ಶಿವಣ್ಣ ಎಂದೇ ಜನಮಾನಸದಲ್ಲಿ ಖ್ಯಾತಿರಾಗಿದ್ದಾರೆ ಸೆಂಚ್ಯುರಿ ಸ್ಟಾರ್ ಶಿವರಾಜ್ ಕುಮಾರ್. ಆದರೆ ಶಿವರಾಜ್‌ ಕುಮಾರ್‌ ಅವರ ನಿಜವಾದ ಹೆಸರು ಬೇರೆಯೇ ಆಗಿದೆ. ಪಾಸ್ ಪೋರ್ಟ್, ಬ್ಯಾಂಕ್ ಅಕೌಂಟ್, ಸರಕಾರಿ ದಾಖಲಾತಿಗಳಲ್ಲಿ ಅವರ ನಿಜವಾದ ಹೆಸರನ್ನೇ ಬಳಸುತ್ತಾರೆ. ಈ ವಿಷಯವನ್ನು ಸ್ವತಃ ಶಿವರಾಜ್‌ ಕುಮಾರ್‌ ಅವರೇ ಬಹಿರಂಗ ಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೊಸ 'ಹೋಪ್'..!‌ ಇದು ಸ್ನೂಕರ್ ಪಟು ಚೊಚ್ಚಲ ಕನಸು..!


ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಿವರಾಜ್‌ ಕುಮಾರ್‌, "ನನ್ನ ನಿಜವಾದ ಹೆಸರು ಶಿವರಾಜ್ ಕುಮಾರ್ ಅಲ್ಲ. ಹೆಸರು ಬದಲಾಯಿಸಿಕೊಂಡಿದ್ದು, ಈ ವಿಚಾರ ಸಿನಿರಂಗದ ಕೆಲವರಿಗೆ ಗೊತ್ತಿದೆ. ಆದರೆ, ಸಾರ್ವಜನಿಕರಿಗೆ ಈ ವಿಷಯವೇ ಗೊತ್ತಿರಲಿಲ್ಲ. ನನ್ನ ಹೆಸರು ನಾಗರಾಜು ಶಿವಪುಟ್ಟಸ್ವಾಮಿ" ಎಂದು ಹೇಳಿದ್ದಾರೆ. 


ಈ ಹಿಂದೆ ನಟಸಾರ್ವಭೌಮ ಡಾ.ರಾಜ್ ಕುಮಾರ್ ಅದೆಷ್ಟು ಬಾರಿ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡುವಾಗ, ತಮ್ಮ ತಂದೆಯ ಹೆಸರನ್ನೇ ಶಿವಣ್ಣನಿಗೆ ಇಟ್ಟಿದ್ದು ಎಂದು ಹೇಳಿದ್ದರು.  


ಇದನ್ನೂ ಓದಿ: 'ತೂತು ಮಡಿಕೆ' ರಿಲೀಸ್‌ಗೆ ಕೌಂಟ್‌ಡೌನ್‌ ಶುರು..! ಇದು ಹೊಸಬರ ಹೊಸ ಪ್ರಯತ್ನ..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.