ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೊಸ 'ಹೋಪ್'..!‌ ಇದು ಸ್ನೂಕರ್ ಪಟು ಚೊಚ್ಚಲ ಕನಸು..!

ಎಲ್ಲಾ ರೀತಿಯ ಕಥೆಗಳಿಗೂ ನ್ಯಾಯ ಒದಗಿಸುತ್ತಾ ಬಂದಿರುವ ಕನ್ನಡತಿ, ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಸಿಂಪಲ್‌ ಸುಂದರಿ ಶ್ವೇತಾ ಶ್ರೀವಾಸ್ತವ್ ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ.ಈ ಬಾರಿ ನಟಿ ಶ್ವೇತಾ 'ಕೆಎಎಸ್' ಅಧಿಕಾರಿಯಾಗಿ ಗ್ರ್ಯಾಂಡ್‌ ಎಂಟ್ರಿ ಕೊಡುತ್ತಿದ್ದಾರೆ.

Written by - Malathesha M | Edited by - Manjunath N | Last Updated : Jul 6, 2022, 11:32 PM IST
ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೊಸ 'ಹೋಪ್'..!‌ ಇದು ಸ್ನೂಕರ್ ಪಟು ಚೊಚ್ಚಲ ಕನಸು..! title=

ಬೆಂಗಳೂರು: ಎಲ್ಲಾ ರೀತಿಯ ಕಥೆಗಳಿಗೂ ನ್ಯಾಯ ಒದಗಿಸುತ್ತಾ ಬಂದಿರುವ ಕನ್ನಡತಿ, ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಸಿಂಪಲ್‌ ಸುಂದರಿ ಶ್ವೇತಾ ಶ್ರೀವಾಸ್ತವ್ ಹೊಸ ಪ್ರಯೋಗಕ್ಕೆ ಕೈಹಾಕಿದ್ದಾರೆ.ಈ ಬಾರಿ ನಟಿ ಶ್ವೇತಾ 'ಕೆಎಎಸ್' ಅಧಿಕಾರಿಯಾಗಿ ಗ್ರ್ಯಾಂಡ್‌ ಎಂಟ್ರಿ ಕೊಡುತ್ತಿದ್ದಾರೆ.

ಪ್ರಾಮಾಣಿಕ ಅಧಿಕಾರಿ ವರ್ಗಾವಣೆ, ಅದರ ಸುತ್ತ ನಡೆಯುವ ರಾಜಕೀಯ ಆಟ ಹಾಗೂ ಕಾನೂನು ಹೋರಾಟದ ಕಥಾಹಂದರವನ್ನು 'ಹೋಪ್'ನಲ್ಲಿ ಕಟ್ಟಿಕೊಡಲಾಗಿದೆ.ಟ್ರೇಲರ್ ಮೂಲಕವೇ 'ಹೋಪ್' ಸಿನಿಮಾ ಸಾಕಷ್ಟು ಹೋಪ್‌ ಕ್ರಿಯೇಟ್‌ ಮಾಡಿತ್ತು. ಇದೀಗ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್‌ ಶುರುವಾಗಿದ್ದು, ಜುಲೈ 8 ಕ್ಕೆ ಬರುತ್ತಿದೆ.No description available.

ಸ್ನೂಕರ್ ಆಟಗಾರ್ತಿ ಕನಸು:

ಅಷ್ಟಕ್ಕೂ 'ಹೋಪ್' ಸಿನಿಮಾ ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಅವರ ಬಹುದೊಡ್ಡ ಕನಸು.'ಹೋಪ್' ಸಿನಿಮಾಗೆ ಕಥೆ ಬರೆದು ನಿರ್ಮಾಣ ಕೂಡ ಮಾಡಿದ್ದಾರೆ ವರ್ಷಾ.ಇದರ ಜೊತೆಗೆ ಸ್ಯಾಂಡಲ್‌ವುಡ್‌ನಿಂದ ಸ್ವಲ್ಪ ಗ್ಯಾಪ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾಸ್ತವ್ ಕಂಬ್ಯಾಕ್ ಮಾಡುತ್ತಿದ್ದಾರೆ. ಈ ಹಿಂದೆ ಜಲ್ವಂತ ಸಿನಿಮಾ ನಿರ್ದೇಶಿಸಿದ ಅಂಬರೀಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಎಸ್.ಹಲ್ಲೇಶ್ ಕ್ಯಾಮರಾ ವರ್ಕ್ ಮಾಡಿದ್ದು, ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದಾರೆ.No description available.

ಸುಮಲತಾ ಅಂಬರೀಷ್, ಪ್ರಮೋದ್ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ತಾರಾಗಣ ಕೂಡ ಸ್ಯಾಂಡಲ್‌ವುಡ್‌ ಸಿನಿಪ್ರಿಯರಿಗೆ ಮನರಂಜನೆಗೆ ಜೊತೆಗೆ ಉತ್ತಮ ಸಂದೇಶ ನೀಡಲಿದೆ. ಒಟ್ಟಾರೆ ಮತ್ತೊಂದು ಮಹಿಳಾ ಪ್ರಧಾನ ಚಿತ್ರಕ್ಕೆ 'ಹೋಪ್' ಸಿನಿಮಾ ಸಾಕ್ಷಿಯಾಗಲಿದೆ.ಇದರ ಜೊತೆಗೆ ಪ್ರಾಮಾಣಿಕ ಅಧಿಕಾರಿ ವರ್ಗಾವಣೆ, ಅದರ ಸುತ್ತ ನಡೆಯುವ ರಾಜಕೀಯ ಆಟ ಹಾಗೂ ಕಾನೂನು ಹೋರಾಟದ ಕಥಾಹಂದರವನ್ನು ಕೆತ್ತಿ ಕೊಡಲಾಗಿದೆ. ಇದು ಸಾಮಾಜಿಕ ಸಂದೇಶವನ್ನು ನೀಡಲಿದ್ದು, ಕನ್ನಡಿಗರು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News