸಿದರು. 

ಕ್ರಿಸ್ಟಿನಾ ಪಿಸ್ಕೋವಾ (ಜೆಕ್ ರಿಪಬ್ಲಿಕ್), ಯಾಸ್ಮಿನ್ ಅಜಿಟೌನ್ (ಲೆಬನಾನ್), ಆಚೆ ಅಬ್ರಹಾಮ್ಸ್ (ಟ್ರಿನಿಡಾಡ್ ಮತ್ತು ಟೊಬಾಗೊ) ಮತ್ತು ಲೆಸಾಗೊ ಚೊಂಬೊ (ಬೋಟ್ಸ್‌ವಾನಾ) ಅಗ್ರ-4ರಲ್ಲಿದ್ದಾರೆ. ಈ ಸ್ಪರ್ಧೆಗಳಲ್ಲಿ ಭಾರತ ಮತ್ತೊಮ್ಮೆ ನಿರಾಸೆಯನ್ನು ಎದುರಿಸಿತು. ನಮ್ಮ ನಾಡನ್ನು ಪ್ರತಿನಿಧಿಸುತ್ತಿರುವ ಕನ್ನಡದ ಭಾಮಾ ಸಿನಿಶೆಟ್ಟಿ ಟಾಪ್-8ಕ್ಕೆ ಸೀಮಿತರಾದರು.

ಇದನ್ನೂ ಓದಿ: ವಿರಾಟ್‌ ಕೊಹ್ಲಿ ಜೊತೆ ಡೇಟಿಂಗ್‌.. ಒಂದು ಚಿತ್ರಕ್ಕೆ 5 ಕೋಟಿ ಚಾರ್ಜ್.. ಸದ್ಯ ಫ್ಲಾಪ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಸೌತ್‌ ನಟಿ ಈಕೆ! 

2022ರ ಫೆಮಿನಾ ಮಿಸ್ ಇಂಡಿಯಾ ವಿಜೇತೆ ಸಿನಿಶೆಟ್ಟಿ ಈ ವಿಶ್ವ ಸುಂದರಿ ಸ್ಪರ್ಧೆಯಲ್ಲಿ 8ನೇ ಸ್ಥಾನ ಪಡದುಕೊಂಡರು. ಕ್ರಿಸ್ಟಿನಾ ವಿನ್ನರ್ ಹಾಗೂ ಲೆಬನಾನ್ ನ ಅಜಯ್ಟೌನ್ ರನ್ನರ್ ಅಪ್ ಆದರು. ಇನ್ನು ಇದೇ ಕಾರ್ಯಕ್ರಮದಲ್ಲಿ ರಿಲಯನ್ಸ್ ಫೌಂಡೇಶನ್ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ನೀತಾ ಅಂಬಾನಿ ʼಮಿಸ್ ವರ್ಲ್ಡ್ ಹ್ಯುಮಾನಿಟೇರಿಯನ್ʼ ಪ್ರಶಸ್ತಿಯನ್ನು ಸ್ವೀಕರಿಸಿದರು. 

ವಿಶ್ವ ಸುಂದರಿ ಸಂಸ್ಥೆಯ ಅಧ್ಯಕ್ಷೆ ಜೂಲಿಯಾ ಮೊರ್ಲೆ ಅವರು ನೀತಾ ಅಂಬಾನಿಯವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯನ್ನು ನೀತಾ ಅಂಬಾನಿ ಅವರ ಚಾರಿಟಿ ಚಟುವಟಿಕೆಗಳಿಗಾಗಿ ನೀಡಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News